ದೀಪಾವಳಿ ಹಬ್ಬದಂದೆ ಸಿಹಿಸುದ್ದಿ ಕೊಟ್ಟ ಸೋನಲ್, ತರುಣ್ ತುಂಬಾ ಫಾಸ್ಟ್ ಎಂದ ಜನ

 | 
Hs
 ಹಾಸನಾಂಬೆ ದರ್ಶನಕ್ಕೆ ಬಂದಿದ್ದಕ್ಕೆ ತರುಣ್‌ ಪತಿಯಾಗಿ ಸಿಕ್ಕರು ಎಂದ ನಟಿ ಸೋನಾಲ್‌ ಮೊಂಥೆರೋ ಹೇಳಿದ್ದಾರೆ. ಮಾತ್ರವಲ್ಲದೇ ಈ ವರ್ಷ ಹೊಸ ಬೇಡಿಕೆಯನ್ನು ದೇವರ ಮುಂದೆ ಇಟ್ಟಿದ್ದಾರೆ.ಭಾನುವಾರ ನಟ, ನಿರ್ದೇಶಕ ತರುಣ್‌ ಸುಧೀರ್‌ ಅವರು ಪತ್ನಿ ಸೋನಾಲ್‌ ಮೊಂಥೆರೋ ಜತೆ ಬಂದು ಹಾಸನಾಂಬೆ ದರ್ಶನ ಪಡೆದುಕೊಂಡರು. 
ನಂತರದಲ್ಲಿ ನಟಿ ಸೋನಾಲ್‌ ಮೊಂಥೆರೋ ಮಾತನಾಡಿ, ಹಿಂದಿನ ವರ್ಷ ಬಂದು ನಮಿಸಿದ್ದರಿಂದಲೇ ಚಲನಚಿತ್ರ ನಿರ್ದೇಶಕ ತರುಣ್‌ ಸುಧೀರ್‌ ನನ್ನ ಪತಿಯಾಗಿ ಸಿಗಲು ಕಾರಣ. ದೇವಿಯಲ್ಲಿಅಂತಹ ಶಕ್ತಿ ಇದೆ ಎಂದು ತಿಳಿಸಿದರು.ಚಲನಚಿತ್ರ ನಿರ್ದೇಶಕ ತರುಣ್‌ ಸುಧೀರ್‌ ಮಾತನಾಡಿ,ತಾಯಿಯಲ್ಲಿ ಪಾಸಿಟಿವ್‌ ವೈಬ್ರೇಷನ್‌ ಇದೆ. ನಟ ದರ್ಶನ್‌ ಜಾಮೀನಿನ ಮೇಲೆ ಬೇಗ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ.
 ಆಕೆಯ ಮೇಲೆ ಅಪಾರ ನಂಬಿಕೆ ಇದೆ. ಕಳೆದ ವರ್ಷ ಬರಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪತ್ನಿ ಸೋನಾಲ್‌ ಜತೆ ಬಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.ಈ ವೇಳೆ ಶಾಸಕ ರಾಜು ಕಾಗೆ ಮಾತನಾಡಿ, ದೇವಿಯಲ್ಲಿ ವಿಶೇಷ ಪವಾಡ ಇದೆ. ವರ್ಷವಿಡಿ ದೀಪ ಆರುವುದಿಲ್ಲಎಂದರೆ ಅದು ವಿಜ್ಞಾನಕ್ಕೆ ಸವಾಲು. ಅದೇ ದೈವಶಕ್ತಿ ಎಂದರು.
ತರುಣ್‌ ಸುಧೀರ್‌ ಹಾಗೂ ನಟಿ ಸೋನಾಲ್‌ ಜತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಯುವಕ, ಯುವತಿಯರು, ಭಕ್ತರು, ಪೊಲೀಸರು, ಎನ್‌ಸಿಸಿ, ಸ್ಕೌಟ್ಸ್‌ ಕೆಡೆಟ್‌ಗಳು ಮುಗಿಬಿದ್ದರು. ಕೆಲಕಾಲ ಎಲ್ಲರೊಂದಿಗೂ ಫೋಟೊಗೆ ಪೋಸ್‌ ನೀಡಿ ದಂಪತಿಗಳು ತೆರಳಿದ್ದಾರೆ. ಇನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡೋದಾಗಿ ಹೇಳಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.