53ನೇ ಯೌವನಕ್ಕೆ ಕಾಲಿಟ್ಟಿದ್ದಕ್ಕೆ ಮನೆಯಲ್ಲಿ ಭರ್ಜರಿ ಸಿಹಿತಿಂಡಿ ಮಾಡಿ ಸವಿದ ಶ್ರುತಿ

 | 
Tuu

ಕೆಲ ದಿನಗಳ ಹಿಂದಷ್ಟೇ 53ನೇ ವಸಂತಕ್ಕೆ ಕಾಲಿಟ್ಟ  ಸ್ಯಾಂಡಲ್‌ವುಡ್‌ ಎವರ್‌ಗ್ರೀನ್‌ ಸುಂದರಿ ಸುಧಾರಾಣಿ. ಸ್ನೇಹಿತರ ಸರ್ಪ್ರೈಸ್ ಕೇಕ್, ಗಿಫ್ಟ್‌ ಮದ್ಯೆ  ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. 1986ರಲ್ಲಿ ಆನಂದ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸುಧಾರಾಣಿ. ಆಗಿನ್ನೂ ಹೈಸ್ಕೂಲ್ ಓದುತ್ತಿದ್ದ ನಟಿಯನ್ನು ಕನ್ನಡಿಗರು ಬಹು ಬೇಗ ಒಪ್ಪಿಕೊಂಡರು.

ಆಡು ಮುಟ್ಟದ ಸೊಪ್ಪಿಲ್ಲ. ಸುಧಾರಾಣಿ ನಟಿಸದ ನಟರಿಲ್ಲ ಎನ್ನುವಂತೆ ಮನೆ ದೇವ್ರು, ಮಿಡಿದ ಶ್ರುತಿ, ಆಸೆಗೊಬ್ಬ ಮೀಸೆಗೊಬ್ಬ, ಕಾವ್ಯ, ಮನಮೆಚ್ಚಿದ ಹುಡುಗಿ, ಅನುರಾಗ ಸಂಗಮ, ಪಂಚಮ ವೇದ, ಮಣ್ಣಿನ ದೋಣಿ, ಆಟೋ ಶಂಕರ್, ಮೈಸೂರ ಮಲ್ಲಿಗೆ, ಅವನೇ ನನ್ನ ಗಂಡ ಸೇರಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕೆಲ ದಿನಗಳ ಹಿಂದಷ್ಟೇ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

 ಸಿನಿ ಸ್ನೇಹಿತರಾದ ಶ್ರುತಿ ಹಾಗೂ ಮಾಳವಿಕಾ ಬಿಗ್ ಸರ್ಪ್ರೈಸ್‌ ನೀಡಿದ್ದಾರೆ. ಸುಧಾರಾಣಿ ಮನೆಯ ಗಾರ್ಡನ್‌ನಲ್ಲಿ ಶ್ರುತಿ ಹಾಗೂ ಮಳವಿಕಾ ಇಬ್ಬರೂ ಕೇಕ್‌ ಹಿಡಿದು ನಿಂತುಕೊಂಡು, ಕೊಡೆಯಿಂದ ಮುಖ ಕವರ್ ಮಾಡಿ ಕೊಂಡಿದ್ದಾರೆ.ಇಬ್ಬರನ್ನೂ ಕಂಡು ಸುಧಾರಾಣಿ ಸಂತೋಷದಿಂದ ಕುಣಿದಿದ್ದಾರೆ. ಸ್ನೇಹಿತೆಯರು ಎಲ್ಲರೂ ಸೇರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಇಬ್ಬರೂ ಸೇರಿ ಸುಧಾರಾಣಿಗೆ ಸುಂದರವಾದ ಸರ, ಹಾಗೂ ಹಳದಿ ಸಲ್ವಾರ್‌ ಗಿಫ್ಟ್ ನೀಡಿದ್ದಾರೆ.

ಈ ಸಂಭ್ರಮದಲ್ಲಿ ಸುಧಾರಾಣಿ ಪುತ್ರಿ ಹಾಗೂ ಶ್ರುತಿ ಪುತ್ರಿ ಗೌರಿ ಸೇರಿಕೊಂಡು ಹಾಡು ಹೇಳಿ ಸಂಭ್ರಮಿಸಿದ್ದಾರೆ. ಇತ್ತೀಚೆಗೆ ಸುಧಾರಾಣಿ, ಮಾಳವಿಕಾ ಮತ್ತು ಶ್ರುತಿ  ಈ ಮೂವರು ಎಲ್ಲೆಡೆ ಒಟ್ಟಿಗೇ ಕಾಣಿಸಿಕೊಳ್ಳುತ್ತಾರೆ. 1978ರಿಂದಲೂ ಬಾಲ್ಯನಟಿಯಾಗಿ ಬೆಳ್ಳಿ ತೆರೆ ಮೇಲೆ ತಮ್ಮದೇ ಛಾಪು ಮೂಡಿಸಿರುವ ಸುಧಾರಾಣಿ ಇಂದಿಗೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಡಾ.ರಾಜ್‌ಕುಮಾರ್, ಅನಂತ್ ನಾಗ್, ಅಂಬರೀಷ್, ವಿ.ರವಿಚಂದ್ರನ್ ಸೇರಿ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಕೀರ್ತಿ ಸುಧರಾಣಿಗೆ ಸೇರಿದೆ. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.