ಅಯೋಧ್ಯೆ ಶ್ರೀರಾಮನ ದರ್ಶನ ಮಾಡಲು 600 ಕಿ.ಮೀ ದೂರದಿಂದ ತಂದೆ ತಾಯಿಯನ್ನು ಹೊತ್ತುತಂದ ಮಗ

 | 
Hjs

ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಬಾಲಕರಾಮ ನೆಲೆಯಾಗಿದ್ದಾರೆ. ಈ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದತೂ ಪಕ್ಕಾ. ಈ ಕಣ್ಣುಗಳ ಕೆತ್ತನೆಯ ವೇಳೆ ತನಗಾದ ಅನುಭವವನ್ನು ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಚಂದವಾಗಿ ಹೇಳಿದ್ದಾರೆ.

ಕಣ್ಣಗಳನ್ನು ಗರ್ಭಗುಡಿ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್‌ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ ಎಂದು ಹೇಳಿದರು.

ಈ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿತ್ತು. ಈ ಸಮಯದಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಅಂತಾ ಕೇಳಬೇಕಿತ್ತು. ಆದರೆ ಅಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಭಯ ತಡೆದುಕೊಳ್ಳಲು ಆಗದೆ ಕೊನೆಗೆ ನನ್ನ ಸಹಪಾಠಿಗಳ ಜೊತೆ ಕಣ್ಣಿನ ಬಗ್ಗೆ ಹೇಳಿಕೊಂಡೆ ಎಂದರು.

ಪ್ರಭಾವಳಿಯ ತೀರ್ಮಾನವನ್ನು ನಾನೇ ಮಾಡಿದ್ದಾಗಿದೆ. ವಿಷ್ಣುವಿನ ಒಂದು ರೂಪ ಆಗಿರುವುದರಿಂದ ಪ್ರಭಾವಳಿಯಲ್ಲಿ ದಶಾವತಾರ ತಗೊಂಡೆ ಎಂದು ಹೇಳಿದರು.ಕೊಡುವ ಜವಾಬ್ದಾರಿಗಳನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕಲು ಎಂಬುದು ನನ್ನ ಮುಂದಿರುವ ಚಾಲೆಂಜ್‌ ಆಗಿದೆ. ಉನ್ನತ ಮಟ್ಟದಲ್ಲಿ ಹೇಗೆ ಕೆಲಸ ಮಾಡಿ ವಾಪಸ್ ಕೊಡಬಹುದು ಎಂಬುದಷ್ಟೇ ನನ್ನ ಯೋಚನೆಗಳಾಗಿವೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಪ್ರಪಂಚದ ಅತೀ ಅದೃಷ್ಟವಂತ ನಾನು ಅಂತಾ ಅರುಣ್‌ ಯೋಗಿರಾಜ್‌ ಹೇಳಿದರು. ನಮ್ಮ ಕುಟುಂಬ ಸಾಕಷ್ಟು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಅಷ್ಟು ದೊಡ್ಡ ದೇವಸ್ಥಾನಕ್ಕೆ ನಾನೇ ವಿಗ್ರಹ ಮಾಡಿಕೊಟ್ಟೆ ಎಂಬುದನ್ನು ನನಗೆ ನಂಬೋಕೆ ಆಗ್ತಿಲ್ಲ. ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನನಗೆ ಮಗುವನ್ನು ಅರಮನೆಗೆ ತಂದಂತೆ ಭಾಸವಾಗ್ತಿತ್ತು ಎಂದರು.