ಲೋಕ ಸಭೆಗೆ ದಾ.ಳಿ ಮಾಡಲು ನುಗ್ಗಿದ ಮಗ, ಸ್ವಂತ ತಂದೆ ಹೇಳಿದ ಮಾತಿಗೆ ಫಿದಾ ಆದ ಕನ್ನಡಿಗರು

 | 
Hd

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಭದ್ರತಾ ಸರಪಳಿ ಮುರಿದು ಲೋಕಸಭೆ ಪ್ರವೇಶಿಸಿದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದು ಭದ್ರತೆಯಲ್ಲಿನ ದೊಡ್ಡ ಲೋಪವನ್ನು ಎತ್ತಿಹಿಡಿಯುತ್ತದೆ. ಸದ್ಯ ಭದ್ರತಾ ಸಿಬ್ಬಂದಿ ಈ ಇಬ್ಬರನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ. 

ಲೋಕಸಭೆ ಪ್ರವೇಶಿಸಿದ ಇಬ್ಬರನ್ನೂ ಮನೋರಂಜನ್ ಮತ್ತು ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. 
ಅಮೋಲ್ ಮತ್ತು ನೀಲಂ ಎಂಬ ಇಬ್ಬರನ್ನು ಸಂಸತ್ತಿನ ಹೊರಗೆ ಬಂಧಿಸಲಾಗಿದೆ.ಮೂಲಗಳ ಪ್ರಕಾರ, ಎಲ್ಲಾ ನಾಲ್ಕು ಜನರು ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಮತ್ತು ನೀಲಂ ಫೇಸ್‌ಬುಕ್ ಸ್ನೇಹಿತರು. ವಿಚಾರಣೆ ವೇಳೆ ಓರ್ವ ಏನಾದರೂ ದೊಡ್ಡ ಕೆಲಸ ಮಾಡಬೇಕೆಂದು ನಾವು ಈ ರೀತಿ ಮಾಡಿದೆವು ಎಂದು ಪೊಲೀಸರಿಗೆ ತಿಳಿಸಿದ್ದಾನೆ. 

ಅಂದಹಾಗೆ ಇವರು ಶೂ ಹರಿದು ಅದರಲ್ಲಿ ಸ್ಪ್ರೇ ಬಚ್ಚಿಟ್ಟಿದ್ದರು ಎನ್ನಲಾಗಿದೆ. ದಿಲ್ಲಿಯ ಸಂಸತ್ ಭವನದ ಒಳಗೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರು ಯುವಕರಲ್ಲಿ ಮನೋರಂಜನ್ ಎಂಬಾತ ಮೈಸೂರು‌ ನಗರದ ನಿವಾಸಿಯಾಗಿದ್ದಾನೆ. ಮೈಸೂರು ನಗರದ ವಿಜಯನಗರ ನಿವಾಸಿ ದೇವರಾಜೇಗೌಡ ಮತ್ತು ಶೈಲಜ ದಂಪತಿಗಳ ಪುತ್ರ ಮನೋರಂಜನ್ ಎಂದು ತಿಳಿದು ಬಂದಿದೆ. 

ಮೂಲತಃ ಹಾಸನ‌ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನಾಗಿದ್ದು, ಇವರ ತಂದೆ ದೇವರಾಜೇಗೌಡ ಮೈಸೂರಿನ ವಿಕ್ರಾಂತ್ ಟೈರ್ಸ್ ಕಂಪನಿಯಲ್ಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.‌ 
ಮನೋರಂಜನ್ ತಂದೆ ದೇವರಾಜೇಗೌಡ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮದು ರೈತ ಕುಟುಂಬ. ಮಗ ಮನೋರಂಜನ್ ದೆಹಲಿ, ಬೆಂಗಳೂರು ಅಂತ ಆ ಕಡೆ, ಈ ಕಡೆ ಓಡಾಡುತ್ತಿದ್ದ. 

ಅವನು ಏನು ಮಾಡಿದ್ದಾನೆ ಅಂತ ಗೊತ್ತಿಲ್ಲ. ಪಿರಿಯಾಪಟ್ಟಣದ ವಿಜಯನಗರದಲ್ಲಿ ನನ್ನ ಮನೆ ಇರೋದು. ಅವನು ನಮ್ಮ ತೋಟಕ್ಕೆ ಬಂದು ಕೆಲಸ ಮಾಡುತ್ತಿದ್ದನು. ಈಗ ಏನಾಗಿದೆ ಎಂದು ಗೊತ್ತಿಲ್ಲ ಸಂಸತ್ ಭವನ ನಮ್ಮೆಲ್ಲರ ದೇಗುಲ, ಅಂತಹ ದೇಗುಲಕ್ಕೆ ನುಗ್ಗಿ ನನ್ನ ಮಗ ದೊಡ್ಡ ತಪ್ಪು ಮಾಡಿದ್ದಾನೆ. ಆತ ಮಾಡಿರುವ ತಪ್ಪಿಗೆ ಗಲ್ಲುಶಿಕ್ಷೆ ಬೇಕಾದರೂ ನೀಡಿ ಎಂದು ಬಾವುಕರಾದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.