ಮಗುವಿನ ಚಿಕಿತ್ಸೆಗೆ 16 ಕೋಟಿ ಬೇಕಾಗಿದೆ, ದಯವಿಟ್ಟು ಸಹಾಯ ಮಾಡಿ‌ ಎಂದು ಕಣ್ಣೀರು ಹಾಕಿದ ಸುದೀಪ್

 | 
Bji
ಸ್ಯಾಂಡ್‌ಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಮುಂದಾಗಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಗುವಿನ ಸಹಾಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ವಿಡಿಯೋ ಸಂದೇಶದ ಮೂಲಕ ನಟ ಕಿಚ್ಚ ಸುದೀಪ್‌ ಅವರು ಮನವಿ ಮಾಡಿದ್ದಾರೆ. ಒಂದೂವರೆ ವರ್ಷದ ಈ ಮಗು ಸ್ಫೈನಲ್ ಮಸ್ಕ್ಯುಲರ್ ಆ್ಯಟ್ರಫಿಯಿಂದ ಬಳಲುತ್ತಿದೆ. ಈ ಚಿಕಿತ್ಸೆಗಾಗಿ 16 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ನಾನು ಸಹ ಸಹಾಯ ಮಾಡುತ್ತೇನೆ ಎಂದು ವಿಡಿಯೋ ಮೂಲಕ ಸುದೀಪ್‌ ಅವರು ಹೇಳಿದ್ದಾರೆ.
ಒಂದೂವರೆ ವರ್ಷದ ಈ ಕೀರ್ತನಾ ಅಪರೂಪದ ಜೆನೆಟಿಕಲ್ ಡಿಸಾರ್ಡರ್‌ಗೆ ತುತ್ತಾಗಿದೆ. ಕೀರ್ತನಾ ಸೂಕ್ತ ಚಿಕಿತ್ಸೆ ನೀಡಲು ಬರೋಬ್ಬರಿ 16 ಕೋಟಿ ರೂಪಾಯಿ ಅಗತ್ಯವಿದ್ದು, ಮಗುವಿಗಾಗಿ ಪೋಷಕರ ಪರವಾಗಿ ಕಿಚ್ಚ ಸುದೀಪ್‌ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿರೋ ಕಿಶೋರ್ ಎಂಬುವವರ ಪುತ್ರಿಯೇ ಈ ಕೀರ್ತನಾ. ಕಿಶೋರ್ ಅವರು ಮಗಳ ಜೀವ ಉಳಿಸಲು ತನ್ನ ಆಸ್ತಿಯನ್ನೆಲ್ಲಾ ಮಾರಿ ಹೋರಾಟ ಮಾಡುತ್ತಿದ್ದಾರೆ.
ಈ ವಿಡಿಯೋ ನೋಡುತ್ತಿವರುವ ಪ್ರತಿಯೊಬ್ಬರಿಗೂ ಈ ಕಿಚ್ಚನಿಂದ ನಮಸ್ತೆ. ವಿಡಿಯೋ ಮಾಡಲು ಒಂದು ಕಾರಣ ಇದೆ. ಬಹಳ ಮುಖ್ಯವಾದಂತಹ ಕಾರಣ. ನಮ್ಮ ಫಾರೆಸ್ಟ್ ಡಿಪಾರ್ಟ್ಮೆಂಟ್ ಅಲ್ಲಿ ವರ್ಕ್ ಮಾಡ್ತಿದ್ದಂತಹ ಆಫೀಸರ್... ಅವ್ರ ಹೆಸರು ಕಿಶೋರ್. ಅವರ ಧರ್ಮಪತ್ನಿ ನಾಗಶ್ರೀ ಅವರು. ದಂಪತಿಗೆ ಒಂದು ಪುಟ್ಟ ಮಗು. 1 ವರ್ಷ 10 ತಿಂಗಳು. ಹೆಸರು ಕೀರ್ತನ ಅಂತಾ. ಬಹಳ ಸುಂದರವಾದಂತಹ ಒಂದು ಮುಗ್ಧ ಮಗು. ಈ ಮಗುವಿಗೆ ಒಂದು ರೇರ್ ಜೆನಟಿಕಲ್ ಡಿಸಾರ್ಡರ್ ಆಗಿದೆ. SMA - ಸ್ಪೈನಲ್ ಮಸ್ಕುಲರ್ ಅಟ್ರೊಫಿ ಅಂತಾ. ಬಹಳ ರೇರ್ ಜೆನಟಿಕಲ್ ಡಿಸಾರ್ಡರ್ ಇದು ಎಂದು ಮಗುವಿನ ಅನಾರೋಗ್ಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದಕ್ಕೊಂದು ಔಷಧಿ ಇದೆ. ಗುಣ ಆಗೋವಂತಹ ಸಾಧ್ಯತೆಗಳಿವೆ. ಆದ್ರೆ ಆ ಒಂದು ಮೆಡಿಕಲ್ ಟ್ರೀಟ್ಮೆಂಟ್ಗೆ ಬೇಕಾದಂತಹ ಒಂದು ಮೊತ್ತ ಕೇಳಿದ್ರೆ ಮೈಜುಂ ಅನಿಸುತ್ತದೆ. ಈ ಚಿಕಿತ್ಸೆಗೆ ಬೇಕಾಗಿರೋದು 16 ಕೋಟಿ ರೂಪಾಯಿ. ತಂದೆ ತಾಯಿ ಎಲ್ಲದನ್ನೂ ಬಿಟ್ಟು, ಅವರ ಆಸ್ತಿಯನ್ನೂ ಮಾರಿ, ಎಲ್ಲವನ್ನೂ ಮಾಡಿ ಈ ಮಗುವನ್ನು ಉಳಿಸಿಕೊಳ್ಳೋ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನ ಇದಕ್ಕೆ ಕೈಜೊಡಿಸಿದ್ದಾರೆ. ಸಾಕಷ್ಟು ಜನ ಸಹಾಯ ಮಾಡಲು ಮುಂದೆ ಬಂದಿದ್ದಾರೆ. 
ನನ್ನ ಕೈಲಾದಷ್ಟು, ನಾನೇನು ಮಾಡಬಲ್ಲೆ ಅದನ್ನು ಮಾಡಿದ್ದೇನೆ. ನಾನು ಈ ವಿಡಿಯೋ ಮಾಡಲು ಮುಖ್ಯ ಕಾರಣ ಅಷ್ಟೇನೆ. ಒಂದೇ ಒಂದು ರಿಕ್ವೆಸ್ಟ್. ಇಲ್ಲಿ ಕ್ಯೂಆರ್ ಕೋಡ್ ಇದೆ. ಇದಕ್ಕೆ ನಿಮ್ಮ ಕೈಯಲ್ಲಿ ಎಷ್ಟು ಸಹಾಯ ಮಾಡಕ್ಕಾಗುತ್ತೋ ಖಂಡಿತಾ ಮಾಡಿ. ಆ ಮಗು, ನಮ್ಮ ಕೀರ್ತನಳನ್ನು ಉಳಿಸಿಕೊಳ್ಳೋ ಪ್ರಯತ್ನ ನಾವೆಲ್ಲಾ ಸೇರಿ ಮಾಡೋಡ ಎಂದು ತಿಳಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub