ಐಶಾರಾಮಿ ಮನೆ ಕಟ್ಟಲು ಹೋಗಿ ಸಾಲದ ಸುಳಿಯಲ್ಲಿ ಸಿಲುಕಿದ ಸುದೀಪ್, ಸಹಾಯಕ್ಕೆ ಬರುತ್ತಾರಾ ದರ್ಶನ್

 | 
Bd

ಕಿಚ್ಚ ಸುದೀಪ್ ವಿರುದ್ಧ ಸ್ಯಾಂಡಲ್​ವುಡ್ ನಿರ್ಮಾಪಕರು ಸಿಡಿದೆದ್ದಿದ್ದಾರೆ. ಎಮ್. ಎನ್ ಕುಮಾರ್ ಆಯ್ತು ಈಗ ಕಿಚ್ಚನ ವಿರುದ್ದ ಮತ್ತೊಬ್ಬ ನಿರ್ಮಾಪಕರು ಆರೋಪಗಳ ಸುರಿಮಳೆಗೈದಿದ್ದಾರೆ. ನಟ ಕಿಚ್ಚ ಸುದೀಪ್​ಗೆ ಬ್ರೇಕ್ ಕೊಟ್ಟ ಹುಚ್ಚ ಸಿನಿಮಾದ ನಿರ್ಮಾಪಕ ರೆಹಮಾನ್ ಸುದ್ದಿಗೋಷ್ಠಿ ನಡೆಸಿ ಸುದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 

ನಿರ್ಮಾಪಕರ ಆರೋಪಗಳಿಗೆ ಕೊನೆಗೂ ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದಾರೆ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದ ನಟ‌ ಸುದೀಪ್, ನಿರ್ಮಾಪಕರ ಆರೋಪಗಳಿಗೆ ಉತ್ತರ ನೀಡಿದ್ದಾರೆ. ನಿರ್ಮಾಪಕರ ಎಮ್ ಎನ್ ಕುಮಾರ್ ನನ್ನ ಮೇಲೆ ಅರೋಪ ಮಾಡಿದ್ದಾರೆ ನನ್ನ ಮೇಲೆ ಅರೋಪ ಮಾಡಲು ಅವರು ಬಂದಾಗ ನೀವು ಸರಿಯಾದ ದಾಖಲೆಗಳಿವೆಯ ಎಂದು ಪರೀಕ್ಷಿಸ ಮಾಡಬೇಕಿತ್ತು.

ಈ ಹಿಂದೆ ಇತರರ ಮೇಲೆ ಇಂತಹ ಅರೋಪಗಳ ಬಂದಾಗ ದೂರುಗಳು ಬಂದಾಗ ದಾಖಲೆ‌ ಪರಿಶೀಲನೆ ಆಗ್ತಿತ್ತು. ಅದರೆ ನನ್ನ ವಿಚಾರದಲ್ಲಿ ಈ ಕೆಲಸ ಆಗಿಲ್ಲ ಯಾಕೆ?, ಇಂಡಸ್ಟ್ರಿಯಲ್ಲಿ ಸಾಕಷ್ಟು ಮಂದಿ ನನಗೆ ಮೋಸ ಮಾಡಿದ್ದಾರೆ. ದಾಖಲೆಗಳಿಲ್ಲದ ಕಾರಣ ನಾನು ಸುಮ್ಮನೆ ಆಗಿದ್ದೇನೆ. ಕುಮಾರ್ ಅವರ ವಿಚಾರದಲ್ಲೂ ನಾನು ಮಾನವೀಯತೆಯ ಆಧಾರದಲ್ಲಿ ನೆರವು ನೀಡಲು ನಿರ್ಧರಿಸಿದ್ದೆ. ಅದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. 

ಸುದ್ದಿಗೋಷ್ಠಿಯಲ್ಲಿ ಸುರೇಶ್ ಅವರು ಕುಮಾರ್ ಆತ್ಮಹತ್ಯೆ ಮಾಡಿಕೊಂಡ್ರೆ ನಾನು ಹೊಣೆ ಅಂದಿದ್ದಾರೆ. ಸುರೇಶ್ ಅವರ ಈ‌ ಹೇಳಿಕೆ ನನಗೆ ತುಂಬಾ ನೋವುಂಟು ಮಾಡಿದೆ. ಸಮಾಜಕ್ಕೆ ಅಪಾಯಕಾರಿ ಸಂದೇಶ್ ನೀಡುವಂತಿದೆ. ಸುರೇಶ್ ಅವರಿಗೂ ನೋಟಿಸ್​ ನೀಡಿದ್ದೇನೆ. ಯಾವಾಗ ಚಿತ್ರರಂಗದಲ್ಲಿ ಇಂತಹ ಕೆಟ್ಟ ಬೆಳವಣಿಗೆ ಶುರುವಾಯ್ತು. ಸುರೇಶ್ ಹೇಳಿಕೆ ಕಾರಣದಿಂದಾಗಿ ನಾನು ನೋಟಿಸ್ ಕಳಿಸಿದ್ದೇನೆ ಹೊರತು ಆಕ್ರೋಶದಿಂದ ಅಲ್ಲ.

27 ವರ್ಷಗಳಿಂದ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇನೆ. 45 ಸಿನಿಮಾಗಳಲ್ಲಿ ನಾಯಕ ನಟನಾಗಿದ್ದೇನೆ. ಎಂದಿಗೂ ಕಪ್ಪು ಚುಕ್ಕೆ ಬರುವಂತಹ ಒಂದೇ ಒಂದು ಕೆಲಸ ಮಾಡಿಲ್ಲ. ನನಗೆ ಕೆಲವೊಮ್ಮೆ ಮೋಸವಾಗಿದೆ. ಅನೇಕ ನಿರ್ಮಾಪಕರು ನನಗೆ ಇನ್ನು ಕೂಡ ಕೊಡಬೇಕಾದ ಹಣ ನೀಡಿಲ್ಲ. ನಾನು ಎಂದಿಗೂ ವಾಣಿಜ್ಯ ಮಂಡಳಿ ಮೆಟ್ಟಿಲು ಹತ್ತಿಲ್ಲ. ನಿಮ್ಮ ಪ್ರೀತಿಯ ಸುದೀಪ್ ಒಳ್ಳೆಯ ತನಕ್ಕೆ ಹೆಸರಾಗಿದ್ದಾನೆ ಹೊರತು ಕೆಟ್ಟತನಕ್ಕೆ ಅಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.