ವರ್ಷ ತುಂಬುವ ಮುನ್ನವೇ ಸೋನಲ್ ಸಿಹಿಸುದ್ದಿ, ತರುಣ್ ಸಾಹಸಕ್ಕೆ ಫಿದಾ ಆದ ಕನ್ನಡಿಗರು
Jun 22, 2025, 10:39 IST
|

ಇದಕ್ಕೆ ಕಾರಣ ಸೋನಲ್ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದೀಗ ಅವರು ಮದುವೆಯ ಬಳಿಕ ಮಾದೇವ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಅದು ಬಿಡುಗಡೆಯಾಗಲಿದೆ. ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಕಳೆದ, ಮೇ 30 ರಂದು ತೆರೆಕಂಡಿದೆ. ಈ ಚಿತ್ರದ ಖುಷಿಯಲ್ಲಿದ್ದಾರೆ ನಟಿ.
ಸೆಲೆಬ್ರಿಟಿಗಳು ಅಂದ್ರೆ ಫ್ಯಾನ್ಸ್ಗೆ ಅದೇನೋ ಒಂಥರಾ ಲವ್ವು. ಮೊದಲು ಅವರ ಅಭಿಮಾನಿಗಳಿಗೆ ಮದುವೆ ಚಿಂತೆ. ಮದುವೆಯಾಗುತ್ತಿದ್ದಂತೆಯೇ ಮಕ್ಕಳ ಚಿಂತೆ. ಮದುವೆಯಾದವರಿಗೆ ಅವರ ಭವಿಷ್ಯ, ಕರಿಯರ್ ಬಗ್ಗೆ ಯೋಚನೆಯಾಗಿದ್ದರೆ, ಅಭಿಮಾನಿಗಳಿಗೆ ಮಕ್ಕಳ ಸುದ್ದಿ ಯಾವಾಗ ಕೊಡ್ತಾರೆ ಎನ್ನುವ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಮದುವೆಯಾದ ಹೊಸತರಲ್ಲಿ ತರುಣ್ ಮತ್ತು ಸೋನಲ್ ಅವರ ವಿಷಯದಲ್ಲಿಯೂ ಹಾಗೆಯೇ ಆಗಿತ್ತು.
ಇವರಿಬ್ಬರು ಆಸ್ಪತ್ರೆಗೆ ಹೋಗಿದ್ದರು. ಈ ವಿಷಯವನ್ನು ಅರ್ಧಂಬರ್ಧ ತಿಳಿದ ಇವರ ಅಭಿಮಾನಿಗಳಿಗೆ ಖುಷಿಯೋ ಖುಷಿ. ಏನೋ ಗುಡ್ ನ್ಯೂಸ್ ಇದೆ ಎಂದೇ ಎಂದುಕೊಂಡರು. ಅಷ್ಟೇ ಅಲ್ಲದೇ ಆಸ್ಪತ್ರೆಗೆ ಹೋದ ತರುಣ್ ಅವರು ಅಲ್ಲಿ ಅಭಿನಂದನೆಯನ್ನೂ ಸಲ್ಲಿಸಿದ್ದರು. ಆದರೆ ಅವರು ಪಶು ಆಸ್ಪತ್ರೆ ಉದ್ಘಾಟನೆಗೆ ಹೋಗಿದ್ದರಷ್ಟೇ.ಆದರೆ ಅದಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಇವರು ಆಸ್ಪತ್ರೆಗೆ ಹೋಗಿದ್ದು ಸದ್ದು ಮಾಡಿತ್ತು. ಈ ಬಗ್ಗೆ ಇದೀಗ ನಟಿ ಬಾಸ್ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೆಲೆಬ್ರಿಟಿಗಳು ಎಂದರೆ ಗಾಸಿಪ್ ಇದ್ದದ್ದೇ.
ನನಗೂ ಹಾಗೇ ಆಗಿತ್ತು. ಟಿವಿಯಲ್ಲಿ ಬಂದ ಸುದ್ದಿ ನೋಡಿ ಎಲ್ಲಾ ಕಂಗ್ರಾಟ್ಸ್ ಹೇಳಲು ಶುರು ಮಾಡಿದ್ದರು. ಇದನ್ನು ನೋಡಿ ಆರಂಭದಲ್ಲಿ ನನಗೂ ಶಾಕ್ ಆಯಿತು ಎಂದಿದ್ದಾರೆ. ಇದೇ ವೇಳೆ, ಫ್ಯಾಮಿಲಿ ಪ್ಲ್ಯಾನ್ ಏನೂ ಇಲ್ಲ, ಯಾವಾಗ ಆಗುತ್ತೋ ಆವಾಗ ಮಗು ಆಗಲಿ ಎಂದಿರುವ ಸೋನಲ್, ನಮ್ಮ ಮನೆಯಲ್ಲಿ ಹೆಚ್ಚು ಹೆಣ್ಣುಮಕ್ಕಳೇ ಇರುವುದರಿಂದ ನನಗೆ ಗಂಡು ಮಗು ಇಷ್ಟ, ತರುಣ್ ಮನೆಯಲ್ಲಿ ಹೆಚ್ಚಾಗಿ ಗಂಡುಮಕ್ಕಳೇ ಇರುವುದರಿಂದ ಅವರಿಗೆ ಹೆಣ್ಣುಮಗು ಇಷ್ಟ. ಸೋ ಏನಾಗುತ್ತೋ ಆಗಲಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023