ದತ್ತು ಪುತ್ರಿ ಸೇವಂತಿಯನ್ನು ಸ್ವಂತ ಮಗಳಂತೆ ಸಾಕುತ್ತಿರುವ ಸೋನು‌ ಗೌಡ; ಈಗಾಗಲೆ ಲಕ್ಷಾಂತರ ರೂಪಾಯಿ ಬಂಗಾರ ಮಾಡಿ ಕೊಟ್ಟ ಸೋ.ನು

 | 
Uu

ಜನ ಕೆಟ್ಟ ಕೆಲಸ ಮಾಡಿದ್ರು ಟ್ರೊಲ್ ಮಾಡ್ತಾರೆ ಒಳ್ಳೆಯ ಕೆಲಸ ಮಾಡುವ ಮನಸ್ಸು ಮಾಡಿದ್ರು ಟ್ರೊಲ್ ಮಾಡ್ತಾರೆ. ಹೌದು ಬಿಗ್ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಮತ್ತು ಸೇವಂತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಡ ಕುಟುಂಬದ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ಸೋನು ಪ್ರತಿ ದಿನವೂ ವಿಭಿನ್ನ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ.

ಬಟ್ಟೆ, ಒಡವೆ, ತಿಂಡಿ- ತಿನಿಸು, ಪುಸ್ತಕ.ಅಷ್ಟೇ ಅಲ್ಲ ಕಾನ್ವೆಂಟ್‌ ಸ್ಕೂಲ್‌ಗೆ ಸೇರಿಸಬೇಕು ಅಂತಾನೂ ಓಡಾಡುತ್ತಿದ್ದಾರೆ ಸೋನು. ಈ ನಡುವೆ ನೆಗೆಟಿವ್ ಟ್ರೋಲ್ ಮಾಡುತ್ತಿರುವವರಿಗೆ ಉತ್ತರ ಕೊಟ್ಟಿದ್ದಾರೆ.ಎರಡು ಮೂರು ತಿಂಗಳುಗಳಿಂದ ನನ್ನ ಬಗ್ಗೆ ಜಾಸ್ತಿ ಪಾಸಿಟಿವ್ ಟ್ರೋಲ್ ಆಗುತ್ತಿದೆ. ಸೇವಂತಿಯನ್ನು ದತ್ತು ತೆಗೆದುಕೊಂಡಿರುವುದಕ್ಕೋ ಯಾವುದಕ್ಕೆ ನನಗೆ ಗೊತ್ತಿಲ್ಲ. 

ನೆಗೆಟಿವ್ ಟ್ರೋಲ್ ಮಾಡಿದಾಲೂ ನಾನು ಏನೂ ಮಾತನಾಡಿಲ್ಲ ಹೀಗಾಗಿ ಪಾಸಿಟಿವ್ ಮಾಡಿದಾಗಲೂ ನಾನು ಏನೂ ಹೇಳಲ್ಲ. ಕೆಲವು ದಿನಗಳ ಹಿಂದೆ ಒಂದು ಟ್ರೋಲ್ ಪೇಜ್‌ ಹಾಕಿರುವ ಪೋಸ್ಟ್‌ ನೋಡಿದೆ. ಹಣ ಮಾಡಲು ವ್ಯೂಸ್‌ ಪಡೆಯಲು ಒಂದು ಬಡ ಕುಟುಂಬದ ಹುಡುಗಿಯನ್ನು ಬಳಸಿಕೊಳ್ಳುತ್ತಿರುವೆ ದತ್ತು ಅಂತ ಪದ ಬಳಸಿ ಮೋಸ ಮಾಡುತ್ತಿರುವೆ ಎಂದು ಆದರೆ ಗುರು ನಾನು ಕೆಟ್ಟ ಪದ ಬಳಸಬಾರದು ಅಂತ ಅಂದುಕೊಂಡಿದ್ದೀನಿ ಆದರೆ.ನಿನ್ನಂಥ ಚಪ್ಪರ್ ನನ್ನ ಮಗ ನನ್ನಿಂದ ವ್ಯೂಸ್‌ ತೆಗೆದುಕೊಳ್ಳುತ್ತಿರುವೆ ಎಂದು ಸೋನು ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಸೇವಂತಿಯನ್ನು ದತ್ತು ತೆಗೆದುಕೊಳ್ಳಬೇಕು ಅನ್ನೋ ಯೋಚನೆ ಬರುವ ಮುನ್ನವೇ ನಾನು ಆಕೆಯನ್ನು ಚೆನ್ನಾಗಿ ನೋಡಿಕೊಂಡೆ. ಚಿನ್ನದ ಚೈನ್, ಚಿನ್ನದ ಓಲೆ, ಬೆಳ್ಳಿ ಕಾಲುಗೆಜ್ಜೆ ಮತ್ತು ಬಟ್ಟೆ ಬರಿ ಅಂತ ಕೊಡಿಸಿರುವೆ. ಸೇವಂತಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಮಾಡಿರುವೆ. ದತ್ತು ತೆಗೆದುಕೊಳ್ಳುವುದು ಒಂದು ಪ್ರೊಸೀಜರ್‌ ಇದೆ ಹೀಗಾಗಿ ಅದ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಂಪೂರ್ಣವಾಗಿ ತಿಳಿಸುತ್ತಿಲ್ಲ. ರಾಯಚೂರಿನಲ್ಲಿ ನನ್ನ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿ ಆಕೆಯನ್ನು ನನ್ನೊಟ್ಟಿಗೆ ಕಳುಹಿಸಿರುವುದು. 

ನಮ್ಮ ಮನೆಗೆ ಕರೆದುಕೊಂಡು ಬಂದು 15 ದಿನ ಆಗಿಲ್ಲ ಆಗಲೇ ನೆಗೆಟಿವ್ ಆಗಿ ಮಾತನಾಡಬಾಡಿ.ಎಂದು ಸೋನು ಗೌಡ ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.