ಬಿಗ್ ಬಾಸ್ ಮನೆಯಿಂದ ಸಿರಿ ಔಟ್, ಕಿಚ್ಚ ಸುದೀಪ್ ವಿರುದ್ಧ ರೊ.ಚ್ಚಿಗೆದ್ದ ವೀಕ್ಷಕರು

 | 
Ns

ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭವಾಗಿ ಭರ್ತಿ 85 ದಿನಗಳು ಕಳೆದಿವೆ. ಈವರೆಗೂ ಅನೇಕ ಮಂದಿ ಬಿಗ್ ಬಾಸ್ ಶೋನಿಂದ ಹೊರಬಿದ್ದಿದ್ದಾರೆ. ಸದ್ಯ ಮನೆಯ ಹಿರಿಯ ಸ್ಪರ್ಧಿ ಎನಿಸಿಕೊಂಡಿರುವ ನಟಿ ಸಿರಿ ಅವರು ಕೂಡ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ಹಲವು ಬಾರಿ ನಾಮಿನೇಟ್ ಆಗಿದ್ದ ಸಿರಿ, ಕೊನೆಗೂ ಬಿಗ್ ಬಾಸ್ ಶೋನಿಂದ ಹೊರನಡೆದಿದ್ದಾರೆ.

ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಸದ್ಯ ಅತ್ಯಂತ  ಮೃದು ಸ್ವಭಾವದ ಸ್ಪರ್ಧಿ ಎನಿಸಿಕೊಂಡಿದ್ದವರು ನಟಿ ಸಿರಿ. ಆದರೆ ಇದೀಗ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ವಾರ ಸಿರಿ ಅವರು ಸೇರಿದಂತೆ, ಸಂಗೀತಾ ಶೃಂಗೇರಿ, ವಿನಯ್ ಗೌಡ, ವರ್ತೂರು ಸಂತೋಷ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಸಂತು ಅವರು ನಾಮಿನೇಟ್ ಆಗಿದ್ದರು. 

ಅಂತಿಮವಾಗಿ ಸಿರಿ ಅವರಿಗೆ ಅತೀ ಕಡಿಮೆ ವೋಟ್ ಸಿಕ್ಕಿದ್ದು, ಹಾಗಾಗಿ ಅವರು ಶೋನಿಂದ ಹೊರಬಿದ್ದಿದ್ದಾರೆ.
ಸಿರಿ, ಸಂಗೀತಾ, ವಿನಯ್, ವರ್ತೂರು ಸಂತೋಷ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಸಂತು ಅವರಲ್ಲಿ ಒಬ್ಬೊಬ್ಬರನ್ನೇ ಸೇವ್ ಮಾಡಲಾಯಿತು. ಅಂತಿಮವಾಗಿ ಸಿರಿ, ಮೈಕಲ್, ವರ್ತೂರು ಸಂತೋಷ್ ಮಾತ್ರ ಉಳಿದುಕೊಂಡರು. ಈ ಮೂವರಲ್ಲಿ ವರ್ತೂರು ಸಂತೋಷ್ ಅವರನ್ನು ಸೇಫ್ ಮಾಡಲಾಯಿತು. 

ಕೊನೆಗೆ ಸಿರಿ ಮತ್ತು ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಮೈಕಲ್ ಸೇಫ್ ಆದರೆ, ಸಿರಿ ಅವರು ಶೋನಿಂದ ಹೊರಗೆ ಬರಬೇಕಾಯ್ತು. ವೀಕ್ಷಕರಿಂದ ಹೆಚ್ಚು ಪ್ರೀತಿ ಪಡೆದುಕೊಳ್ಳುವಲ್ಲಿ ಅವರು ವಿಫಲವಾದವರು. ನಟಿ ಸಿರಿ ಅವರು ಆರಂಭದಿಂದಲೂ ಎಲ್ಲರೊಂದಿಗೆ ಬೆರೆಯುವಲ್ಲಿ ವಿಫಲವಾದರು ಎನ್ನಬಹುದು. ಯಾರಿಗೂ ಹರ್ಟ್ ಆಗಬಾರದು ಎಂದು ತಮ್ಮ ಅಭಿಪ್ರಾಯಗಳನ್ನು ಬ್ಯಾಲೆನ್ಸ್ ಮಾಡುತ್ತಿದ್ದರು ಎಂಬ ಮಾತುಗಳು ವೀಕ್ಷಕರಿಂದಲೇ ಕೇಳಿಬಂದಿವೆ. 

ಇನ್ನು, ಉಳಿದವರಿಗೆ ಹೋಲಿಸಿದರೆ, ಟಾಸ್ಕ್‌ಗಳಲ್ಲಿ ಕೂಡ ಸಿರಿ ಅಷ್ಟೇನೂ ಅಗ್ರೇಸ್ಸಿವ್ ಆಗಿ ಆಡುತ್ತಿರಲಿಲ್ಲ. ಮನರಂಜನೆ ನೀಡುವಲ್ಲಿ ಹಿಂದೆ ಉಳಿದವರು ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ಅಭಿಪ್ರಾಯಗಳನ್ನು ಸ್ಟ್ರಾಂಗ್ ಆಗಿ ಹೇಳಲಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.