ಮಜಾ‌ ಟಾಕೀಸ್ ನಿಲ್ಲೋದಕ್ಕೆ ಮುಖ್ಯ ಕಾರಣಗಳನ್ನು ಕೊಟ್ಟ ಸೃಜನ್ ಲೋಕೇಶ್

 | 
D
ಕನ್ನಡ ಪ್ರಮುಖ ಕಾಮಿಡಿ ಶೋಗಳಲ್ಲಿ ಒಂದಾಗಿರುವ ಹಾಗೂ ಸುದೀರ್ಘ 10 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಮಜಾ ಟಾಕೀಸ್ ಶೋ ಅಂತ್ಯವಾಗುತ್ತಿದೆ. ಮಜಾ ಟಾಕೀಸ್ ಶೋ ಕನ್ನಡದಲ್ಲಿ ಹೊಸ ಹಾಗೂ ವಿನೂತನ ಮಾದರಿಯ ಕಾಮಿಡಿ ಶೋ ಆಗಿತ್ತು. ಕಳೆದ ಒಂದು ದಶಕದ ಅವಧಿಯಿಂದಲೂ ಈ ಶೋ ಕನ್ನಡಿಗರನ್ನು ರಂಜಿಸಿಕೊಂಡು ಬರುತ್ತಿದೆ.
 ಅಪರ್ಣಾ ಅವರಂತಹ ನಟಿ ಹಾಗೂ ನಿರೂಪಕಿ ಈ ಕಾರ್ಯಕ್ರಮಕ್ಕೆ ಜೀವ ತುಂಬಿದ್ದರು. ಆದರೆ, ಈಚೆಗೆ ಹೊಸ ಸೀಸನ್‌ ಪ್ರಾರಂಭವಾದ ಬೆನ್ನಲ್ಲೇ ಮಜಾ ಟಾಕೀಸ್ ಶೋ ಅಂತ್ಯವಾಗುತ್ತಿದೆ. ಇದರೊಂದಿಗೆ ದಶಕಗಳ ಸಂಭ್ರಮ ಮುಕ್ತಾಯವಾಗುತ್ತಿದೆ. ಈ ಬಗ್ಗೆ ನಟ ಸೃಜನ್‌ ಲೋಕೇಶ್‌ ಅವರು ಮಾತನಾಡಿದ್ದಾರೆ. ಅಲ್ಲದೇ ಇದರೊಂದಿಗೆ ಗುಡ್‌ನ್ಯೂಸ್ ವೊಂದನ್ನೂ ಅವರು ಕೊಟ್ಟಿದ್ದಾರೆ.
ನಟ ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿರುವ ಕನ್ನಡದ ಪ್ರಮುಖ ಶೋ ಮಜಾ ಟಾಕೀಸ್. ಕಲರ್ಸ್ ಕನ್ನಡದಲ್ಲಿ ಈ ಶೋ ಮೂಡಿ ಬರುತ್ತಿತ್ತು. ಆದರೆ, ಇದೀಗ ಏಕಾಏಕಿ ಶೋ ಮುಕ್ತಾಯವಾಗುತ್ತಿದೆ. ಇದು ಈ ಕಾರ್ಯಕ್ರಮ ವೀಕ್ಷಕರಿಗೆ ಬೇಸರ ಮೂಡಿಸಿದೆ. 10 ವರ್ಷಗಳಷ್ಟು ದಾಖಲೆ ಇರುವ ಈ ಶೋ ಅಪಾರ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಮಜಾ ಟಾಕೀಸ್‌ ಶೋ ಅಂತ್ಯವಾಗಲಿದೆ ಅಂತ ಸೃಜನ್‌ ಲೋಕೇಶ್‌ ಅವರೇ ಹೇಳಿದ್ದಾರೆ.
 ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಬರುತ್ತಿತ್ತು. ಇದೀಗ ಈ ಕಲರ್ಸ್ ಕನ್ನಡ ಲೈವ್‌ನಲ್ಲಿ ಸೃಜನ್‌ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.ನಾವು ಮಜಾ ಟಾಕೀಸ್ ಕಾರ್ಯಕ್ರಮವನ್ನು ಮುಕ್ತಾಯ ಮಾಡುತ್ತಿದ್ದೇವೆ ಅಂತ ಸೃಜನ್‌ ಹೇಳಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ನಾವು ಒಳ್ಳೆಯ ಕಾರ್ಯಕ್ರಮಗಳ ಮೂಲಕ ನಿಮ್ಮುಂದೆ ಬರಲಿದ್ದೇವೆ. ಅಲ್ಲದೇ ಮುಂದುವರಿದು, ಸಿನಿಮಾ ಬಿಡುಗಡೆಯ ಬಗ್ಗೆ ಮಾತನಾಡಿದ್ದಾರೆ. ಜಿಎಸ್‌ಟಿ ಸಿನಿಮಾ ಇಷ್ಟರಲ್ಲೇ ಬಿಡುಗಡೆ ಆಗಲಿದೆ ಎನ್ನುವ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.