ಮಹಾವೀರ್ ಜೈನ್ ಕೈ ಹಾಕಿದ್ದು ಯಾರ ಮೇಲೆ, ಧರ್ಮಸ್ಥಳದ ಹೋರಾಟದಲ್ಲಿ ಮತ್ತೊಂದು ಸತ್ಯ ಬಿಚ್ಚಿಟ್ಟ ಸೌಜನ್ಯ ತಂಗಿ

 | 
Bb

ಸೌಜನ್ಯಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸರಿಯಾಗಿ ತನಿಖೆ ಆಗಿಲ್ಲ ಎಂದು ರಾಜ್ಯದ ಹಾಗೂ ರಾಷ್ಟ್ರದ ಅನೇಕ ಸಂಘಟನೆಗಳು ನ್ಯಾಯ ನೀಡುವಂತೆ ಕಾನೂನಿನ ಹಾಗೇ ರಾಜಕೀಯದ ಮೊರೆ ಹೊಕ್ಕಿದ್ದಾರೆ ಈ ನಡುವೆ ಸೌಜನ್ಯಾ ಕುಟುಂಬದವರು ಕೂಡ ಒಂದೊಂದೆ ಪ್ರಮುಖ ಮಾಹಿತಿಯನ್ನು ಮುಂದಿಟ್ಟಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಸೌಜನ್ಯಾ ಕುಟುಂಬಸ್ಥರು ಭೇಟಿಯಾದ ಸಂದರ್ಭದಲ್ಲಿ ಆದ ಕೆಲ ಮಹತ್ವದ ಬೆಳವಣಿಗೆ ಬಗ್ಗೆ ವೀಡಿಯೋ ಒಂದು ವೈರಲ್ ಆಗಿದೆ.

ಈ ಒಂದು ಪ್ರಕರಣನಡೆದು 10ವರ್ಷ ಕಳೆದರೂ ಕೂಡ ಇನ್ನು ನ್ಯಾಯ ಮಾತ್ರ ಸಿಗಲಿಲ್ಲ. ಇದಕ್ಕೆ ಪ್ರಭಾವಿಗಳ ಕಾರಣ ಎಂದು ಹೇಳಲಾಗಿತ್ತು ಆದರೆ ಅವರು ಮಾತ್ರ ರಾಜಕೀಯದ ಹಲವು ಮುಖಂಡರ ಹಾಗೂ ರಾಜಕೀಯದ ಬೆಂಬಲ ಪಡೆದು ನ್ಯಾಯ ಮುಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇವೆಲ್ಲ ಅಂಶಗಳಿಗೆ ಸಾಕ್ಷಿ ಆದದ್ದು ಸೌಜನ್ಯಾ ಮಾವನಾದ ವಿಟ್ಠಲ ಅವರು ನೀಡಿದ್ದ ಹೇಳಿಕೆ ಎನ್ನಬಹುದು.

ಸೌಜನ್ಯಾ ಪ್ರಕಣರ ನಡೆದಂತಹ ಸಂದರ್ಭದಲ್ಲಿ ಆಕೆ ಮೊದಲು ನಾಪತ್ತೆ ಆಗಿದ್ದಾಳೆ ಎಂದು ಅಷ್ಟೇ ಗೊತ್ತಾಗಿದ್ದು , ಅದಕ್ಕಾಗಿ ಮನೆ ಹಾದಿ ಸಮೀಪ ಎಲ್ಲ ಹುಡುಕಿದ್ದಾರೆ, ಅಲ್ಲಿ ಇದ್ದಂತಹ ದಟ್ಟ ಕಾಡನ್ನು 400ಜನ ಹುಡುಕಿದ್ದರೂ ಆಕೆ ಸಿಗಲಿಲ್ಲ. ಆದರೆ ಬೆಳಗ್ಗೆ ಪೊಲೀಸರು ಬಾಡಿ ಸಿಕ್ಕಿದೆ ಎಂದರು, ನಾವು ಹುಡುಕಿದಾಗ ಬಾಡಿ ಇರಲಿಲ್ಲ, ಆಮೇಲೆ ಸಿಕ್ಕಿದೆ ಅಂದರೆ ಇದು ರಾತ್ರಿ ಬೇರೆ ಎಲ್ಲೊ ಆದ ಪ್ರಕರಣ ನಮಗೂ ದಿಕ್ಕು ತೋಚದೆ ನಾವು ಅನೇಕ ಸಂಘಟನೆಯ ಬೆಂಬಲ ಪಡೆದೆವು, ನಮಗೂ ದೇವರ ಮೇಲೆ ನಂಬಿಕೆ ಇದೆ ಹಾಗಾಗಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ಭೇಟಿ ಆಗಿ ಪ್ರಕರಣದ ಬಗ್ಗೆ ನಮಗೆ ತಿಳಿದಷ್ಟನ್ನು ಮೊದಲು ತಿಳಿಸಿದೆವು ಆದರೆ ಅಕ್ಕನ ಪರಿಸ್ಥಿತಿ ಯಾರಿಗೂ ಬರುವುದು ಬೇಡ ಎಂದು ಸೌಜನ್ಯಾ ತಂಗಿ ಮತ್ತು ತಮ್ಮ ಕಣ್ಣೀರಿಟ್ಟಿದ್ದಾರೆ.

ನಾವು ಹಲವರಲ್ಲಿ ಮನವಿ ಮಾಡಿ ಸ್ವಲ್ಪ ದಿನಕ್ಕೆ ನಮಗೆ ಅನಾಮಿಕ ಕರೆ ಬರುವುದು ನಮ್ಮ ಚಲನ ವಲನದ ಹಿಂದಿರುವುದು ಗೊತ್ತಾಯಿತು. ಸಿಬಿಐ ಇತರ ತನಿಖೆ ಮಾಡದಂತೆ ಮನವಿ ಬಂದಿದೆ. ಇದರಲ್ಲಿ ಯಾರದೋ ಕೈವಾಡ ಇರಬೇಕು ಎಂಬ ಅನುಮಾನ ಮೂಡಿದೆ. ಈಗ ಸಾಕ್ಷಿ ನಮ್ಮಲ್ಲಿ ಇಲ್ಲವಾದರೂ ಆರೋಪಿ ಎಂದು ಬಂದಿಸಿದ್ದ ವ್ಯಕ್ತಿ ನಿರಪರಾಧಿ ಎನ್ನಲು ಅನೇಕ ಸಾಕ್ಷಿ ಇದೆ. ಅದೇ ರೀತಿ ನಿಜವಾದ ಆರೋಪಿ ಬಂದಿಸಲು ಸಮಾಜದ ವ್ಯವಸ್ಥೆಯೆ ಬಿಡಲಿಲ್ಲ. 

ನಾವು ಅನುಮಾನ ಪಟ್ಟ ಆ ನಾಲ್ಕು ಮಂದಿಗಳು ತುಂಬಾ ಅನುಕೂಲಸ್ಥರೇನಲ್ಲ ಅಂದ ಮೇಲೆ ಇದೆಲ್ಲ ಯಾರೊದೋ ಕೈವಾಡ ಅನ್ನುವ ಅನುಮಾನ ಯಾರಿಗಾದರೂ ಮೂಡಲಾರದೇ?, ಅಷ್ಟು ಮಾತ್ರ ಅಲ್ಲದೆ ಮಾಧ್ಯಮದ ಮುಂದೆ ನಮ್ಮನ್ನು ಬೆಂಬಲಿಸುವಂತೆ ಮಾತಾಡೊ ಅನೇಕ ಸಂಘಟನೆ , ರಾಜಕೀಯ ನಾಯಕರು ಬಳಿಕ ನಮಗೆ ನ್ಯಾಯ ಕೊಡಿಸಲು ಮನವಿ ಕೂಡ ಮಾಡಿಲ್ಲ ಅಂದ ಮೇಲೆ ಇದು ನಮಗೆ ನ್ಯಾಯ ನೀಡುವ ಹಾದಿ ತಪ್ಪಿಸಿದೆ ಎಂದು ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.