ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ಆಟ, ಪ್ರತಾಪ್ ಕೈಯಿಂದ ಇಬ್ಬರ ತಲೆ ಬೋಳು

ಎರಡನೆಯ ತಿಂಗಳಿಗೆ ಕಾಲಿಟ್ಟಿರುವ ಬಿಗ್ಬಾಸ್ ಕನ್ನಡದಲ್ಲಿ ಸಕತ್ ಫೈಟಿಂಗ್ ಶುರುವಾಗಿದೆ. ದಿನದಿಂದ ದಿನಕ್ಕೆ ಎರಡು ತಂಡಗಳಾಗಿರುವ ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್ಬಾಸ್ ಪ್ರಿಯರಿಗೆ ತಿಳಿದಿರುವಂತೆ, ಗಜಕೇಸರಿ ತಂಡದಲ್ಲಿ ಡ್ರೋನ್ ಪ್ರತಾಪ್, ಸಿರಿ, ಸಂಗೀತಾ, ವಿನಯ್, ಸ್ನೇಹಿತ್ ಹಾಗೂ ನಮ್ರತಾ ಇದ್ದಾರೆ .
ಇನ್ನೊಂದು ತಂಡವಾಗಿರುವ ಸಂಪತ್ತಿಗೆ ಸವಾಲ್ನಲ್ಲಿ ವರ್ತೂರು ಸಂತೋಷ್, ಮೈಕಲ್, ತನಿಷಾ, ತುಕಾಲಿ ಸಂತೋಷ್, ಕಾರ್ತಿಕ್ ಹಾಗೂ ನೀತು ಇದ್ದಾರೆ. ಇದಾಗಲೇ ಬ್ರಹ್ಮಾಂಡ ಗುರೂಜಿ ಆಗಮನ ಕೂಡ ಆಗಿದೆ. ಇಷ್ಟು ದಿನ ಫ್ರೆಂಡು ಫ್ರೆಂಡು ಅಂದುಕೊಂಡೆ ಕಾರ್ತಿಕ್ ಹಾಗೂ ತನಿಷಾ ಜೊತೆಯಲ್ಲಿದ್ದ ಸಂಗೀತ ಈಗ ವಿನಯ್ ಟೀಂ ಸೇರಿಕೊಂಡಿದ್ದಾರೆ.
ತಂಡವು ತಮ್ಮ ಪ್ರತಿ ತಂಡಕ್ಕೆ ಒಂದಾದ ಮೇಲೊಂದರಂತೆ ಸವಾಲು ನೀಡಬೇಕು ಎಂದು ಬಿಗ್ಬಾಸ್ ಟಾಸ್ಕ್ ನೀಡಿದೆ. ಬ್ರಹ್ಮಾಂಡ ಗುರೂಜಿ ಅವರ ನೇತೃತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತ್ತಿದೆ. ಸಂಗೀತ ಹಾಗೂ ವಿನಯ್ ಬೇರೆ ಬೇರೆ ತಂಡಗಳಾಗಿ ಆಟ ಆಡುತ್ತಿದ್ದರು. ಆದರೆ ಈಗ ಸಂಗೀತ ವಿನಯ್ ಟೀಮ್ಗೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಸವಾಲಿನ ಟಾಸ್ಕ್ ಜೋರಾಗಿ ನಡೆಯುತ್ತಿದೆ.
ಸವಾಲು ನೀಡುವಂತೆ ಬಿಗ್ಬಾಸ್ ಹೇಳುತ್ತಿದ್ದಂತೆಯೇ, ಸಂಗೀತಾ ಈ ಬಾರಿ ಕಾರ್ತಿಕ್ ಹಾಗೂ ತುಕಾಲಿಯನ್ನೇ ಟಾರ್ಗೆಟ್ ಮಾಡಿದರು. ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸಂಗೀತಾ ಹೇಳಿದರು. ಇದನ್ನು ಕೇಳಿದ ತನಿಷಾ ಅಸಮಾಧಾನ ಹೊರಹಾಕಿ, ಒಬ್ಬರಿಗೆ ಮಾತ್ರ ಕೊಡಬಹುದಾಗಿತ್ತು, ಇಬ್ಬರಿಗೂ ಹೇಳಿದ್ದು ಸರಿಯಲ್ಲ ಎಂದರು.
ಪ್ರತಾಪ್ ತಂಡ ತುಕಾಲಿ ಸಂತೋಷ್ ಅವರ ತಲೆ ಬೊಳಿಸಲು ಹೇಳಬೇಕು ಅಂದುಕೊಂಡು ಮಾತನಾಡಿಕೊಂಡಿದ್ದರು ಆದರೆ ಈಗ ಸಂಗೀತಾ ಇಂದಾಗಿ ಇವರೊಂದಿಗೆ ಕಾರ್ತಿಕ್ ಅವರು ಕೂಡ ತಲೆ ಕೂದಲು ತೆಗೆಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.