ಪಾಸಿಟಿವ್ ಗೌತಮಿ ಮನೆಯಿಂದ ಹೊರಬನ್ನಿ ಎಂದು ಖಡಕ್ ಆಗಿ ಹೇಳಿದ ಸುದೀಪ್
Jan 19, 2025, 09:40 IST
|

ಫಿನಾಲೆಗೆ ಒಂದು ವಾರ ಬಾಕಿ ಇರುವಾಗ ಗೌತಮಿ ಜಾಧವ್ ಅವರು ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದು, ವೀಕ್ಷಕರನ್ನು ರಂಜಿಸುವಲ್ಲಿ ಗೌತಮಿ ಯಶಸ್ವಿಯಾಗಿದ್ದರು. ನಿನ್ನೆಯ ಕಿಚ್ಚನ ಎಪಿಸೋಡ್ನಲ್ಲಿ ಬಿಗ್ಬಾಸ್ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ.
ಎಲಿಮಿನೇಟ್ ಆಗ್ತಿದ್ದಂತೆ, ವೇದಿಕೆಯಲ್ಲಿ ಕಿಚ್ಚ ಸುದೀಪ್ಗೆ ಗೌತಮಿ ಎದುರಾದರು. ಬರ್ತಿದ್ದಂತೆಯೇ ಸುದೀಪ್, ಎಲ್ಲಿ ತಪ್ಪು ಮಾಡಿದ್ರಿ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಗೌತಮಿ, ತಪ್ಪು ನನ್ನ ವ್ಯಕ್ತಿತ್ವ ಅನ್ಸುತ್ತೆ. ಮೊದಲು ಬಿಗ್ಬಾಸ್ ಶೋಗೆ ಬರ್ತೀರಾ ಎಂದು ಕೇಳಿದಾಗ ‘ನಾನಾ’ ಎಂದು ಪ್ರಶ್ನೆ ಮಾಡಿದ್ದೆ.ಯಾಕೆಂದ್ರೆ ಹೊರಗಡೆ ಇರುವ ನನ್ನ ಪ್ರಪಂಚವೇ ಬೇರೆ ರೀತಿಯಲ್ಲಿ ಇತ್ತು. ಇಲ್ಲಿ ಪ್ರತಿಯೊಂದನ್ನೂ ನೋಡಿದ ತಕ್ಷಣ ಪ್ರಶ್ನೆ ಮಾಡಬೇಕಾಗಿತ್ತು. ಆದರೆ ನಾನು ಎದುರುಗಡೆ ಇರೋರ ಬಗ್ಗೆ ಯೋಚನೆ ಮಾಡ್ತೀನಿ. ಅದು ನನಗೆ ಪ್ಲಸ್ ಮತ್ತು ಮೈನಸ್ ಆಗಿದೆ ಅಂತಾ ಭಾವಿಸುತ್ತೇನೆ. ನನ್ನಲ್ಲಿರುವ ಧನಾತ್ಮಕ ವಿಚಾರ ಇಲ್ಲಿವರೆಗೆ ಕರೆದುಕೊಂಡು ಬಂದಿದೆ. ಒಂದೇ ಒಂದು ಮೈನಸ್ನಿಂದ ಬಿಗ್ಬಾಸ್ ಫಿನಾಲೆಗೆ ಹೋಗಲು ಸಾಧ್ಯವಾಗಲಿಲ್ಲ.
ನಾನಿಲ್ಲಿ ತುಂಬಾ ವಿಚಾರಗಳನ್ನು ಕಲಿತಿದ್ದೇನೆ. ನನ್ನ ಮುಂದಿನ ಬದುಕಿಗೆ ಅದು ಪಾಠವಾಗಲಿದೆ. ನಾನು ತುಂಬಾ ಯೋಚನೆ ಮಾಡುತ್ತಿದ್ದೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಸರಿಯಾದ ಬೇಸ್ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ನಾನು ಬಿಗ್ಬಾಸ್ಗೆ ಧನ್ಯವಾದ ಹೇಳುತ್ತೇನೆ. ಅವಕಾಶ ಮಾಡಿಕೊಟ್ಟ ಬಿಗ್ಬಾಸ್ ವೇದಿಕೆಗೆ ಚಿರಋಣಿ. ಎಲ್ಲೋ ಒಂದು ಕಡೆ ಕೂತು ಗೆಲುವಿಗಾಗಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025