ಸೀರಿಯಲ್ ನಲ್ಲಿ ಇಂತಹ ಸೀನ್ ಮಾಡಲು ಮುಂದಾದ ಸುಧಾರಾಣಿ; ನೆಟ್ಟಿಗರು ಗರಂ

 | 
Hh

ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು ಸರಿದು ತಂದೆಯನ್ನು ಒಪ್ಪಿಕೊಂಡಿದ್ದಾನೆ ಮಗ ಅವಿನಾಶ್​. ಇದೇ ಖುಷಿಯಲ್ಲಿರೋ ಮಾಧವ-ತುಳಿಸಿ ನಡುವೇ ಕ್ಯೂಟ್​ ಸನ್ನಿವೇಶ ಜರುಗಿದೆ. ಹೌದು, ತುಳಿಸಿ-ಮಾಧವನ ಸ್ನೇಹ-ಪ್ರೀತಿ ತುಂಬಿದ ಈ ಪ್ರೊಮೋಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. 

ಅದೇ ರೀತಿ ಅವಿನಾಶ್​​ ತಂದೆ ಕುರಿತು ಆಡಿದ ಮಾತುಗಳು, ಮಗನ ಪ್ರೀತಿ ಕಂಡು ಕಣ್ಣೀರಿಟ್ಟ ಮಾಧವನ ಮಮತೆ ವೀಕ್ಷಕರನ್ನ ಭಾವುಕರನ್ನಾಗಿಸಿದೆ. ನಮ್ಮ ತಂದೆ ನೆನಪಾದ್ರೂ ಅಂತ ಅದೇಷ್ಟೋ ಜನ ಕಮೆಂಟ್​ ಮೂಲಕ ಅಪ್ಪ-ಮಗನ ದೃಶ್ಯವನ್ನ ಹಾಡಿ ಹೊಗಳುತ್ತಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ದೃಶ್ಯಗಳು, ಸಂಭಾಷಣೆ ಜನರ ಮನಸ್ಸು ಗೆದ್ದಿವೆ. ಅದರಲ್ಲೂ ಇತ್ತೀಚೆಗೆ ತುಳಸಿ ಭರತನಾಟ್ಯ ಮಾಡಿದ ದೃಶ್ಯ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಚಂದನವನದ ಚಲುವೆ ಸುಧಾರಾಣಿ ಅವರ ಪರ್ಫಾಮನ್ಸ್​ ಅದ್ಭುತವಾಗಿತ್ತು. ನೃತ್ಯ ಮುಗಿದ ನಂತರ ಸನ್ನಿವೇಶದ ಅನುಸಾರ ಪೂರ್ವಿ ಕಾಲಿಗೆ ನಮಸ್ಕಾರ ಮಾಡಿದ್ದು ವೀಕ್ಷಕರಲ್ಲಿ ರೋಮಾಂಚನ ಸೃಷ್ಟಿಸಿತ್ತು. ದೊಡ್ಡ ಕಲಾವಿದೆ ಆಗಿ ಇಷ್ಟು ಶೃದ್ಧೆ, ಭಕ್ತಿ ಭಾವದಿಂದ ನೃತ್ಯ ಮಾಡಿದ್ರಿ ಸಲಾಂ ಸುದಮ್ಮ. ಅದ್ಭುತ ಕಲಾವಿದೆ ನೀವು ಅಂತಲ್ಲಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ ನಟಿ ಸುಧಾರಾಣಿ. ಭರತನಾಟ್ಯ ಕಲಿತು ಮರೆತಿದ್ದೆ. ನನ್ನ ಗುರುಗಳು, ಮಗಳು ನಿಧಿ ಹಾಗೂ ಇಡೀ ಶ್ರೀರಸ್ತು ಶುಭಮಸ್ತು ತಂಡಕ್ಕೆ ಧನ್ಯವಾದ ಹೇಳ್ತಿನಿ. ನೀವೂ ತೋರಿಸಿದ ಪ್ರೀತಿಯನ್ನ ನನ್ನ ಹೃದಯದಲ್ಲಿ ಹೇಗೆ ತುಂಬಿ ಇಟ್ಟುಕೊಳ್ಳಿ ಅಂತ ಗೊತ್ತಾಗ್ಗತಿಲ್ಲ ಥಾಂಕ್ಯೂ ಥಾಂಕ್ಯೂ ಸೋ ಮಚ್​ ಎಂದು ಭಾವುಕ ನುಡಿಗಳನ್ನ ಹೇಳಿದ್ದಾರೆ. ಒಟ್ಟಿನಲ್ಲಿ ಶ್ರೀರಸ್ತು ಶುಭಮಸ್ತು ಅಪ್ಪ-ಅಮ್ಮನ ವ್ಯಾಲ್ಯೂ ಹೇಳಿಕೊಡ್ತಿದೆ ಅಂದ್ರೆ ತಪ್ಪಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.