ಸೌತ್ ಇಂಡಿಯನ್ ಸ್ಟಾರ್ ಅಲ್ಲು ಅಜು೯ನ್ ಅರೆ,ಸ್ಟ್! ಕಾರಣ ಕೇಳಿ ಇಡೀ ಸಿನಿ ರಂಗವೇ ಶಾ ಕ್
ನಟ ಅಲ್ಲು ಅರ್ಜುನ್ ಅವರು ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದಾರೆ. ಆ ವಿಷಯ ಕೇಳಿ ಅಭಿಮಾನಿಗಳಿಗೆ ಆತಂಕ ಆಗಿದೆ. ಅಷ್ಟಕ್ಕೂ ಅರೆಸ್ಟ್ ಆಗುವಂತಹ ಯಾವ ತಪ್ಪನ್ನು ಅಲ್ಲು ಅರ್ಜುನ್ ಮಾಡಿದರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿತು.
ಆದರೆ ಅಸಲಿ ಸಂಗತಿಯೇ ಬೇರೆ. ಅಲ್ಲು ಅರ್ಜುನ್ ಅವರು ಆರ್ಟಿಒ ಕಚೇರಿಗೆ ಭೇಟಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಉದ್ದೇಶದಿಂದ ಅವರು ಆರ್ಟಿಒ ಕಚೇರಿಗೆ ತೆರಳಿದ್ದಾರೆ ಅಷ್ಟೇ. ಆ ಸಂದರ್ಭದ ಫೋಟೋವನ್ನು ಇಟ್ಟುಕೊಂಡು ಕಿಡಿಗೇಡಿಗಳು ಬಂಧನದ ಗಾಸಿಪ್ ಹಬ್ಬಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಆರ್ಟಿಒ ಅಧಿಕಾರಿಗಳ ಎದುರಿನಲ್ಲಿ ಅಲ್ಲು ಅರ್ಜುನ್ ಅವರು ಸಹಿ ಮಾಡುತ್ತಿರುವ ದೃಶ್ಯ ಈ ಫೋಟೋದಲ್ಲಿದೆ. ಈ ಫೋಟೋ ನೋಡಿದ ಫ್ಯಾನ್ಸ್ಗೆ ಗಾಬರಿ ಆಗಿದೆ. ಆದರೆ ಅವರು ಸಹಿ ಮಾಡುತ್ತಿರುವುದು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅರ್ಜಿಗೆ. ಈ ವಿಷಯ ಗೊತ್ತಾದ ಬಳಿಕ ಅರೆಸ್ಟ್ ವದಂತಿಗೆ ಬ್ರೇಕ್ ಬಿದ್ದಿದೆ.
ಅಷ್ಟಕ್ಕೂ ಅಲ್ಲು ಅರ್ಜುನ್ ಅವರಿಗೆ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಅಗತ್ಯತೆ ಏನಿದೆ? ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸದ್ಯ ಅಲ್ಲು ಅರ್ಜುನ್ ಅವರು ಪುಷ್ಪ 2 ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ವಿದೇಶದಲ್ಲೂ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಫಾರಿನ್ನಲ್ಲಿ ನಡೆಯುವ ಭರ್ಜರಿ ಚೇಸಿಂಗ್ ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಅವರು ವಾಹನ ಚಾಲನೆ ಮಾಡಬೇಕಿದೆ. ಆ ಸಂದರ್ಭದಲ್ಲಿ ಕಾನೂನಿನ ಅಡೆತಡೆ ಉಂಟಾಗುವುದು ಬೇಡ ಎಂಬ ಉದ್ದೇಶದಿಂದ ಅವರು ಮುಂಚಿತವಾಗಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.