ಸಂಪೂರ್ಣ ಬದಲಾದ ಶಿವರಾಜ್ ಕುಮಾರ್ ಮಗಳು, ಸಿನಿಮಾ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಸಾಧ್ಯತೆ
Updated: Jun 27, 2025, 15:08 IST
|

ನಿವೇದಿತಾಗೆ ಮದುವೆ ಯಾವಾಗ? ಶಿವಣ್ಣ ಅವರ ಮಗಳು ಲವ್ ಮ್ಯಾರೇಜಾ ಅಥವಾ ಅರೇಂಜ್ಡ್ ಮ್ಯಾರೇಜಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿವೇದಿತಾ ಅವರು, ಸದ್ಯಕ್ಕೆ ಅದೆಲ್ಲಾ ಏನು ಪ್ಲ್ಯಾನ್ ಇಲ್ಲ. ಎಲ್ಲರಿಗೂ ತಮ್ಮ ಡ್ರೀಮ್ ಬಾಯ್ ಹೇಗಿರಬೇಕು ಅನ್ನೋ ಕನಸಿರತ್ತೆ ಅದರಂತೆ ನನಗೂ ಇದೆ. ಸಿಂಪಲ್ ಆಗಿ ಇರ್ಬೇಕು. ಹೀಗೆ ಇರ್ಬೇಕು ಅಂತ ಏನು ಇಲ್ಲ. ನಮ್ಮ ಕೆಲಸಕ್ಕೆ ಸಪೋರ್ಟ್ ಮಾಡಬೇಕು ಎಂದು ತಮ್ಮ ಮದುವೆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

ಪ್ರತಿಯೊಬ್ಬರಿಗೂ ಸೆಲೆಬ್ರಿಟಿ ಕ್ರಶ್, ಫೇವರಿಟ್ ನಟ - ನಟಿಯರು ಇರೋದೆಲ್ಲಾ ಕಾಮನ್. ಆ ಬಗ್ಗೆ ಮಾತನಾಡಿದ ಅವರು, ಖಂಡಿತವಾಗಿಯೂ ಆ ರೀತಿ ತುಂಬಾ ಇದೆ. ಕನ್ನಡದಲ್ಲಿ ನಂಗೆ ಯಶ್ ಅಂದ್ರೆ ತುಂಬಾ ಇಷ್ಟ. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಮತ್ತು ಒಂದು ಟೈಮ್‌ನಲ್ಲಿ ಸಲ್ಮಾನ್ ಖಾನ್ ಅಂದ್ರೆ ನನಗೆ ತುಂಬಾ ಇಷ್ಟ ಇತ್ತು. ಕನ್ನಡದಲ್ಲಿ ಎಲ್ಲಾ ನಟರನ್ನು ಮೀಟ್ ಮಾಡಿದ್ದೀನಿ. ರಜನಿಕಾಂತ್, ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದೀನಿ ಎಂದು ಸಂದರ್ಶನದಲ್ಲಿ ನಿವೇದಿತಾ ಅವರು ಹೇಳಿದರು.
ಕನ್ನಡದ ಚಿತ್ರರಂಗ ಸ್ಟಾರ್ ನಟರು ಇರಲಿ, ಇಲ್ಲ ಪರಭಾಷೆಯ ನಟರು ಇರಲಿ. ತಮ್ಮ ಹೊಸ ಪ್ರಾಜೆಕ್ಟ್ ರಿಲೀಸ್ ಆಗುತ್ತಿದೆ ಅಂದರೆ, ಅವರ ಮನೆಗೆ ಬಂದು ಭೇಟಿ ಕೊಟ್ಟು ಆಶೀರ್ವಾದವನ್ನು ಪಡೆಯುತ್ತಾರೆ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಬೇರೆ ಇಂಡಸ್ಟ್ರಿಯವರು ಬಂದು ತಂದೆಯವರ ಆಶೀರ್ವಾದ ಪಡೆದು ಹೋಗುತ್ತಾರೆ. ತಂದೆಗೆ ಅವರದ್ದೇ ಆದ ಅನುಭವವಿದೆ. ಓಪನ್ ಆಗಿ ಇರುತ್ತಾರೆ. ಒಪ್ಪಿಕೊಳ್ಳುವ ವ್ಯಕ್ತಿ. ಹಾಗಾಗಿ ಸೆಲೆಬ್ರೆಟಿಗಳು ನಮ್ಮ ಮನೆ ಬರುತ್ತಾರೆ. ಇದನ್ನು ನೋಡಿದಾಗ ಖುಷಿಯಾಗುತ್ತದೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023