ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಪ್ರತಾಪ್ ಅವಸ್ಥೆ ನೋಡಿ ಎದ್ದು ಬಿದ್ದು ನಗಾಡಿದ ಶೃತಿ ಹಾಗೂ ವೀಕ್ಷಕರು

 | 
ಗ

ಬಿಗ್ ಬಾಸ್ ಕನ್ನಡ 10 ಶೋ ಅಂತ್ಯವಾಗ್ತಿದ್ದಂತೆ ಡ್ರೋನ್ ಪ್ರತಾಪ್ ಅವರು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸ್ಪರ್ಧಿಯಾದರು. ಡ್ರೋನ್ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಬೇಕು, ಕಂಪೆನಿ ಬೆಳೆಸಬೇಕು ಎನ್ನುತ್ತಿದ್ದ ಪ್ರತಾಪ್ ಅವರು ಏಕಾಏಕಿ ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು ಅನೇಕರಿಗೆ ಆಶ್ಚರ್ಯ ಆಗಿತ್ತು.

ಬಿಗ್ ಬಾಸ್’ ಮನೆಯಲ್ಲಿ ಆರಂಭದಲ್ಲಿ ಸೈಲೆಂಟ್ ಆಗಿರುತ್ತಿದ್ದ ಪ್ರತಾಪ್ ಅವರು ಕೊನೆಯಲ್ಲಿ ಹೇಗೆಲ್ಲ ಡ್ಯಾನ್ಸ್ ಮಾಡಿದರು, ಡೈಲಾಗ್ ಹೊಡೆದರು ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅವರು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಹೇಗೆ ನಟಿಸುತ್ತಾರೆ ಎಂಬ ಕುತೂಹಲ ಅನೇಕರಿಗೆ ಇದೆ.

ಅಭಿನಯದ ಕಾಗುಣಿತ ಗೊತ್ತಿಲ್ಲದ ಡ್ರೋನ್ ಪ್ರತಾಪ್ ಅವರು ಮಾಟ ಮಂತ್ರ ಮಾಡುವವನ ವೇಷ ಹಾಕಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಆವಾಹಯಾಮಿ ಎನ್ನುವ ಪದ ಉಚ್ಛಾರಣೆ ಮಾಡಲು ಬಂದಿಲ್ಲ. ಆವಾಹ, ಆವು ಎಂದು ಪ್ರತಾಪ್ ಅವರು ಹೇಳಿದ್ದಾರೆ. ಇದನ್ನು ನೋಡಿ ನಟಿ ಶ್ರುತಿ, ಸಾಧುಕೋಕಿಲ, ಕೋಮಲ್ ಅವರು ನಕ್ಕಿದ್ದಾರೆ. ನಿಜಕ್ಕೂ ಪ್ರತಾಪ್ ಅವರಿಗೆ ಆವಾಹಯಾಮಿ ಎನ್ನೋಕೆ ಬಂದಿಲ್ವಾ? ಅಥವಾ ಈ ಸ್ಕಿಟ್‌ಗೋಸ್ಕರ ಬೇಕು ಅಂತ ಹೇಳಿರೋದಾ ಎಂಬ ಪ್ರಶ್ನೆ ಶುರುವಾಗಿದೆ.

ಇನ್ನು ಸಂಜನಾ ಆನಂದ್ ಅವರು ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಇದು ಮೊದಲ ಕಾಮಿಡಿ ಶೋ. ಈಗ ಅವರು ಈ ಶೋನಲ್ಲಿ ಡೈಲಾಗ್ ಕೂಡ ಮರೆತಿದ್ದಾರೆ. ಒಟ್ಟಿನಲ್ಲಿ ‘ಗಿಚ್ಚಿ ಗಿಲಿಗಿಲಿ ಸೀಸನ್ 3’ ರಿಯಾಲಿಟಿ ಶೋನಲ್ಲಿ ಹೊಸಬರು ಹೇಗೆಲ್ಲ ನಟಿಸಿದ್ದಾರೆ, ಡೈಲಾಗ್ ಹೇಳಿದ್ದಾರೆ ಎಂದು ನೋಡಲು ಈ ವಾರಾಂತ್ಯದ ಎಪಿಸೋಡ್ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.