ಭಾಗ್ಯ ಗೆ ಒದೆಯಲು ಹೋಗಿ ಬ್ಯಾಕ್ ಡ್ಯಾಮೇಜ್ ಮಾಡಿಕೊಂಡ ಶ್ರೇಷ್ಠ, ಬಿದ್ದುಬಿದ್ದು ನೆಗಾಡಿದ ತಾಂಡವ್

 | 
Nj
 ಧಾರವಾಹಿ, ಸಿನಿಮಾ ಶೂಟಿಂಗ್​ ಸಮಯದಲ್ಲಿ ಏನೇನೋ ಅನಾಹುತ ಸಂಭವಿಸುವುದು ನಡೆದೇ ಇರುತ್ತದೆ. ಸಿನಿಮಾ ಆಗಲಿ, ಸಿರಿಯಲ್​  ಆಗಲೀ, ಶೂಟಿಂಗ್​ ಮಾಡುವ ಭರದಲ್ಲಿ ಅನಾಹುತ ಆಗುವುದು ಸಹಜ. ಇದೇ ರೀತಿ ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್​ ಶೂಟಿಂಗ್​ ನಲ್ಲಿ ನಡೆದ ಹಾಸ್ಯದ ಘಟನೆ ಇದೀಗ ವೈರಲ್ ಆಗಿದೆ.
ಹೌದು ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ಅವರು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್​ ಅವರನ್ನು ಒದೆಯಲು ಹೋದ ಸಮಯದಲ್ಲಿ ಜಾರಿಬಿದ್ದು ಹಿಂಬದಿ ಪೆಟ್ಟು ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಅನ್ನು ಸುಷ್ಮಾ ಅವರು ಹಾಸ್ಯದ ರೂಪದಲ್ಲಿ ಶೇರ್​ ಮಾಡಿದ್ದಾರೆ. ಅಷ್ಟಕ್ಕೂ ಕಾವ್ಯಾ ಅವರಿಗೆ ಭಾರಿ ಏನೂ ಸಂಭವಿಸಿಲ್ಲ.  ಅವರು ಕೂಡ ಜೋರಾಗಿ ನಕ್ಕಿದ್ದಾರೆ. ಏನಾಯಿತು ಎಂದು ತಾಂಡವ್​ ಪಾತ್ರಧಾರಿ ಸುದರ್ಶನ್​ ಅವರು ತಮಾಷೆಯ ಮೂಲಕ ವಿವರಿಸಿದ್ದಾರೆ.
https://www.instagram.com/reel/DASZPQevJYN/?igsh=MWhqcnNhbjZhYjMxMQ==
ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರೋ ಸುಷ್ಮಾ ಆಗಾಗ್ಗೆ ಶೂಟಿಂಗ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಶ್ರೇಷ್ಠಾಳ ಮೇಲೆ ಬೂದಿ ಎರೆಚುವ ಶೂಟಿಂಗ್​ ಸಮಯದ ಮೇಕಿಂಗ್​ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಇದರಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯ ಗೌಡ ಅವರ ಮೇಲೆ ಬೂದಿ ಎರೆಚಲಾಗಿತ್ತು. ಅದೆಲ್ಲಾ ಕಣ್ಣಿಗೂ ಬಿದ್ದು ಕಾವ್ಯಾ ಪಡಬಾರದ ಕಷ್ಟ ಪಟ್ಟರು. 
ಅಷ್ಟೇ ಅಲ್ಲದೇ ಡ್ರೆಸ್​ ಒಳಗೆ ಎಲ್ಲಾ ಬೂದಿ ಸೇರಿಕೊಂಡು ಪೇಚಿಗೂ ಸಿಲುಕಿದರು. ಒಂದು ದೃಶ್ಯವನ್ನು ಪ್ರೇಕ್ಷಕರ ಮುಂದೆ ತೋರಿಸುವ ಮುನ್ನ ನಟ-ನಟಿಯರು ಪಡುವ ಕಷ್ಟಗಳ  ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಲ್ಲಿ ಸುಷ್ಮಾ ಮಾಮೂಲಿನಂತೆ ಜೋಕ್​ ಮಾಡುತ್ತಲೇ ಇದ್ದರೂ, ಬೂದಿ ಮೆತ್ತಿಕೊಂಡ ಕಾವ್ಯಾ ಪರದಾಡಿದ್ದರು. ಈಗಲೂ ಕಾವ್ಯಾ ಬಿದ್ದು ನೋವಾಗಿದ್ದರೂ ನಗುತ್ತಿದ್ದಾರೆ. ಜನರೂ ಕೂಡ ಅವರ ಪರಿಪಾಟಲು ನೋಡಿ ನಕ್ಕು ಕಾಮೆಂಟ್ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.