ಬಿಗ್ಬಾಸ್ ಮುಗಿದ ನಂತರ ಕೆಲಸ ಇಲ್ಲದೇ ವಿನಯ್ ಗೌಡ ಮಗನ ಆಟ ಆಡುತ್ತಿರುವ ಸ್ನೇಹಿತ್

 | 
Bs

ಬಿಗ್ ಬಾಸ್ ವಿನಯ್ ಗೌಡ ಮತ್ತು ಸ್ನೇಹಿತ್ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಗಾಢವಾದ ಸ್ನೇಹ ಬೆಳೆಸಿಕೊಂಡಿದ್ದ ಈ ಸ್ನೇಹಿತರು ಹೊರಗಡೆ ಬಂದ್ಮೇಲೆ ಒಟ್ಟಾಗಿ ಓಡಾಡಲೇ ಇಲ್ಲ. ಮೈಕಲ್, ನಮ್ರತಾ, ರಕ್ಷಕ್  ಇವರೇ ಜೊತೆಗೆ ಇರ್ತಾ ಇದ್ದರು. ಇದನ್ನ ನೋಡಿ ಅನೇಕರು ಸ್ನೇಹಿತ್ ಎಲ್ಲಿ ಸ್ನೇಹಿತ್ ಎಲ್ಲಿ ಅಂತಲೇ ಕೇಳೋರು.

ಆದರೆ ಇದೀಗ ಸಡನ್ ಆಗಿಯೇ ಸ್ನೇಹಿತ್‌ ಮತ್ತು ವಿನಯ್ ಜೊತೆ ಜೊತೆಯಾಗಿಯೇ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಈ ಸ್ನೇಹಿತರು ತಮ್ಮ ದೈನಂದಿನ ಜಿಮ್‌ ವರ್ಕೌಟ್ ಟೈಮ್‌ನಲ್ಲಿಯೇ ಮುಖಾ-ಮುಖಿ ಆಗಿದ್ದಾರೆ. ಆದರೆ ಇಲ್ಲಿ ಸ್ನೇಹಿತ್ ವರ್ಕೌಟ್  ಮಾಡ್ತಿದ್ರೆ, ಲಿಫ್ಟಿಂಗ್ ಡೌನ್ ಆದಾಗ ವಿನ್ಯ ಗೌಡ ಬಂದು ಸ್ನೇಹಿತ್‌ಗೆ ಹೆಲ್ಪ್ ಮಾಡ್ತಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಮತ್ತು ವಿನಯನ್ ಸ್ನೇಹ ತುಂಬಾ ಸ್ಟ್ರಾಂಗ್ ಆಗಿಯೇ ಇತ್ತು. ಅದು ಪ್ರತಿಯೊಂದರಲ್ಲೂ ಕಾಣಿಸುತ್ತಲೇ ಇತ್ತು. ಆದರೆ ದೊಡ್ಮನೆಯಿಂದ ಹೊರ ಬಂದ್ಮೇಲೆ ಇವರ ಒಟ್ಟಿಗೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಇದರಿಂದ ಎಲ್ಲರಿಗೂ ಒಂದು ಫೀಲ್ ಆಗಿತ್ತು. ಬಿಗ್ ಮನೆಯ ಸ್ನೇಹ ಅಲ್ಲಿಯೇ ಬಿಟ್ಟು ಬಂದಂತೆ ಕಾಣಿಸುತ್ತಿದೆ ಅಂದುಕೊಂಡರು.

ಸೋಷಿಯಲ್ ಮೀಡಿಯಾದಲ್ಲಿ ಅನೇಕರು ನಿಮ್ಮ ಗುಂಪಿನಲ್ಲಿ ಸ್ನೇಹಿತ್ ಯಾಕಿಲ್ಲ ಅಂತಲೇ ಕೇಳಿದ್ದು ಇದೆ. ಆದರೆ, ಇದಕ್ಕೆ ಉತ್ತರ ಅನ್ನೋ ರೀತಿಯಲ್ಲಿಯೇ ಸ್ನೇಹಿತ್ ಮತ್ತು ವಿನಯ್ ಗೌಡ ಜಿಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟೊಟ್ಟಿಗೆ ವರ್ಕೌಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಸ್ನೇಹಿತ್ ಗೌಡ ವಿನಯ್ ಗೌಡ ಮಗನ ಜೊತೆ ಆಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.