ಡಿಕೆಶಿ ಮುಂದೆ ರೊ.ಚ್ಚಿಗೆದ್ದ ಶಿವಣ್ಣ, ಖಡಕ್ ಆಗಿ ಮರು ಉತ್ತರ ಕೊಟ್ಟ ರಂಗಣ್ಣ

 | 
Hx

ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ ಕುಟುಂಬದ ಹಿರಿಯ ಮಗ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಇದನ್ನ ನಯವಾಗಿ ತಿರಸ್ಕರಿಸಿದ ನಟ ಶಿವರಾಜ ಕುಮಾರ್ ರಾಜಕೀಯಕ್ಕೆ ಬೇರೆಯವರ ಹೆಸರನ್ನು ಸೂಚಿಸಿದ್ದಾರೆ.

ಈಡಿಗ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಅವರು ನಟ ಶಿವ ರಾಜ್‌ಕುಮಾರ್ ಅವರಿಗೆ ಟಿಕೆಟ್ ಕೊಡುತ್ತೇನೆ ಎಂದರು. ಇದಕ್ಕೆ ವೇದಿಕೆಯಲ್ಲಿಯೆ ಪ್ರತಿಕ್ರಿಯಿಸಿದ ಶಿವಣ್ಣ, ನಮ್ಮ ತಂದೆ ನಮಗೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಹೇಳಿ ಕೊಟ್ಟಿದ್ದಾರೆ. ನಾನು ನಟನೆಯನ್ನೇ ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದ ಶಿವ ರಾಜ್‌ಕುಮಾರ್, ನಮ್ಮಪ್ಪ ನಟನೆ ಹೇಳಿಕೊಟಿದ್ದಾರೆ. ನಮಗೆ ಅದೊಂದೆ ಸಾಕು. ನನಗೆ ರಾಜಕೀಯ ಬೇಡ, ಬಂಗಾರಪ್ಪನವರ ಪುತ್ರಿ ನಮ್ಮನೆ ಸೊಸೆಯಾಗಿದ್ದಾರೆ. ಅವರು ಎಂದಿಗೂ ನನ್ನನ್ನು ಪಾಲಿಟಿಕ್ಸ್‌ಗೆ ಬರುವಂತೆ ಕೇಳಿಲ್ಲ. ಪತ್ನಿ ಗೀತಾ ಈಗಾಗಲೇ ರಾಜಕಾರಣದಲ್ಲಿದ್ದಾರೆ. 

ಅವರು ಬೇಕಾದರೆ ಎಲೆಕ್ಷನ್‌ನಲ್ಲಿ ನಿಲ್ಲುತ್ತೇನೆ ಎಂದರೆ, ನಾನು ಬೆಂಬಲು ಕೊಡಲು ಸಿದ್ಧನಿದ್ದೇನೆ. ಅವರ ಜೊತೆ ನಾನು ನಿಂತಿರುತ್ತೇನೆ ಎಂದು ಪತ್ನಿಯ ಹೆಸರು ಸೂಚಿಸಿದರು. ನಾನು ಹುಟ್ಟುವುದಕ್ಕೆ ಮೊದಲೇ ಈಡಿಗರ ಸಂಘ ಸ್ಥಾಪನೆಯಾಗಿದೆ. ಇಂದು ಬೃಹತ್ ಸಮಾವೇಶ ನಡೆದಿದೆ. ಯಾವುದೇ ಕಾರ್ಯಕ್ರಮವಾದರೂ ಸಹಿತ ಭಿನ್ನಾಭಿಪ್ರಾಯಗಳು ಬಂದಿರುತ್ತವೆ. 

ಕಾರ್ಯಕ್ರಮವನ್ನು ಯಾರು, ಹೇಗೆ ಮಾಡಿದರೂ ಎಂಬುದಕ್ಕಿಂತ ಯಾರಿಗಾಗಿ ಮಾಡಿದರು ಎಂಬುದು ಮುಖ್ಯವಾಗುತ್ತದೆ. ಈಗಾಗಲೇ ಸಮುದಾಯ ಮುಖಂಡರು, ಶಾಸಕರು, ಸಂಘದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂದು ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ವೇಳೆ ಕಾಂಗ್ರೆಸ್‌ ನಲ್ಲಿರುವ ಪತ್ನಿ ಗೀತಾಗಾಗಿ ನಟ ಶಿವರಾಜ್ ಕುಮಾರ್ ಅವರು ಚಾಮರಾಜನಗರ ಸೇರಿದಂತೆ ವಿವಿಧ ಕಡೆ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು. ಆಗಲೂ ಸಹ ಅವರು ಗೀತಾ ಅವರ ಬೆನ್ನೆಲುಬಾಗಿ ನಿಂತಿದ್ದರು. 

ಹಿಂದಿನಿಂದಲೂ ಡಾ.ರಾಜ್ ಕುಟುಂಬದ ಸದಸ್ಯರಿಗೆ ರಾಜಕೀಯಕ್ಕೆ ಒಂದಲ್ಲ ಒಂದು ಸಂದರ್ಭದಲ್ಲಿ ಆಹ್ವಾನ ಇಡುತ್ತಲೆ ಬರಲಾಗಿದೆ. ಆದರೆ ರಾಜ್‌ ಕುಮಾರ್ ಮಕ್ಕಳು ವಿನಮ್ರತೆಯಿಂದ ಪಾಲಿಟಿಕ್ಸ್‌ಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.