ಸಿದ್ದರಾಮಯ್ಯ ಕಣ್ಣು ಮುಚ್ಚಿ ಕೂತಿದ್ದಾರೆ, ಕನಾ೯ಟಕಕ್ಕೆ ಯೋಗಿನೇ ಬರಬೇಕು

 | 
ಹಗ೮

ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್  ಪುತ್ರಿ ನೇಹಾ ಕೊಲೆಗೆ ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದೀಗ ನೇಹಾ ಹಿರೇಮಠ್ ಕೊಲೆ  ಪ್ರಕರಣವನ್ನು ಮುಚ್ಚಿ ಹಾಕಲು ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ.

ಇತ್ತ ಬಿಜೆಪಿ ನಾಯಕರು  ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಷ್ಟು ಮಾತ್ರವಲ್ಲದೇ ನೇಹಾ ತಂದೆ ಸಹ ಸಿಎಂ ಸಿದ್ದರಾಮಯ್ಯ  ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಹಲವಾರು ಜನ ಉತ್ತರ ಪ್ರದೇಶದ ಸಿಎಂ ಯೋಗಿ ಇದ್ದಿದ್ದರೆ ಇಷ್ಟು ಹೊತ್ತಿನಲ್ಲಿ ಆಗಲೇ ಎನ್ಕೌಂಟರ್ ಮಾಡಿರುತ್ತಿದ್ದರು. ಅದನ್ನು ಬಿಟ್ಟು ತನಿಖೆಯ ವಿವರ ಎಂದೆಲ್ಲಾ ಕಣ್ಣೊರೆಸುವ ಮಾತನ್ನು ಆಡುತ್ತಿರಲಿಲ್ಲ. ಏನೇನು ನಡೆದಿದೆಯೋ ಎಲ್ಲವು ಕಣ್ಣ ಮುಂದಿದೆ.

ಅಷ್ಟಕ್ಕೂ ಏಪ್ರಿಲ್ 18ರಂದು ನೇಹಾ ಕ್ಲಾಸ್ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಎದುರಾದ ಫಯಾಜ್ ಚಾಕುವಿನಿಂದ 9 ಬಾರಿ ಇರಿದು ಕೊಲೆ ಮಾಡಿದ್ದನು. ಏಪ್ರಿಲ್ 19ರಂದು ಮರಣೋತ್ತರ ಶವಪರೀಕ್ಷೆ ನಡೆಸಿದ ಬಳಿಕ ನೇಹಾ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಆನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆದರೆ ಆ ನೋವಿಂದ ಪಾಲಕರು ಇನ್ನು ಹೊರಬಂದಿಲ್ಲ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.