ಗೊಂಬೆಯಂತಿರುವ ವರ್ಷಾಗೆ ಟಕ್ಕರ್ ಕೊಟ್ಟ ವರುಣ್, ಪ್ರೇಯಸಿಯ ನಿಜಮುಖ ಬಿಚ್ಚಿಟ್ಟ ಸೋಶಿಯಲ್ ಮೀಡಿಯಾ ಸ್ಟಾರ್

 | 
ಹ೩

ಖ್ಯಾತ ಯೂಟ್ಯೂಬರ್ಸ್, ಟಿಕ್ ಟಾಕ್ ಸ್ಟಾರ್ಸ್ ವರ್ಷಾ ಕಾವೇರಿ- ವರುಣ್ ಆರಾಧ್ಯ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ವರ್ಷಾ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದರು. ಈಗ ವರುಣ್ ಆರಾಧ್ಯ ಬ್ರೇಕಪ್ ಬಗ್ಗೆ ಮೌನ ಮುರಿದ್ದಾರೆ. ಬ್ರೇಕಪ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ರಿಯಾಕ್ಟ್ ಮಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ ನೀವು ವರ್ಷಾ ಕಾವೇರಿ- ನನಗೆ ತೋರಿಸಿದ ಸಪೋರ್ಟ್‌ಗೆ ತುಂಬಾ ವಂದನೆಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಲಹೆ ಮತ್ತು ದೃಷ್ಟಿಕೋನವಿದೆ, ಹೀಗಾಗಿ ನಮ್ಮ ನಿರ್ಧಾರವನ್ನು ನೀವು ಒಪ್ಪಿಕೊಂಡು ನಮಗೆ ಸಪೋರ್ಟ್ ಮಾಡಬೇಕು. ವರ್ಷಾ- ನಾನು ಪರಸ್ಪರ ತೀರ್ಮಾನ ಮಾಡಿಕೊಂಡು ದೂರ ಆಗಿರುವುದು ಇದಕ್ಕೆ ನಮ್ಮ ಸ್ನೇಹಿತರು ಅಥವಾ ನಮ್ಮ ಕುಟುಂಬದವರು ಕಾರಣವಲ್ಲ. 

ಅವರನ್ನು ಈ ವಿಚಾರದಲ್ಲಿ ಎಳೆಯಬೇಡಿ. ಒಳ್ಳೆಯ ರೀತಿಯಲ್ಲಿ ಸಂಬಂಧ ಶುರು ಮಾಡಿ ಒಳ್ಳೆಯ ರೀತಿಯಲ್ಲಿ ಅಂತ್ಯವಾಡುತ್ತಿದ್ದೀವಿ. ವರ್ಷಾ ಕಾವೇರಿ ಮುಂದಿನ ಕೆಲಸಗಳಿಗೆ ಒಳ್ಳೆಯದಾಗಲಿ ಎಂದು ಹೇಳಲು ಇಷ್ಟ ಪಡುತ್ತೀನಿ. ಇಲ್ಲಿಯತನಕ ನೀವು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ ಇನ್ನು ಮುಂದೆನೂ ಸದಾ ಇರಲಿ ಎಂದು ವರುಣ್ ಬರೆದುಕೊಂಡಿದ್ದಾರೆ. 

ಈ ಬೆನ್ನಲ್ಲೇ ನೆಟ್ಟಿಗರು ವರುಣ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವರ್ಷಾ ಗಿಫ್ಟ್‌ ಮಾಡಿದ ಬೈಕ್‌ನಲ್ಲಿ, ಡುಡ್ಡಿನಲ್ಲಿ ಶೋಕೆ ಮಾಡ್ತಿದ್ದೀರಾ. ಅದನ್ನು ಅವರಿಗೆ ವಾಪಾಸ್‌ ಕೊಡಿ. ಪ್ರೀತಿಗೆ ಮೋಸ ಮಾಡಿ ಇನ್ನೋಬ್ಬರ ಹಿಂದೆ ಹೋಗಿದ್ದೀರಾ ಥೂ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ವರುಣ್ ಬ್ರೇಕಪ್ ಬಗ್ಗೆ ಸಹೋದರಿ ಚೈತ್ರಾ ಆರಾಧ್ಯಗೂ ಪ್ರಶ್ನೆ ಮಾಡಿದ್ದರು. ಹಾಗಾಗಿ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. 

ಇಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ ಅವರಾಗಿಯೇ ನಿರ್ಧಾರ ತೆಗೆದುಕೊಂಡಿರುವುದು. ಈ ವಿಚಾರದಲ್ಲಿ ನಮ್ಮನ್ನು ದೂರಬೇಡಿ. ನಮ್ಮನ್ನು ಕೇಳಿ ಹೇಳಿ ಅವರಿಬ್ಬರು ಸಂಬಂಧ ಶುರು ಮಾಡಿಲ್ಲ ಅವರಿಬ್ಬರೇ ಸೃಷ್ಟಿಸಿ ಕೊಂಡಿರುವ ಪ್ರಪಂಚ ಮಾಡಿಕೊಂಡಿರುವ ದಾರಿ. ಅವರಿಬ್ಬರೂ ದೂರಾಗುತ್ತಿರುವು ಸರಿಯಲ್ಲ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. 

ಆದರೆ ಭವಿಷ್ಯದಲ್ಲಿ ಅವರೇ ಒಟ್ಟಿಗಿದ್ದು ಪರಸ್ಪರ ಖುಷಿ ಮತ್ತು ನೋವು ಹಂಚಿಕೊಳ್ಳಬೇಕು. ಅವರಿಬ್ಬರ ಮೇಲೆ ಯಾರೂ ದ್ವೇಷ ಸಾಧಿಸಬೇಡಿ. ಪ್ರತಿಯೊಬ್ಬರಿಗೂ ಪರ್ಸನಲ್ ಸಮಸ್ಯೆ ಇರುತ್ತದೆ ಪರ್ಸನಲ್ ಜೀವನ ಇರುತ್ತದೆ. ಎಂದು ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.