ಮದುವೆ ಬಗ್ಗೆ ಸ್ಪಷ್ಟತೆ ಕೊಟ್ಟ ಸೋನಲ್; ತರುಣ್ ಸುಧೀರ್ ಜೊತೆ ಸಿಹಿಹಬ್ಬ

ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ಅಭಿಸಾರಿಕೆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಹಲ್ಚಲ್ ಎಬ್ಬಿಸಿತ್ತು.
ಇದೀಗ ನಟ ತಮ್ಮ ಲವ್ ಬಗ್ಗೆ ಮೌನ ಮುರಿದಿದ್ದಾರೆ. ಹೌದು, ಖಾಸಗಿ ಸುದ್ದಿ ವಾಹಿನಿ ಜೊತೆ ಮಾತಾಡಿದ ನಟಿ ಸೋನಾಲ್ ಮಂಥೆರೊ ಅವರು, ನನಗೆ ಬಾಯ್ ಫ್ರೆಂಡ್, ಕ್ರಶ್ ಅಂತ ನಿಜವಾಗಲೂ ಯಾರು ಇಲ್ಲ. ನನಗೆ ಹಿಂದೆ ಬ್ರೇಕ್ ಅಪ್ ಆಗಿತ್ತು. ಆಮೇಲೆ ನಾನು ಖುಷಿಯಿಂದ ಸಿಂಗಲ್ ಆಗಿದ್ದೇನೆ ಅಂತಾ ಹೇಳಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಏನ್ ಮೇಡಂ ಇದು, ತರುಣ್ ಅವರನ್ನು ಮದುವೆ ಆಗಿ ಅಂತ ಕಮೆಂಟ್ಸ್ ಮಾಡಿದ್ದಾರೆ.
ಇತ್ತೀಚೆಗೆಷ್ಟೇ ನಟ ತರುಣ್ ಸುಧೀರ್ ಅವರು ನಟಿ ಸೋನಾಲ್ ಮಂಥೆರೊ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗುತ್ತಿದ್ದವು. ಇದೀಗ ನಟಿ ಸೋನಾಲ್ ಮಂಥೆರೊ ಅವರೇ ಖುದ್ದು ನಾನು ಸಿಂಗಲ್ ಅಂತ ಹೇಳಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುದೀರ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು.
ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಾಲ್ ಮಂಥೆರೊ ಅಭಿನಯಿಸಿದ್ದರು. ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ. ಇಂದು ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ರಿಂದಲೇ ತರುಣ್ ಸುಧೀರ್ ಹಾಗೂ ಸೋನಲ್ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎನ್ನಲಾಗಿದೆ.
ರಾಬರ್ಟ್ ಸಿನಿಮಾ ಸೆಟ್‌ನಲ್ಲಿ ತಮಾಷೆಯಾಗಿ ದರ್ಶನ್, ತರುಣ್ ಹಾಗೂ ಸೋನಲ್‌ಗೆ ರೇಗಿಸುತ್ತಿದ್ದರು. ಇದೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿದೆ ಎನ್ನಲಾಗಿದೆ. ಇದೀಗ ಸಂದರ್ಶನ ಒಂದರಲ್ಲಿ ಈ ವಿಷಯ ಕೇಳಿದ್ದಕ್ಕೆ ನಟಿ ಸೋನಲ್ ನಾಚಿ ನೀರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.