ಸೀತಾರಾಮ ಸೀರಿಯಲ್ ನಟನಿಗೆ ಪ್ರೀತಿಯಲ್ಲಿ ಮೋಸ; ಹಳೆ ಲವರ್ ನೆನೆದು ಕಣ್ಣೀರಿಟ್ಟ ಗಗನ್ ಚಿನ್ನಪ್ಪ

 | 
Hhh

ಸೀತಾ ರಾಮ ಸೀರಿಯಲ್ ಹಲವರ ಮೆಚ್ಚುಗೆಗೆ ಪಾತ್ರವಾಗಿರುವ ಧಾರಾವಾಹಿಯಾಗಿದೆ. ಸೀತಾರಾಮ ಸದ್ಯ ಕನ್ನಡ ಕಿರುತೆರೆಯ ಸೆನ್ಸಷೇನಲ್‌ ಧಾರಾವಾಹಿ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಸ್ಟೋರಿಗೆ ಮನಸೋಲದರಿಲ್ಲ ಎನ್ನುವಂತಾಗಿದೆ. ಧಾರಾವಾಹಿಯ ಹಾಡು ಹಾಗೂ ಪಾತ್ರಧಾರಿಗಳು ನೋಡುಗರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ಸೀತಾರಾಮ ಧಾರಾವಾಹಿ ಟಿಆರ್‌ಪಿ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಇದೆ.

ನಟ ಗಗನ್‌ ಚಿನ್ನಪ್ಪ, ಬಿಗ್‌ಬಾಸ್‌ ಕನ್ನಡ ಖ್ಯಾತಿಯ ವೈಷ್ಣವಿ ಗೌಡ ಹಾಗೂ ಡ್ರಾಮ ಜ್ಯೂನಿಯರ್ಸ್ ಖ್ಯಾತಿಯ ರಿತು ಸಿಂಗ್‌ ಸೀತಾರಾಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಮೂರು ಪಾತ್ರಗಳನ್ನು ವೀಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಇವರ ಖಾಸಗಿ ಜೀವನದ ಬಗ್ಗೆಯೂ ತಿಳಿಯುವ ಕುತೂಹಲ ಹಲವರಲ್ಲಿದೆ.

ಅದರಲ್ಲೂ ಮುಖ್ಯವಾಗಿ ಶ್ರೀರಾಮ್‌ ದೇಸಾಯಿ ಪಾತ್ರಧಾರಿ ಗಗನ್‌ ಚಿನ್ನಪ್ಪ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಕಿರುತೆರೆಯ ಹಿಟ್‌ ಧಾರಾವಾಹಿ ಮಂಗಳ ಗೌರಿಯಲ್ಲಿ ನಾಯಕ ನಟನಾಗಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗಗನ್‌ ಚಿನ್ನಪ್ಪ ಸೀತಾರಾಮ ಧಾರವಾಹಿಯಲ್ಲಿ ಬ್ಯುಸಿನೆಸ್‌ ಮೆನ್‌ ಆಗಿ ಸಖತ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಮನ ನಡೆ, ನುಡಿ, ಲುಕ್‌ಗೆ ಫಿದಾ ಆಗದವರಿಲ್ಲ. ಹೀಗಾಗಿ ಗಗನ್‌ ಚಿನ್ನಪ್ಪ ಅವರ ಖಾಸಗಿ ಜೀವನ ಅಂದ್ರೆ ಮದುವೆ, ಪ್ರೀತಿ, ಬ್ರೇಕಪ್‌ ಹೀಗೆ ಖಾಸಗಿ ವಿಚಾರಗಳನ್ನು ಅನೇಕರು ತಿಳಿಯಲು ಹುಡುತ್ತಿದ್ದಾರೆ. ತಮ್ಮ ಪ್ರೀತಿ, ಬ್ರೇಕಪ್‌ ಬಗ್ಗೆ ಸ್ವತಃ ಗಗನ್‌ ಚಿನ್ನಪ್ಪ ಮಾತನಾಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ರಿಲೇಷನ್​ಶಿಪ್​, ಲವ್, ಬ್ರೇಕಪ್‌ ಮದುವೆ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಅವರ ಬಗ್ಗೆ ಬರೆದ ನೋಟ್ ನಿಜ. 2021ರಲ್ಲಿ ನಾವು ಡೇಟಿಂಗ್ ಮಾಡುತ್ತಿದ್ದೆವು. ಆ ನಂತರ ನಮ್ಮಿಬ್ಬರ ಮಧ್ಯೆ ಬ್ರೇಕಪ್ ಆಯಿತು. ಯಾರೂ ಕೂಡಾ ಪರ್ಮನೆಂಟ್ ಅಲ್ಲ, 2021ರಲ್ಲಿ ನಾನು ಪೋಸ್ಟ್ ಮಾಡುವಾಗ ನಾನಷ್ಟು ಫೇಮಸ್ ಆಗಿರಲಿಲ್ಲ. ಹಾಗಾಗಿ ಅದು ಅಷ್ಟೋಂದು ಬೆಳಕಿಗೆ ಬಂದಿರಲಿಲ್ಲ. ಆಗ ಬರೆದ ನೋಟ್ ಈಗ ವೈರಲ್ ಆಗಿದೆ.

ಈಗ ನಾವು ಒಳ್ಳೆಯ ಗೆಳೆಯರು, ಆದರೆ ಟಚ್​ನಲ್ಲಿಲ್ಲ. ಸಿಕ್ಕಾಗ ಹಾಯ್‌-ಬಾಯ್‌ ಹೇಳುತ್ತೇವೆ. ಅದೆಲ್ಲವೂ ಜೀವನದ ಒಂದು ಭಾಗ ಅಷ್ಟೆ. ಫ್ರೆಂಡ್ಸ್ ಐ ಯ್ಯಾಮ್ ಸಿಂಗಲ್, ರೆಡಿ ಟು ಮಿಂಗಲ್ ಎಂದು ನಟ ಹೇಳಿದ್ದಾರೆ. ಈ ಮೂಲಕ ಗಗನ್ ಚಿನ್ನಪ್ಪ ಅವರು ತಾವು ಸಿಂಗಲ್ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.