ಶಿಲ್ಪಾ ಶೆಟ್ಟಿ ಆಸ್ತಿ ಮುಟ್ಟುಗೋಲು; ತಕ್ಷಣ ತುಳುನಾಡಿನ ದೈವದ ಬಳಿ ಓಡೋಡಿ ಬಂದ ದಂಪತಿಗಳು
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮೂಲತಃ ಮಂಗಳೂರಿನವರು. ಆ ಕಾರಣಕ್ಕೆ ಆಗಾಗ ಮಂಗಳೂರಿಗೆ ಬರುತ್ತಿರುತ್ತಾರೆ. ಈ ಬಾರಿ ಸದ್ದು ಸುದ್ದಿ ಇಲ್ಲದೆ ತನ್ನ ತವರುನಾಡಿಗೆ ಬಂದಿದ್ದು, ಫೋಟೋಗಳು ವೈರಲ್ ಆಗಿದೆ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿಯ ಒಂದು ಬಂಗಲೆ ಮತ್ತು ಅವರ ಪತಿ ರಾಜ್ ಕುಂದ್ರಾಗೆ ಸೇರಿದ ಅಪಾರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.
ಒಟ್ಟು 97.79 ಕೋ. ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ತಾಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.
ನಟಿ ಶಿಲ್ಪಾ ಶೆಟ್ಟಿ, ಅವರ ಮಕ್ಕಳಾದ ವಿಯಾನ್ ಕುಂದ್ರಾ ಮತ್ತು ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಮತ್ತು ಕುಟುಂಬದವರು ಜೊತೆಯಲ್ಲಿದ್ದರು. ಜೀವನದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನು ನಿವಾರಣೆ ಮಾಡಿಕೊಡಿ ಎಂದು ದೈವದ ಮುಂದೆ ಶಿಲ್ಪಾ ಶೆಟ್ಟಿ ಪ್ರಾರ್ಥನೆ ಮಾಡಿದರು.
ಮೂಲತಃ ಮಂಗಳೂರಿನವರಾಗಿರುವುದರಿಂದ ನಟಿ ಶಿಲ್ಪಾ ಕುಟುಂಬದ ಕಾರ್ಯಕ್ರಮಗಳು, ಭೂತಾರಾದನೆ, ದೈವ ದೇವರುಗಳ ಆರಾಧನೆ, ಆಗಾಗ ಬರುತ್ತಿರುತ್ತಾರೆ. ಈ ಸಲುವೂ ದೈವಾರಾಧನೆಗೆ ಬಂದಿದ್ದಾರೆ. ಇನ್ನು ಮಂಗಳೂರಿಗೆ ಬಂದರೆಂದರೆ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.