ಸಂಗೀತ ವಿ ರುದ್ಧ ಧ್ವನಿ ಎತ್ತಿದ್ದಕ್ಕೆ ರೊ.ಚ್ಚಿಗೆದ್ದ ಶ್ರುತಿ ಮೇಡಂ, ಬಿಗ್ ಬಾಸ್ ಮನೆಯಲ್ಲಿ ರಣರಂಗ
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇದೀಗ 11ನೇ ವಾರದ ಅಂತ್ಯಕ್ಕೆ ಬಂದು ತಲುಪಿದ್ದು, ಎಂದಿನಂತೆ ಶನಿವಾರ ನಡೆಯಲಿರುವ ಕಿಚ್ಚನ ಪಂಚಾಯತಿಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಎಂಟ್ರಿಗೂ ಮುನ್ನವೇ ಇದೀಗ ಮನೆಯೊಳಗೆ ಬಿಗ್ ಬಾಸ್ ಸೀಸನ್ 3ರ ವಿಜೇತೆ ನಟಿ ಶ್ರುತಿ ನ್ಯಾಯಾಧೀಶೆಯಾಗಿ ಆಗಮಿಸಿದ್ದಾರೆ.
ಬೆಳಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಬಾಗಿಲಿನಿಂದ ಕನ್ನಡ ಚಿತ್ರರಂಗದ ಹಿರಿಯ ನಟಿ, ಶ್ರುತಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರನ್ನು ನೋಡುತ್ತಿದ್ದ ಹಾಗೆಯೇ ಮನೆಯ ಸದಸ್ಯರೆಲ್ಲರೂ ಅಚ್ಚರಿ ಹಾಗೂ ಖುಷಿಯಿಂದ ಕುಣಿದಾಡಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶ ಕುರ್ಚಿಯಲ್ಲಿ ಕೂತಿದ್ದಾರೆ.
ಒಬ್ಬೊಬ್ಬ ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ ಶ್ರುತಿ, ವಿನಯ್ ಅವರನ್ನು ಕರೆದು ಪ್ರಶ್ನಿಸಿದರು. ವಿನಯ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ, ವಾರವಿಡೀ ಮನೆಯ ಸದಸ್ಯರ ಜತೆಗೆ ಇನ್ನೊಂದು ರೀತಿ ಇರುತ್ತಾರೆ? ಎಂಬ ಪ್ರಶ್ನೆಗೆ ಸಂಗೀತಾ ತುಂಬ ಪ್ರಬಲವಾಗಿ ಹೌದು ಎಂದಿದ್ದಾರೆ.
ಅಷ್ಟೇ ಅಲ್ಲ, ಇಷ್ಟು ದಿನಗಳ ಕಾಲ ವಿನಯ್ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ನಮ್ರತಾ ಕೂಡ, ನನಗೂ ಹಾಗೇ ಅನಿಸುತ್ತದೆ ಎಂದಿದ್ದಾರೆ. ವಿನಯ್ ಸುದೀಪ್ ಸರ್ ಎದುರಿಗೆ ಧ್ವನಿತಗ್ಗಿಸಿ ಮಾತಾಡುತ್ತಾರೆ ಎಂದು ನಮ್ರತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್, ತಮ್ಮ ಎಂದಿನ ಉಡಾಫೆಯ ಧ್ವನಿಯಲ್ಲಿ, ಇವರ ಬಳಿ ನಾಟಕ ಮಾಡ್ಕೊಂಡು ನನಗೆ ಏನೂ ಆಗ್ಬೇಕಾಗಿಲ್ಲ ಎಂದಿದ್ದಾರೆ.
ಅವರ ಧ್ವನಿ ಬಗ್ಗೆ ಪ್ರತಿಕ್ರಿಯಿಸಿದ ಶ್ರುತಿ, ನನ್ನ ಬಳಿ, ನ್ಯಾಯಾಧೀಶರ ಬಳಿಯೇ ಏರುಧ್ವನಿಯಲ್ಲಿ ಮಾತಾಡ್ತೀರಾ? ಹೊರಗೆ ಕಳಸ್ತೀನಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಶ್ರುತಿ ಅವರು ಯಾವ ಸ್ಪರ್ದಿಯನ್ನು ಮನೆಗೆ ಕಳುಹಿಸ್ತಾರೆ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.