ದ ರ್ಶನ್ ಸಹವಾಸವೇ ಬೇಡ ಎಂದು ಕೈಮುಗಿದ ಸುದೀಪ್;

 | 
Y

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್ ಬರ್ಬರವಾಗಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.  ​ಫ್ರೆಂಡ್​ಶಿಪ್​ ಬೇರೆ ನ್ಯಾಯ ಬೇರೆ ಎಂದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ದಾರೆ.ಯಾರು ತಪ್ಪಿಸ್ಥರು ಅವರಿಗೆ ಶಿಕ್ಷೆ ಆಗಲಿ ಎಂದು ಸುದೀಪ್ ಹೇಳಿದ್ರು. ​

ಊರು ಯಾವುದೇ ಆಗಲಿ ಅನ್ಯಾಯ ಆದವರಿಗೆ ನ್ಯಾಯ ಸಿಗೋದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡ್ತಿದೆ ಎಂದು ಹೇಳಿದ್ರು. ಕಾನೂನು ಬಲೆ ಅನ್ನೋದು ತಪ್ಪು, ಏನು ಕಾಣಿಸ್ತಿದೆ ಅದನ್ನೇ ನೋಡ್ತಿದ್ದೀವಿ. ಮಾಧ್ಯಮಗಳು ಪ್ರಯತ್ನ ಹಾಕಿ ಶ್ರಮವಹಿಸ್ತಿದೆ. ಪೊಲೀಸ್ ಸಿಬ್ಬಂದಿ ಕೂಡ ಕೆಲಸ ಮಾಡ್ತಿದೆ. ನಾನು ಅವರ ಪರ, ಇವರ ಪರ ಮಾತಾಡಲ್ಲ. ರೇಣುಕಾಸ್ವಾಮಿ ಪತ್ನಿ ಸಹನಾಗೆ ನ್ಯಾಯ ಸಿಗ್ಬೇಕು ಅಷ್ಟೇ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

2011ರಲ್ಲಿ ನಡೆದ ದರ್ಶನ್ ಕೌಟುಂಬಿಕ ಕಲಹದ ಬಗ್ಗೆ ನಟ ಕಿಚ್ಚ ಸುದೀಪ್ ಪರೋಕ್ಷವಾಗಿ ಮಾತಾಡಿದ್ದಾರೆ. ಕೌಟುಂಬಿಕ ಕಲಹದಲ್ಲಿ ಸಂಧಾನ ಮಾಡಲು ಹೋದವರೇ ಕೊನೆಗೆ ಕೆಟ್ಟವರಾಗಿದ್ರು. ಬಳಿಕ ಅವರೇ ಒಂದಾದ್ರು ಎಂದು ಸುದೀಪ್ ಹೇಳಿದ್ರು.ಯಾರೋ ಒಬ್ಬರು ಬಂದು ಚೆನ್ನಾಗಿ ಹೊಡೀತಾನೆ ಎಂದು ಇನ್ನೊಬ್ಬರ ಮನೆಗೆ ಹೋಗಿ ನೋವು ಹೇಳಿಕೊಂಡ್ರು. ಆದ್ರೆ ಬಳಿಕ ಸಂಧಾನ ಮಾಡಲು ಹೋದವರೇ ದೂರವಾದ್ರು ಎಂದು ಪರೋಕ್ಷವಾಗಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಕೌಟುಂಬಿಕ ಕಲಹದ​ ಬಗ್ಗೆ ಸುದೀಪ್​ ಮಾತಾಡಿದ್ದಾರೆ.

ಮೊದಲು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕಿದೆ. ಯಾವತ್ತು ಈ ತರ ಆಗಬಾರದು. ದರ್ಶನ್ ವಿಚಾರ ಎಂದು ಇಲ್ಲಿ ಬರೋದಿಲ್ಲ.  ಎಷ್ಟೋ ವರ್ಷಗಳ ಇತಿಹಾಸ ಚಿತ್ರರಂಗಕ್ಕಿದೆ. ನನ್ ಕಣ್ ಮುಂದೆ ಆ ಫ್ಯಾಮಿಲಿ ಮಾತ್ರ ಬರ್ತಿದೆ ಎಂದು ಸುದೀಪ್ ಹೇಳಿದ್ದಾರೆ. ಈಗ ನಡೆಯುತ್ತಿರುವುದ ಯಾವುದು ಸರಿಯಿಲ್ಲ. ಇಂಥಹ ಬೆಳವಣಿಗೆಯನ್ನು ನೋಡಿದ್ರೆ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಿದೆ ಎನಿಸುತ್ತಿದೆ. 

ಯಾರು ಏನೇ ಮಾಡಿದ್ರು ಚಿತ್ರರಂಗ ಹೆಸರು ಕೇಳಿ ಬರ್ತಿದೆ. ಈ ಪ್ರಕರಣದಲ್ಲಿ ತಪ್ಪಿಸ್ಥರಿಗೆ ಶಿಕ್ಷೆ ಆಗುವ ಮೂಲಕ ಚಿತ್ರರಂಗಕ್ಕೆ ಕ್ಲೀನ್ ಚಿಟ್ ಸಿಗಬೇಕಿದೆ ಎಂದು ಸುದೀಪ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.