// custom css

ಪಟಾಕಿಯ ಎಡವಟ್ಟಿಗೆ ಅಂಗಡಿ ಭಸ್ಮ, ಈ ಘಟನೆಗೆ ಕಾರಣ ಯಾರು ಗೊತ್ತಾ

 | 
ರರಪ

ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಸಂಭವಿಸಿದ ಪಟಾಕಿ ದುರಂತದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿದೆ. ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದರು. ತಡರಾತ್ರಿಯಲ್ಲಿಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಗಿರಿ ಬಿನ್ ವೇಡಿಯಪ್ಪನ್, ಸಚಿನ್‌ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್. 

ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್,ಪ್ರಭಾಕರನ್ ಬಿನ್ ಗೋಪಿನಾಥ್, ಲಿಕೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ವಿವರ ತಿಳಿದಿಲ್ಲ. ಓದಲು ದುಡ್ಡು ಹೊಂದಿಸಲು ಕೆಲಸಕ್ಕೆ ಬಂದಿದ್ದರು ಎನ್ನಲಾಗುತ್ತಿದೆ.
ಮುಖ್ಯ ರಸ್ತೆಯಲ್ಲಿಯೇ ಇರುವ ಮಳಿಗೆ ಹಾಗೂ ಗೋಡೌನ್‌ಗೆ ಪಟಾಕಿ ಇಳಿಸುವಾಗ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿತ್ತು. 

ಪಟಾಕಿ ಸಿಡಿದಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದವರು ಮೃತಪಟ್ಟಿದ್ದರು. ಹಲವರಿಗೆ ಗಾಯವಾಗಿತ್ತು. ಕೆಲವರು ಗೋಡೌನ್‌ನಲ್ಲಿಯೇ ಸಿಲುಕಿಕೊಂಡಿರುವ ಅನುಮಾನವೂ ಇತ್ತು. ಶನಿವಾರ ರಾತ್ರಿ ಬೆಂಕಿ ನಂದಿಸಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ಶವ ದೊರೆತಿದೆ ಎನ್ನಲಾಗುತ್ತಿದೆ.

ಪಟಾಕಿ ದುರಂತದಲ್ಲಿ ಗುರುತು ಹಚ್ಚಲಾಗದ ರೀತಿಯಲ್ಲಿ ದೇಹಗಳು ಸುಟ್ಟು ಹೋಗಿವೆ. ಮರಣೋತ್ತರ ಪರೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ. ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆಯೂ ದುರಂತ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿತ್ತು.

ಘಟನೆಗೆ ಕಾರಣರಾದ ಆರೋಪಿ ಲೈಸೆನ್ನದಾರ ವಿ ರಾಮಸ್ವಾಮಿ ರೆಡ್ಡಿ, ಜಾಗದ ಮಾಲೀಕರಾದ ಜಯಮ್ಮ ಹಾಗೂ ಪುತ್ರ ಅನೀಲ್ ರೆಡ್ಡಿ, ಅಂಗಡಿ ಮ್ಯಾನೇಜರ್ ಲೋಕೇಶ್, ಮಳಿಗೆ ನಡೆಸುತ್ತಿದ್ದ ರಾಮಸ್ವಾಮಿ ಪುತ್ರ ನವೀನ್ ರೆಡ್ಡಿ ವಿರುದ್ದ ಮೊಕದ್ದಮೆಯನ್ನೂ ಅತ್ತಿಬೆಲೆ ಪೊಲೀಸರು ದಾಖಲಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.