ಕಾತಿ೯ಕ್ ಗೆ ಗಂಡ್ಸಾ ನೀನು ಎಂದು ಕೇಳಿದ್ದ ಸ್ನೇಹಿತ್, ವೀಕೆಂಡ್ ನಲ್ಲಿ ಸ್ನೇಹಿತ್ ಚಳಿ ಬಿಡಿಸಿದ ಕಿಚ್ಚ ಸುದೀಪ್

 | 
ರರ

 ಕೆಲ ದಿನಗಳ ಹಿಂದೆ ಸಂಚಿಕೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್​ ವಿರುದ್ಧ ಮನೆಮಂದಿ ರೊಚ್ಚಿಗೆದ್ದಿದ್ದು, ವ್ಯಕ್ತಿತ್ವವನ್ನು ಮಾತಿನಲ್ಲೇ ಚಿಂದಿ ಮಾಡಿದ್ದಾರೆ. ಮೌನವಾಗಿ ಚೇರಿನಲ್ಲಿ ಕುಳಿತಿರುವ ಕಾರ್ತಿಕ್​ ಮತ್ತು ಸಂಗೀತಾ ಎಷ್ಟೇ ನೋವಾಗುವಂತ, ಪ್ರಚೋದನಕಾರಿ ಮಾತುಗಳು ಕಿವಿಗೆ ಬಿದ್ದರೂ ಸಹ ಕಿಂಚಿತ್ತು ಸ್ಪಂದಿಸದೆ ಎದುರಿಸುತ್ತಿರುವುದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಮನೆಯ ಸ್ಪರ್ಧಿಗಳಾದ ವಿನಯ್​, ನಮ್ರತಾ ಮತ್ತು ಸ್ನೇಹಿತ್​ ಕಾರ್ತಿಕ್​ಗೆ ಹೀನಾಮಾನವಾಗಿ ನಿಂದಿಸಿದ್ದಾರೆ.

ವಿನಯ್​ ಮತ್ತು ನಮ್ರತಾ ಪೈಕಿ ಸ್ನೇಹಿತ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕಾರ್ತಿಕ್ ಗಂಡಸುತನದ ಬಗ್ಗೆಯೂ ಮಾತಾಡಿದ್ದರು.

‘ಏನೋ ಗಂಡಸುತನ, ಏನ್ ಮಾಡಿದೀಯಾ ಈ ಮನೆಗೆ ಬಂದು? ಮನೇಗ್ ಹೋಗಿ, ಸ್ಲೋ ಮೋಷನ್‌ನಲ್ಲಿ ನಿನ್ನ ನಾನು ಕುಸ್ತಿಯ ಅಖಾಡದಲ್ಲಿ ಹೊರಗೆ ಹಾಕಿದ್ದನ್ನು ನೋಡು, ಆಗ ಗೊತ್ತಾಗತ್ತೆ.ಇಲ್ಯಾವಳೋ ಕ್ರಶ್ ಅಂತೆ. ಇದ್ಯಾವ್ದೋ ಕ್ರಾಶ್ ಆದವಳ ಜತೆ ಓಡಾಡ್ತೀಯಾ? ಅಲ್ಲೇನ್ ನನ್ ಕಾಲ್ ನೋಡ್ತೀಯಾ? ನಿನ್ ಪೊಸಿಷನ್ ಇರೋದೂ ಅಲ್ಲೇ ಎಂದು ಸಿನಿಮೀಯ ಶೈಲಿಯಲ್ಲಿ ಕಾರ್ತಿಕ್‌ ಅವರನ್ನು ಹೀನಾಮಾನವಾಗಿ ನಿಂದಿಸಿದ್ದರು.

 ಸ್ನೇಹಿತ್ ಅವರು ಟಾಸ್ಕ್ ಆಡುವಾಗಲೇ ಕಾರ್ತಿಕ್, ತನಿಷಾ, ಸಂಗೀತಾ ಮೇಲೆ ಪರ್ಸನಲ್ ಅಟ್ಯಾಕ್ ಮಾಡಿದ್ದರು. ಈ ರೀತಿ ಕಂಟ್ರೋಲ್ ತಪ್ಪಿ ಮಾತಾಡಿರೋದು ಸ್ಪರ್ಧಿಗಳಿಗೂ, ವೀಕ್ಷಕರಿಗೂ ಬೇಸರ ತರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಸ್ನೇಹಿತ್ ಮಾತನ್ನು ವಿರೋಧಿಸುತ್ತಿದ್ದು, ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಕುರಿತಾಗಿ ಸ್ನೇಹಿತ ಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್ ಅವರು ಮಾತಿನ ಮೇಲೆ ಹಿಡಿತವಿರಲಿ ಬಾಯಿಗೆ ಬಂದಂತೆ ಮಾತಾಡೋದು ಅಲ್ಲ. ನೀವು ತನಿಶಾ ವಿಷಯದಲ್ಲಿ ಮಾತನಾಡಿದ್ದು ಒಂದಿಷ್ಟು ಸರಿ ಇಲ್ಲ ಎಂದು ಹೇಳಿ ಸ್ನೇಹಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.