ವಿನಯ್ ಜೊತೆ ಜಿಮ್ ವರ್ಕೌಟ್ ಮಾಡುತ್ತಿರುವ ಸ್ನೇಹಿತ್ ಹಾಗೂ ನಮ್ರತಾ

 | 
U

ಬಿಗ್ ಬಾಸ್ ಶೋ  ಮುಗಿದಿದ್ದರೂ ಕೂಡ ಬಿಗ್ ಬಾಸ್ ಸ್ಪರ್ಧಿಗಳ ಹವಾ ಕಮ್ಮಿಯಾಗಿಲ್ಲ. ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ವಿನಯ್  ಗುಂಪು ಭೇಟಿ ಕೊಟ್ಟಿದ್ದರು. ವಿನಯ್ ತಂಡದವರೇ ಆಗಿರುವ ಸ್ನೇಹಿತ್  ಮಾತ್ರ ಗೈರಾಗಿದ್ದರು. ಕೊನೆಗೂ ಸ್ನೇಹಿತ್ ಜೊತೆ ವಿನಯ್ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 

ಬಿಗ್ ಬಾಸ್ ಫಿನಾಲೆ ಮುಗಿದ್ಮೇಲೆ ಪಾಪರೆಡ್ಡಿಪಾಳ್ಯ ಗ್ಯಾಂಗ್ ಎಂದೇ ದೊಡ್ಮನೆಯಲ್ಲಿ ಖ್ಯಾತಿ ಪಡೆದಿದ್ದ ವಿನಯ್, ನಮ್ರತಾ, ರಕ್ಷಕ್ ಬುಲೆಟ್, ಮೈಕಲ್ ಅಜಯ್, ಪವಿ ಪೂವಪ್ಪ ಹಾಗೂ ಇಶಾನಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಬಳಿಕ ವಿನಯ್ ಗೌಡ, ನಮ್ರತಾ, ರಕ್ಷಕ್ ಬುಲೆಟ್  ಹಾಗೂ ಮೈಕಲ್ ಮೈಸೂರಿಗೆ ಭೇಟಿ ಕೊಟ್ಟಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿ, ದೇವಿಯ ದರ್ಶನ ಪಡೆದಿದ್ದರು. ಇಲ್ಲಿಯೂ ಕೂಡ ಸ್ನೇಹಿತ್ ಗೈರಾಗಿದ್ದರು. ಆಗ ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ ಸ್ನೇಹಿತ್ ಎಲ್ಲಿ? ಎಂದು.

ವಿನಯ್ ಗುಂಪಿನಿಂದ ಸ್ನೇಹಿತ್ ದೂರಾ ಆದ್ರಾ ಎಂಬ ವದಂತಿಗೆ ಈಗ ಸ್ಪಷ್ಟನೆ ಸಿಕ್ಕಿದೆ. ವಿನಯ್ ಮತ್ತು ಸ್ನೇಹಿತ್ ಜೊತೆಯಾಗಿ ವರ್ಕೌಟ್ ಮಾಡಿರುವ ವಿಡಿಯೋ ಹಾಕುವ ಮೂಲಕ ವದಂತಿಗಳಿಗೆ ಉತ್ತರ ಕೊಟ್ಟಿದ್ದಾರೆ. ‘ಸ್ನೇಹಿತನನ್ನು ಎಂದಿಗೂ ಬಿಡಬೇಡಿ’ ಎಂದು ವಿನಯ್ ಅಡಿಬರಹ ನೀಡಿದ್ದಾರೆ. ಹಾಗೂ ಬಾಚಿ ತಬ್ಬಿಕೊಂಡು ಫೋಟೋ ಕ್ಲಿಕ್ ಮಾಡಿದ್ದಾರೆ.

ಇಬ್ಬರ ವರ್ಕೌಟ್ ವಿಡಿಯೋ ನೋಡ್ತಿದ್ದಂತೆ ಸದಾ ಹೀಗೆ ಇರಿ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ನಮ್ರತಾ ಜೊತೆಗೆ ಸ್ನೇಹಿತ್‌ ಫ್ರೆಂಡ್‌ಶಿಪ್ ಬ್ರೇಕಪ್‌ ಆಗಿದೆ. ಅದು ವಿನಯ್‌ ಜೊತೆಗಿನ ಸ್ನೇಹಕ್ಕೂ ಎಫೆಕ್ಟ್‌ ಆಗಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಇತ್ತು. ಈಗವಿನಯ್ ಗುಂಪಿನಲ್ಲಿ ಸ್ನೇಹಿತ್ ಇಲ್ವಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.