ಬಿಗ್ಬಾಸ್ ನಿಂದ ಸುದೀಪ್ ಹೊರಗೆ, ಲೈವ್ ಬಂದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಹುಚ್ಚ ವೆಂಕಟ್
Updated: Oct 18, 2024, 09:18 IST
|
ನಟ ಸುದೀಪ್ ಇನ್ನು ಮುಂದೆ ನಾನು ಬಿಗ್‌ಬಾಸ್ ಶೋ ನಿರೂಪಣೆ ಮಾಡಲ್ಲ, ಇದೇ ನನ್ನ ಕೊನೆ ಸೀಸನ್ ಎಂದು ಹೇಳಿದ್ದರು. ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಕಿಚ್ಚನ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಎನ್ನುವ ಚರ್ಚೆ ನಡೀತಿದೆ.ಇನ್ನೂ ಬಿಗ್‌ಬಾಸ್ ಶೋ ಆಯೋಜಕರ ಜೊತೆಗಿನ ಭಿನ್ನಾಭಿಪ್ರಾಯದಿಂದಲೇ ಸುದೀಪ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ನಟ ಕಿಚ್ಚ ಸುದೀಪ್ ಅವರಿಗೆ ಅವಮಾನವಾಗಿದೆ. ಅದಕ್ಕೆ ಈ ನಿರ್ಣಯ ಎಂದು ಬಿಗ್‌ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಹೇಳಿದ್ದರು. ಇದೆಲ್ಲದರ ಬೆನ್ನಲ್ಲೇ ಸುದೀಪ್ ಇದೀಗ ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.ನನ್ನ ಟ್ವೀಟ್ ಬಗ್ಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಖುಷಿ ತಂದಿದೆ. ಆದಾಗ್ಯೂ, ಚಾನಲ್ ಹಾಗೂ ನನ್ನ ನಡುವೆ ಯಾವುದೋ ಸಂಘರ್ಷ ಇದೆ ಎಂದು ಊಹಿಸಿಕೊಂಡು ಕಾಮೆಂಟ್ ಹಾಗೂ ವೀಡಿಯೋ ಮಾಡುವವರಲ್ಲಿ ನಾನು ಕೇಳಿಕೊಳ್ತೀನಿ.
ಕಲರ್ಸ್ ಕನ್ನಡ ಹಾಗೂ ನಾನು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ಹಂಚಿಕೊಂಡಿದ್ದೇವೆ. ಅಗೌರವ ಎಂಬ ಪದವನ್ನು ಅದರೊಂದಿಗೆ ಸೇರಿಸುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಈ ಕುರಿತಾಗಿ ಹಲವಾರು ಬಿಗ್ಬಾಸ್ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹುಚ್ಚ ವೆಂಕಟ್ ಅವರು ನೀವಲ್ಲದೆ ಬಿಗ್ಬಾಸ್ ಇಲ್ಲ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಎಲ್ಲವೂ ಆಗಿರುವ 'ಹುಚ್ಚ' ವೆಂಕಟ್, 'ಬಿಗ್ ಬಾಸ್' ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದರು. ಆದರೆ ಶೋನಲ್ಲಿ ಸಹ ಸ್ಪರ್ಧಿ ಮೇಲೆ ಕೈ ಮಾಡಿ, ಅಲ್ಲಿಂದ ಬಂದಿದ್ದರು. ಕೆಲ ದಿನಗಳ ಹಿಂದಷ್ಟೇ ಅವರಿಗೆ ಪುನಃ 'ಬಿಗ್ ಬಾಸ್' ಮನೆಗೆ ಹೋಗುವ ಬಯಕೆ ಉಂಟಾಗಿತ್ತು .
ಅದಕ್ಕಾಗಿ ಅವರು ಒಂದು ವಿಡಿಯೋ ಮಾಡಿ, ಅದನ್ನು ಹಂಚಿಕೊಂಡಿದ್ದರು. ಆದರೆ ಅದರ ಬೆನ್ನಲ್ಲೇ ಇದೀಗ ಸುದೀಪ್ ಸರ್ ಇನ್ನು ಮುಂದೆ ಬಿಗ್ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎನ್ನುವ ಬೇಸರ ತೋಡಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.