ಕೆ.ಶಿವರಾಮ್ ಅವರಿಗೆ ಅವಮಾನ ಮಾಡಿದ ಸಿದ್ದರಾಮಯ್ಯ; ರೊ.ಚ್ಚಿಗೆದ್ದ ಸಿನಿಮಾ ರಂಗ

 | 
ಕಗ

ಇತ್ತೀಚಿಗಷ್ಟೇ ಮರಣ ಹೊಂದಿದ ಕೆ.ಶಿವರಾಂ ಅವರ ಸಾಧನೆ ಕಡೆಗಣಿಸುವಂತದ್ದಲ್ಲ. ಯಾಕೆಂದರೆ ಇವರ ಸಾಧನೆ ಅಂತಹದ್ದು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದ ಹೆಗ್ಗಳಿಕೆ ಇವರದ್ದು. ಆದರೆ ಸರ್ಕಾರಕ್ಕೆ ಇವರ ಸಾಧನೆಯಾಗಲಿ..ಕಲಾಸೇವೆಯಾಗಲಿ..ಜನಸೇವೆಯಾಗಲಿ ಯಾವುದು ಕಾಣಲಿಲ್ಲ ಅ‌ನ್ನುವುದೇ ಸದ್ಯದ ದುರಂತ.

ಹೌದು ಅಸಲಿಗೆ ಕೆ.ಶಿವರಾಂ ಕೇವಲ ನಟ, ಐಎಎಸ್ ಅಧಿಕಾರಿ, ರಾಜಕಾರಣಿಯಾಗಿರಲಿಲ್ಲ. ಇವೆಲ್ಲದಕ್ಕೂ ಮೀರಿದ ವ್ಯಕ್ತಿಯಾಗಿದ್ದರು. ಛಲವಾದಿ ಜನಾಂಗದ ಶಕ್ತಯೂ ಆಗಿದ್ದರು. ಛಲವಾದಿ ಹೋರಾಟದ ಮುಂಚೂಣಿಯಲ್ಲಿದ್ದರು. ಹೀಗಾಗಿಯೇ ಅಂತ್ಯಕ್ರಿಯೆ ಛಲವಾದಿ ಮಹಾಸಭಾ ಆವರಣದಲ್ಲೇ ನಡೆಯಬೇಕು ಮತ್ತು ಸರ್ಕಾರ ಜಾಗ ನೀಡಿ ಅಂತಿಮ ವಿಧಾನ ಪೂರೈಸಲು ಅವಕಾಶ ಮಾಡಿಕೊಡಬೇಕೆಂದು ಬೆಳ್ಳಿಗ್ಗೆಯಿಂದನೇ ಮನವಿಯನ್ನು ಮಾಡಲಾಗಿತ್ತು‌.

ಛಲವಾದಿ ಸಮುದಾಯದವರ ಇಚ್ಚೆ ಯಂತೆ, ಕೆ ಶಿವರಾಂ ಅವರ ಅಂತ್ಯಕ್ರಿಯೆಯನ್ನ ಛಲವಾದಿ ಮಹಾಸಭಾಂಗಣದಲ್ಲಿ ಮಾಡಲು ಅನುಮತಿ ನೀಡಿ ಎಂಬ ಮನವಿಯನ್ನು ಸಮಸ್ತ ಛಲವಾದಿ ಜನಾಂಗದ ಪರವಾಗಿ ಕನ್ನಡದ ಕರಿಚಿರತೆ ದುನಿಯಾ ವಿಜಯ್ ಕೂಡಾ ಸರ್ಕಾರದ ಬಳಿ ಮಾಡಿಕೊಂಡರು. ನಟ ಕೆ. ಶಿವರಾಮ್​ ಚಿತ್ರರಂಗಕ್ಕೆ ಸೇರಿದವರು. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಕೊಡುಗೆ ನೀಡಿದ್ದವರು.

ಅಷ್ಟೇ ಅಲ್ಲ ತನ್ನ ಜೀವನ ಉದ್ಧಕ್ಕೂ ಬಡವರಿಗೆ ಸಹಾಯ ಮಾಡಿದವರು. ಇವರ ಅಂತ್ಯಕ್ರಿಯೆ ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ಮಾಡಬೇಕು.ಇದಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೂ ಕೆಲವು ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯಗೆ ಈ ವಿಷಯ ತಲುಪಿಸಿ ಒಂದು ಗ್ರೀನ್​ ಸಿಗ್ನಲ್​ ಕೊಡಿಸಿ ಎಂದು ಕೇಳಿಕೊಂಡಿದ್ದರು. ಆದರೆ ಸರ್ಕಾರದ್ದು ಮಾತ್ರ ಡೋಂಟ್ ಕೇರ್ ವ್ಯಕ್ತಿತ್ವ.

ರಾಜ್ಯ ಸರ್ಕಾರದ ಅನುಮತಿ ಆದೇಶಕ್ಕೆ ಕಾದು ಸುಸ್ತಾದ ಕೆ.ಶಿವರಾಂ ಕುಟುಂಬ ವರ್ಗ ಹಾಗೂ ಬೆಂಬಲಿಗರು ಕೊನೆಗೆ ಅನಿವಾರ್ಯವಾಗಿ ಬಿಡದಿಯ ತೋಟದಲ್ಲಿ ಕೆ.ಶಿವರಾಂ ಅವರ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿದರು. ಅವರ ತಾಯಿಯ ಪಕ್ಕದಲ್ಲಿಯೇ ಕೆ.ಶಿವರಾಂ ಅವರ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದರು. ರಾಜಕೀಯವನ್ನ ಪಕ್ಕಕ್ಕೆ ಇಟ್ಟು ಸರ್ಕಾರ ‌ಕೊನೆ‌ ಪಕ್ಷ ಪ್ರತಿಕ್ರಿಯೆಯನ್ನಾದರೂ ನೀಡಬಹುದಿತ್ತು. ಸಮಜಾಯಿಷಿ, ಸಬೂಬು‌ ನೀಡುವ ಪ್ರಯತ್ನವನ್ನಾದರೂ ಮಾಡಬಹುದಿತ್ತು ಎಂದಿದ್ದಾರೆ ನಟ ದುನಿಯಾ ವಿಜಯ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.