'ಕಾಗೆ ಪ್ರತಾಪ್' ಎಂದವರ ಮುಖಕ್ಕೆ ಮಂಗಳಾರತಿ ಮಾಡಿದ ಸುದೀಪ್, ಡ್ರೋನ್ ಬಗ್ಗೆ ಕಿಚ್ಚನ ಅಭಿಮಾನ

 | 
ರಕದ

ಕನ್ನಡದ ಬಿಗೆಸ್ಟ್​ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 10ರ  ಶೋ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿತ್ತು. ಎಲ್ಲಾ ಬಿಗ್ ಬಾಸ್  ಸೀಸನ್​ಗಳಿಗಿಂತಲೂ ಈ ಹತ್ತರ ಸೀಸನ್ ಕೊಂಚ ವಿಭಿನ್ನವಾಗಿತ್ತು. ಜಗಳ, ವಿವಾದ, ಕಿತ್ತಾಟಗಳಿಂದ ಬಿಗ್ ಬಾಸ್​ ಹೆಚ್ಚು ಸದ್ದು ಮಾಡಿತ್ತು. ಹೆಣ್ಣು ಮಕ್ಕಳು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಆಟವಾಡಿ ತೋರಿಸಿದ್ರು. 

ಫೈನಲಿಸ್ಟ್ ಲಿಸ್ಟ್​ನಲ್ಲಿದ್ದ 6 ಮಂದಿ ಕೂಡ ಉತ್ತಮವಾಗಿಯೇ ಆಟವಾಡಿದ್ರು. ​ಬಿಗ್ ಬಾಸ್​ ಸೀಸನ್​ನ 10ರ ರನ್ನರ್​ಅಪ್​ ಆಗಿ ಡ್ರೋನ್ ಪ್ರತಾಪ್  ಹೊರಹೊಮ್ಮಿದ್ದಾರೆ. ಮೊದಲ ವಾರವೇ ಪ್ರತಾಪ್‌, ಅವರನ್ನು ಮನೆಯ ಸದಸ್ಯರ ಮಾತುಗಳು ಕುಗ್ಗಿಸಿದ್ದವು. ಅಲ್ಲಿ ಆದ ಅವಮಾನದಿಂದ ಬೇಸತ್ತ ಪ್ರತಾಪ್ ಬಾತ್‌ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು. 

ವಿಶೇಷವಾಗಿ ತುಕಾಲಿ ಸಂತೋಷ್ ಅವರು ಪ್ರತಾಪ್ ಮೇಲೆ ಮಾಡಿದ ಜೋಕ್‌ಗಳು ಅವರನ್ನು ಸಾಕಷ್ಟು ನೋವನ್ನುಂಟು ಮಾಡಿದ್ದವು. ವಾರಾಂತ್ಯದಷ್ಟರಲ್ಲಿ ಸಾಕಷ್ಟು ನಿತ್ರಾಣಗೊಂಡಿದ್ದ ಪ್ರತಾಪ್ ಅವರ ಬೆಂಬಲಕ್ಕೆ ನಿಂತಿದ್ದು ಕಿಚ್ಚ ಸುದೀಪ್‌. ಇದೀಗ ಕಿಚ್ಚ ಅವರ ಆಸ್ಕ್ ಮಿ ಎನಿಥಿಂಗ್ ಅಲ್ಲಿ ಅವರ ಅಭಿಮಾನಿಯೊಬ್ಬರು ಪ್ರತಾಪ್ ನಾಟಕ ಮಾಡುತ್ತಿದ್ದಾನೆ. ಈಗಾಗಲೇ ಹಲವು ಜನರನ್ನು ಮೋಸ ಮಾಡಿದ್ದಾನೆ ಎಂದು ಗೊತ್ತಿದೆ ಆದರೂ ಅವನಿಗೆ ರನ್ನರ್ ಪಟ್ಟ ನೀಡಿದ್ದು ಏಕೆ ಎಂದು ಪ್ರಶ್ನೆ ಕೇಳಿದ್ದಾರೆ. 

ಅದಕ್ಕೆ ಕಿಚ್ಚ ಸುದೀಪ್ ಬಹಳ ಚೆನ್ನಾಗಿ ಉತ್ತರ ನೀಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ನಾನು ಯಾರನ್ನೂ ಗೆಲ್ಲಿಸಲೂ ಇಲ್ಲ ಸೋಲಿಸಲು ಇಲ್ಲ. ಗೆದ್ದಿದ್ದು ಸೋತಿದ್ದು ಎರಡು ಅವರಿಗೆ ಬಿಟ್ಟಿದ್ದು. ನೋಡುಗರ ವೋಟಿಂಗ್ ಗೆ ಬಿಟ್ಟಿದ್ದು. ಪ್ರತಾಪ್ ಹೊರಗೇ ಏನೇ ಕೆಟ್ಟ ಕೆಲಸ ಮಾಡಿದ್ದರೂ ಮನೆಯಲ್ಲಿ ಚೆನ್ನಾಗಿ ಸ್ಪರ್ಧಿಸಿದ್ದಾರೆ ಎಂದು ಕಿಚ್ಚ ಪ್ರತಾಪ್ ಪರ ಮಾತಾಡಿ ಎಲ್ಲರ ಮನ ಗೆದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.