ಪ್ರೀತಿಯ ಸಂಗಿಗಾಗಿ ಕೆಲಸ ಬಿಟ್ಟ ಸುಚಿ, ಬಿಗ್ ಬಾಸ್ ಸಂಗೀತಾ ಅತ್ತಿಗೆ ಯಾವ ಕೆಲಸದಲ್ಲಿದ್ರು ಗೊತ್ತಾ

 | 
ಕ

ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸಂಗೀತಾ ಹೆಸರು ಎಷ್ಟು ಪ್ರಚಲಿತದಲ್ಲಿತ್ತೋ, ಅಷ್ಟೇ ಅವರ ಅತ್ತಿಗೆ ಸುಚಿ ಹೆಸರು ಕೂಡ ಚರ್ಚೆಯಾಯ್ತು. ಇದನ್ನು ಕಿಚ್ಚ ಸುದೀಪ್ ಕೂಡ ‘ಬಿಗ್ ಬಾಸ್’ ಫಿನಾಲೆ ವೇದಿಕೆ ಮೇಲೆ ಹೇಳಿದರು. ಈಗ ಸಂಗೀತಾ ಅವರು ಅತ್ತಿಗೆ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ.

ಸುಚಿತ್ರಾ ಸಂತೋಷ್‌ಕುಮಾರ್ ಅವರು ಸಂಗೀತಾ ಮನೆಗೆ ಬಂದು ಎರಡು ವರ್ಷ ಆಗಿದೆ ಅಷ್ಟೇ. ಸುಚಿತ್ರಾ ಹಾಗು ಸಂತೋಷ್ ಅವರು 13 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರಂತೆ. ಅತ್ತಿಗೆ ಜೊತೆಗಿನ ಬಾಂಧವ್ಯದ ಬಗ್ಗೆ ಸಂಗೀತಾ ಹೇಳಿದ್ದಾರೆ.

ಸಂಗೀತಾ ಅವರ ಅತ್ತಿಗೆ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ನಾನು ಸಡನ್ ಆಗಿ ಬಿಗ್ ಬಾಸ್‌ಗೆ ಹೋಗಿದ್ದೆ, ಹಾಗಾಗಿ ಅತ್ತಿಗೆ ಕೆಲಸ ಬಿಟ್ಟು, ನನ್ನ ಅಕೌಂಟ್‌ನ್ನು ಅವರೇ ನೋಡಿಕೊಳ್ಳುತ್ತಿದ್ದರು. ನಾನು ಏನು ಮಾಡಬೇಕು ಅಂತ ಅತ್ತಿಗೆ ಹೇಳಿರಲಿಲ್ಲ, ಅಷ್ಟು ಟೈಮ್ ಇರಲಿಲ್ಲ ಎಂದು ಸಂಗೀತಾ ಅವರು ಹೇಳಿದ್ದಾರೆ.

ನನ್ನ ಅಣ್ಣ-ಅತ್ತಿಗೆ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಅವರ ಮದುವೆ ದಿನವೇ ಪುನೀತ್ ರಾಜ್‌ಕುಮಾರ್ ಅವರ ಸಾವಾಗಿತ್ತು. ಹೀಗಾಗಿ ನಾನು ಅತ್ತಿಗೆ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಲಿಲ್ಲ. ಸಿನಿಮಾಗಳಲ್ಲಿ ಇರುವ ರೀತಿ ಅತ್ತಿಗೆ ಬಂದರೆ ಸಮಸ್ಯೆ ಆಗತ್ತೆ ಅಂತ ನಾನು ಅಂದಿಕೊಂಡಿದ್ದೆ. ಆದರೆ ಸುಚಿ ತುಂಬ ಒಳ್ಳೆಯವರು. ನನಗೆ ಏನೇ ಸಮಸ್ಯೆ ಆದರೂ ಸುಚಿ ನೋಡಿಕೊಳ್ತಾರೆ, ಅವರು ನನಗೆ ದೇವರು ಥರ. ಅಣ್ಣ ಸಂತೋಷ್ ಕೂಡ ಸಾಫ್ಟ್‌ವೇರ್ ಇಂಜಿನಿಯರ್. ಹೀಗಾಗಿ ಅವನು ಎಐ ಇಮೇಜ್ ಕ್ರಿಯೇಟ್ ಮಾಡಿ ಪ್ರಚಾರ ಮಾಡುತ್ತಿದ್ದ ಎಂದು ಸಂಗೀತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.