'ಕ್ಲಾಸ್ ರೂಮ್ ಅಲ್ಲಿ ಪಾಠ ಹೇಳುವಾಗ ವಿದ್ಯಾರ್ಥಿಗೆ ಹೃ.ದಯಾಘಾತ' ತಕ್ಷಣ ಕುಸಿದು ಬಿದ್ದ ಯುವಕ

 | 
V

ಪಾಠ ಕೇಳುತ್ತಿದ್ದ ವೇಳೆಯೇ ವಿದ್ಯಾರ್ಥಿಗೆ ಹೃದಯಾಘಾತ ಉಂಟಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ  ಮಧ್ಯಪ್ರದೇಶದಲ್ಲಿ ನಡೆದಿದೆ. ಎಲ್ಲರಂತೆ ಆರಾಮಾಗಿ ಕೋಚಿಂಗ್ ಸೆಂಟರ್ ಗೆ ಬಂದು ಕುಳಿತಿದ್ದ ವ್ಯಕ್ತಿ ಇನ್ನಿಲ್ಲಾವಗಿದ್ದಾನೆ.20 ವರ್ಷಕ್ಕೆ ಹೃದಯಾಘಾತ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಮಧ್ಯಪ್ರದೇಶದ ನಾಗರಿಕ ಸೇವಾ ಆಯೋಗ ನಡೆಸುವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ತರಬೇತಿ ಕೇಂದ್ರದಲ್ಲಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.ರಾಜಾ ಲೋಧಿ  ಮೃತ ವಿದ್ಯಾರ್ಥಿ. ಇವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇವರಿಗೆ 20 ವರ್ಷ ವಯಸ್ಸಾಗಿತ್ತು.

ಕುಸಿದು ಬಿದ್ದ ತಕ್ಷಣವೇ ರಾಜಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನಡೆಯುತ್ತಿರುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಅಭಿನಯ್‌ ವಿಶ್ವಕರ್ಮ ಹೇಳಿದ್ದಾರೆ.ತರಗತಿಯ ಮಧ್ಯೆ ರಾಜಾ ಅವರು ಪ್ರಜ್ಞೆ ತಪ್ಪಿ ಬೀಳುತ್ತಿರುವ ದೃಶ್ಯ ತರಬೇತಿ ಕೇಂದ್ರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಜಾ ಅವರನ್ನು ಆಸ್ಪತ್ರೆಗೆ ಕರೆತಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಜೀವರಕ್ಷಗಳನ್ನು ನೀಡಿ ಸುಮಾರು 40 ರಿಂದ 45 ನಿಮಿಷಗಳವರೆಗೆ ಎಚ್ಚರ ಮಾಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ರಾಜಾ ಅವರಿಗೆ ಚಿಕಿತ್ಸೆ ನೀಡಿದ ಹೃದ್ರೋಗ ತಜ್ಞ ಮಹೇಂದ್ರ ಚೌರಾಸಿಯಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.