ಅಧಿಕಾರಿಗಳು ರೂಮ್ ಅಲ್ಲಿ‌ ಹಾಕಿ ರುಬ್ಬಿದ ಬಳಿಕ ಸೋನು ಗೌಡ ಮೊದಲ‌ ಬಾರಿ ಮೀದಿಯಾ ಮುಂದೆ ಮಾತುಕತೆ

 | 
Ghu

ಸೋನು ಶ್ರೀನಿವಾಸ್ ಗೌಡ ಅಕ್ರಮವಾಗಿ 8 ವರ್ಷದ ಮಗುವನ್ನು ಇಟ್ಟುಕೊಂಡಿದ್ದಾರೆ.. ಅಲ್ಲದೇ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ.. ಯಾವುದೇ ಕಾನೂನಿನ ನಿಯಮಗಳನ್ನು ಪಾಲಿಸದೇ ಈ ರೀತಿ ಮಾಡುವುದು ಅಪರಾಧ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿಂದಲೇ ಪೊಲೀಸರು ಇಂದು  ಬೆಳಗ್ಗೆ ಸೋನು ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಪೊಲೀಸ್‌ ವಿಚಾರಣೆ ವೇಳೆ ಆ ಮಗುವಿನ ಹಿನ್ನಲೆ ಬಗ್ಗೆ ಹೇಳಿದ ಸೋನು ನಮ್ಮ ಅಪಾರ್ಟ್ಮೆಂಟ್ ಬಳಿ ಕೆಲಸ ಮಾಡುತ್ತಿದ್ದ ದಂಪತಿ ಮಗು ಅದು.

ನಮ್ಮ ಮನೆಗೆ ಆಟವಾಡುತ್ತಾ ಹೆಚ್ಚು ಆಪ್ತವಾಗಿದ್ದಳು.ಆಕೆ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಳು. ಅದಕ್ಕೆ ಮಗುವನ್ನು ನಾನೇ ಸಾಕಿಕೊಳ್ಳೊದಾಗಿ ಹೇಳಿ ನನ್ನೊಂದಿಗೆ ಇಟ್ಟುಕೊಂಡಿದ್ದೆ ಆದರೆ ದತ್ತು ಪಡೆಯುವ ಪ್ರಕ್ರಿಯೆ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಕಾನೂನಾತ್ಮಕವಾಗಿಯೇ ನಡೆದುಕೊಳ್ಳುತ್ತಿದ್ದೆ ಎಂದಿದ್ದಾರೆ. ಇನ್ನು ಸೋನು ಗೌಡ ತಮ್ಮ ಯೂಟ್ಯೂಬ್‌ ನಲ್ಲಿ ಆ ಮಗುವಿನೊಂದಿಗೆ ಸಾಕಷ್ಟು ವ್ಲಾಗ್‌ಗಳನ್ನು ಮಾಡಿದ್ದಾರೆ.. ಆಕೆಯ ಶಾಪಿಂಗ್‌, ಮೇಕಪ್‌, ಊಟ ಎಲ್ಲವನ್ನು ಸೋನು ಪೋಸ್ಟ್‌ ಮಾಡಿದ್ದಾರೆ.

ಸೋನು ಗೌಡ ರಾಯಚೂರಿನ ಕಾಚಾಪೂರ ಹಳ್ಳಿಗೆ ಹೋಗಿ ಆ ಬಾಲಕಿಯ ಮನೆ ಹುಡುಕಿ ಪೋಷಕರ ಒಪ್ಪಿಗೆ ಪಡೆದು ಬಾಲಕಿಯನ್ನು ಕರೆತಂದಿದ್ದರು. ಆ ವ್ಲಾಗ್‌ ವೀಡಿಯೋ ಸಹ ಭಾರೀ ವೈರಲ್‌ ಆಗಿತ್ತು.. ಆದರೆ ಇದು ನಾನ್‌ ಬೇಲಬಲ್ ಪ್ರಕರಣ ಆಗಿರುವುದರಿಂದ ಶೀಘ್ರದಲ್ಲೇ ಸೋನು ಗೌಡ ಅವರನ್ನು ನ್ಯಾಯಾಧೀಶರ ಮುಂದೆ ಹಾಜರಿಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.