ಪ್ರತಿ ತಿಂಗಳು ಸೋನು ಖಾತೆಗೆ ಕೋಟಿ ಲೆಕ್ಕದಲ್ಲಿ ಸಂಬಳ; ಇದು ಬೆವರಿನ ಹಣ ಎಂದ ಸೋ.ನು

 | 
Uu

ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅಕ್ರಮವಾಗಿ ಮಗು ದತ್ತು ತೆಗೆದುಕೊಂಡ ಪ್ರಕರಣದ ಮೇಲೆ ಪರಪ್ಪನ ಅಗ್ರಹಾರದಲ್ಲಿದ್ದರು. ಬೇಲ್ ಪಡೆದು ಹೊರ ಬಂದ ಮೇಲೆ ಸೋನು ಲೈಫ್‌ಸ್ಟೈಲ್ ತುಂಬಾನೇ ಬದಲಾಗಿದೆ. 

ಸೋನು ದುಡಿಮೆ ಮೇಲೆ ಸಾಕಷ್ಟು ಪ್ರಶ್ನೆಗಳು ಬರುತ್ತದೆ, ಇದಕ್ಕೆ ನಟಿ ಕೊಟ್ಟ ಉತ್ತರ ಇಲ್ಲಿದೆ. ನನ್ನನ್ನು ಟ್ರೋಲ್ ಮಾಡುವವರನ್ನು ಬೈಯುವುದಿಲ್ಲ ನಾನೇ ಖುಷಿಯಿಂದ ನಗುತ್ತಾ ಕಾಮೆಂಟ್ ಮಾಡುತ್ತೀನಿ. ಕೆಲವೊಂದು ಕೆಟ್ಟ ಪದಗಳನ್ನು ಫ್ಯಾಮಿಲಿಗೆ ಬಳಸುತ್ತಾರೆ ಅದರಿಂದ ತುಂಬಾ ಬೇಸರವಾಗುತ್ತದೆ. 

ನನ್ನ ಬಗ್ಗೆ ಏನೇ ಮಾತನಾಡಿದರೂ ತುಂಬಾ ಪಾಸಿಟಿವ್ ಆಗಿ ಸ್ವೀಕರಿಸುತ್ತೀನಿ ಎಂದು ಸೋನು ಶ್ರೀನಿವಾಸ್ ಗೌಡ ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು ತುಂಬಾ ಡೀಸೆಂಟ್ ಫ್ಯಾಮಿಲಿಯಿಂದ ಬೆಳೆದು ಬಂದ ಹುಡುಗಿ ಯಾವುದೇ ರೀತಿ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಎಕ್ಸ್‌ಪೋಷರ್ ಸಿಕ್ಕಿಲ್ಲ. 

ಯಾವಾಗ ಹೆಚ್ಚಿಗೆ ಸುದ್ದಿಯಲ್ಲಿ ಇರುವುದಕ್ಕೆ ಶುರು ಮಾಡಿದೆ ಆಗ ನಮ್ಮ ಸಂಬಂಧಿರ ಜೊತೆ ಚೆನ್ನಾಗಿಲ್ಲ. ಯಾಕೆ ವಿಡಿಯೋ ಮಾಡುತ್ತೀಯಾ? ಯಾಕೆ ಡ್ಯಾನ್ಸ್ ಮಾಡಬೇಕು? ನಿನಗೆ ಫ್ರೆಂಡ್ಸ್‌ ಯಾಕೆ ಬೇಕು ಅನ್ನೋ ಪ್ರಶ್ನೆಗಳನ್ನು ತಾಯಿ ಮನೆ ಕಡೆಯವರು ಕೇಳುತ್ತಾರೆ ಆದರೆ ತಂದೆ ಮನೆ ಕಡೆಯವರು ಸಂಪೂರ್ಣವಾಗಿ ಸಪೋರ್ಟ್ ಮಾಡುತ್ತಾರೆ. 

ಡಿಪ್ಲಮೋ ಕೊನೆ ವರ್ಷ ಮಾಡುವಾಗ ಮನೆಯಿಂದ ಪಾಕೆಟ್ ಮನೆ ತೆಗೆದುಕೊಳ್ಳುತ್ತಿದ್ದೆ ಆದರೆ ಈಗ ನಾನೇ ದುಡಿದು ಒಂದು ರೂಪಾಯಿನೂ ಕೇಳಿಲ್ಲ. ಜೈಲು ವಿಚಾರ ಆದಾಗ ನನ್ನ ಸ್ನೇಹಿತರು ಓಡಾಡಿ ಸಹಾಯ ಮಾಡಿದರು ಎಂದು ಸೋನು ಗೌಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.