ಸ್ಟಾರ್ ಗಾಯಕ ವಾಸುಕಿ ವೈಭವ್ ಮನೆಯಲ್ಲಿ ಡಬಲ್ ಸಂಭ್ರಮ, ಏನಿರಬಹುದು ಗೆಸ್ ಮಾಡಿ?
| Aug 5, 2025, 12:26 IST
ಸ್ಯಾಂಡಲ್ವುಡ್ನ ಯಂಗ್ ಅಂಡ್ ಟ್ಯಾಲೆಂಟೆಡ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ತಾಯಂದಿರ ದಿನದಂದೇ ಗಾಯಕ ವಾಸುಕಿ ವೈಭವ್ ಅವರು ಗುಡ್ನ್ಯೂಸ್ ಕೊಟ್ಟಿದ್ದರು. ಇದೀಗ ಸಿಂಗರ್ ವಾಸುಕಿ ವೈಭವ್ ಮನೆಯಲ್ಲಿ ಇಂದು ಎರಡೆರಡು ಸಂಭ್ರಮ ಮನೆ ಮಾಡಿದೆ.
ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವನ್ನು ವಾಸುಕಿ ವೈಭವ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿಕೊಂಡಿದ್ದರು. ವಿಶೇಷ ಎಂದರೆ ತಾಯಂದಿರ ದಿನದಂದೇ ಗಾಯಕ ವಾಸುಕಿ ವೈಭವ್ ಅವರು ಗುಡ್ನ್ಯೂಸ್ ಕೊಟ್ಟಿದ್ದರು.
ಇನ್ನೂ, ಇಂದು ವಾಸುಕಿ ವೈಭವ್ ಅವರ ಪತ್ನಿ ಬೃಂದಾ ವಿಕ್ರಮ್ ಅವರ ಹುಟ್ಟು ಹಬ್ಬ. ಮತ್ತು ಇಂದು ಸ್ನೇಹಿತರ ದಿನಾಚರಣೆ ಇದೆ. ಹೀಗಾಗಿ ಸ್ಟಾರ್ ದಂಪತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಲ್ಲದೇ ಪತ್ನಿ ಹುಟ್ಟು ಹಬ್ಬದ ನಿಮಿತ್ತ ವಾಸುಕಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪತ್ನಿಯ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ‘‘ಹುಟ್ಟುಹಬ್ಬದ ಶುಭಾಶಯಗಳು ಹೆಂಡ್ತಿ.. ಇಂದು ಸ್ನೇಹಿತರ ದಿನವೂ ಹೌದು. ಈ ಹುಟ್ಟುಹಬ್ಬವು ವಿಶೇಷವಾದದ್ದು’’ ಅಂತ ಬರೆದುಕೊಂಡಿದ್ದಾರೆ.