ಸುಧಾರಾಣಿ ಮಗಳ ಅಂದಚೆಂದಕ್ಕೆ ಇಡೀ ಕನ್ನಡಿಗರು ಮರುಳು, ರಚಿತಾ ರಾಮ್ ಕೂಡ‌ ಲೆಕ್ಕಕ್ಕೆ ಸಿಗಲ್ಲ

 | 
ತಂ
ಒಂದು ಕಾಲದಲ್ಲಿ ಸ್ಟಾರ್‌ ಹೀರೋಯಿನ್‌ ಆಗಿ ಸ್ಯಾಂಡಲ್‌ವುಡ್‌​ ಆಳಿದ ಸುಧಾರಾಣಿ, ಇದೀಗ ಕಿರುತೆರೆ ಮತ್ತು ಪೋಷಕ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಇಷ್ಟು ವರ್ಷವಾದರೂ ನಟಿ ಸುಧಾರಾಣಿ ಅವರ ಬ್ಯೂಟಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಸುಧಾರಾಣಿ ಅವರ ಪುತ್ರಿ ಕೂಡ ಅಮ್ಮನಂತೆಯೇ ಸುಂದರವಾಗಿದ್ದಾರೆ. ದೇವಲೋಕದ ಅಪ್ಸರೆಯಂತೆ ಕಾಣುತ್ತಾರೆ. ಸುಧಾರಾಣಿ ಪುತ್ರಿಯ ಹೆಸರು ನಿಧಿ ರಾವ್‌. 
ನಟಿ ಸುಧಾರಾಣಿ ತಮ್ಮ ಮಗಳನ್ನು ಪ್ರೀತಿಯಿಂದ ಸುಬ್ಬಿಕುಟ್ಟಿ ಎಂದು ಕರೆಯುತ್ತಾರೆ. ನಿಧಿ ರಾವ್‌ ಫೋಟೋಗಳನ್ನು ಸುಧಾರಾಣಿ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಮ್ಮನಷ್ಟೇ ಚೆಲುವೆ ಆಗಿರುವ ಸುಧಾರಾಣಿಯ ಮಗಳು ನಿಧಿ ಕೂಡ ಫೇಮಸ್‌ ಕಲಾವಿದೆ ಆಗಿದ್ದಾರೆ. ಸುಧಾರಾಣಿ ಅವರಂತೆಯೇ ನಿಧಿ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಈಗಾಗಲೇ ರಂಗಪ್ರವೇಶ ಮಾಡಿದ್ದಾರೆ.
ಭರತನಾಟ್ಯ ಮತ್ತು ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದಿರುವ ನಿಧಿ, ನಟನೆಯಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಳ್ಳೊಳ್ಳೆ ಸಿನಿಮಾ ಆಫರ್‌ ಬರುತ್ತಿದ್ದು, ಶೀಘ್ರದಲ್ಲೇ ನಟನೆಗೆ ಎಂಟ್ರಿಕೊಡಬಹುದು ಎನ್ನಲಾಗಿದೆ. ಸುಧಾರಾಣಿ ಸಿನಿಮಾ, ಸೀರಿಯಲ್‌ನಲ್ಲಿ ಎಷ್ಟು ಬ್ಯುಸಿ ಇರ್ತಾರೋ ಫ್ಯಾಮಿಲಿಗೂ ತುಂಬಾನೇ ಸಮಯ ಕೊಡುತ್ತಾರೆ. ಗಂಡ, ಮಗಳೊಟ್ಟಿಗೆ ಸಮಯ ಕಳೆಯುವುದನ್ನು ಮಿಸ್ ಮಾಡುವುದಿಲ್ಲ. ಅದರಲ್ಲೂ ಮಗಳೊಟ್ಟಿಗೆ ಜಾಲಿ ಮಾಡುವುದನ್ನು ಮರೆಯಲ್ಲ. ಹಬ್ಬ ಹರಿದಿನಗಳಲ್ಲಿ ಇಬ್ಬರು ಜೊತೆಯಾಗಿ ಮನೆ ಅಲಂಕಾರ ಮಾಡಿ, ಹಬ್ಬವನ್ನು ಎಂಜಾಯ್ ಮಾಡುತ್ತಾರೆ.
ಇನ್ನು ಅಮ್ಮನಂತೆ ಮಗಳು ಕೂಡ ಕನ್ನಡ ಇಂಡಸ್ಟ್ರಿಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಜೂನಿಯರ್ ಸುಧಾರಾಣಿಯನ್ನು ಹೊತ್ತು ಮೆರೆಸುವುದಕ್ಕೆ ಅಭಿಮಾನಿಗಳು ಕೂಡ ಕಾಯ್ತಾ ಇದ್ರು. ಸುಧಾರಾಣಿ ಮಗಳು ಇಂಡಸ್ಟ್ರಿಗೆ ಬರ್ತಾರೆಂದರೆ ಆಕ್ಷನ್ ಕಟ್ ಹೇಳೋಕೂ ಸಾಕಷ್ಟು ಜನ ರೆಡಿಯಿದ್ದರು. ಆದರೆ ಈಗ ಉಲ್ಟಾ ಆಗಿದೆ. ನಟನಾ ಕ್ಷೇತ್ರ ಬಿಟ್ಟು ವಕೀಲಿ ವೃತ್ತಿಯೆಡೆಗೆ ನಿಧಿ ಪಯಣ ಬೆಳೆಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.