ಸೌಜನ್ಯ ಆರೋಪಿಗಳಿಗೆ ಮೈನಡುಕ ಶುರು, ಕರಾವಳಿಗರ ಮುಖದಲ್ಲಿ ಮಂದಹಾಸ

 | 
Bhh

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡೀ ದೇಶದಲ್ಲೇ ಸಂಚಲನವನ್ನು ಮೂಡಿಸಿತ್ತು. ಅದ್ರಲ್ಲೂ 11ವರ್ಷಗಳ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿ ಸಂತೋಷ್‌ ರಾವ್‌ ನಿರಪರಾಧಿ ಅಂತ ಸಿಬಿಐ ನ್ಯಾಯಾಲಯ ಯಾವಾಗ ಆತನನ್ನು ಬಿಡುಗಡೆ ಮಾಡಿತೋ ಆಗಿಂದ ಬೂದಿ ಮುಚ್ಚಿದ ಕೆಂಡದಂತಿದೆ ಈ ಪ್ರಕರಣ.

ಆಗ ಸೌಜನ್ಯಗಳಿಗೆ ನ್ಯಾಯ ಸಿಗಬೇಕು ಅನ್ನೋ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆಯಿತು. ಈಗ ಎಲ್ಲೆಲ್ಲಿಯೂ ಸೌಜನ್ಯಗಳಿಗೆ ನ್ಯಾಯ ಸಿಗಬೇಕು ಅನ್ನೋ ಸಮಾವೇಶಗಳು, ಪಾದಯಾತ್ರೆಗಳು,ರ್ಯಾಲಿಗಳು ನಡೀತಿವೆ. ಈ ಹೋರಾಟಗಳು ಹೊಸ ಹೊಸ ಆಯಾಮಗಳನ್ನು, ಹೊಸ  ಹೊಸ ರೂಪಗಳನ್ನು ಪಡೆಯುತ್ತಿವೆ.

ಚಿತ್ರದುರ್ಗದ ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ ಮೈಸೂರಿನ ಒಡನಾಡಿ ಸಂಸ್ಥೆ ಇದೀಗ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಹೋರಾಟಕ್ಕೆ ಮುಂದಾಗಿತ್ತು. ಇದೀಗ ಸೌಜನ್ಯಾ ಪ್ರಕರಣ ನಡೆದಾಗ ಇದ್ದ ಪ್ರತ್ಯಕ್ಷ ಸಾಕ್ಷಿ ಒಂದನ್ನು ಬಿಡುಗಡೆ ಮಾಡಿದ್ದು ಅವರು ಮಹಿಳೆಯಾಗಿದ್ದು ಅಲ್ಲಿನ ಆಯುರ್ವೇದಿಕ್ ಚಿಕಿತ್ಸಾಲಕ್ಕೆ ಅರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ತೋರಿಸಿ ಕೊಳ್ಳಲು ಬಂದಿದ್ದರು.

ಆಗ ಅಲ್ಲಿದ್ದ ಒಬ್ಬ ಇನ್ನು ಐದಾರು ತಿಂಗಳ ಕಾಲ ಇಲ್ಲಿ ಬರಬೇಡಿ ಬೇರೆಡೆ ಹೋಗಿ ಚಿಕಿತ್ಸೆ ಮಾಡಿಸಿ ಎಂದು ತೊದಲು ನುಡಿಯಲ್ಲಿ ಹೇಳಿದ್ದಾರೆ. ಅವರು ಒಟ್ಟೂ 3ಜನ ಇದ್ದರು. ಅವರಿಗೆ ಸರಿ ಸುಮಾರು 24,25 ವರ್ಷಗಳಿದ್ದವು 3ಜನ ಹುಡುಗರು 30 ವರ್ಷದ ಒಳಗೇ ಇದ್ದರು ಎಂದು ಪ್ರತ್ಯಕ್ಷ ದರ್ಶಿ ನುಡಿದಿದ್ದಾರೆ. ಇನ್ನು ಈ ಕುರಿತಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡುವುದಾಗಿ ಸ್ಟಾನ್ಲಿ ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.