ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಜೊತೆ ಸುಹಾಸಿನಿ; ಇವರ ಮಗ ಕೂದ ಫೇಮಸ್
Jul 30, 2024, 17:24 IST
|
ನಟಿ ಸುಹಾಸಿನಿ 1961 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.. ಚಿಕ್ಕನಿಂದಲೂ ಕಲೆಯ ಮೇಲೆ ಆಸಕ್ತಿ ಹೊಂದಿದ್ದ ನಟಿ ಆಗಲೇ ಸಣ್ಣ ಪುಟ್ಟ ಡ್ರಾಮಾ, ಡ್ಯಾನ್ಸ್‌ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಹೀಗೆ ಸುಹಾಸಿನಿ ಅವರು ತನ್ನ ಅಜ್ಜಿ ಮತ್ತು ಚಿಕ್ಕಪ್ಪ ಕಮಲ್‌ಹಾಸನ್ ಜೊತೆ ವಾಸಿಸಲು ಮದ್ರಾಸ್‌ಗೆ ಹೋದರು. ಅಲ್ಲಿಂದ ನಟಿ ಸುಹಾಸಿನಿ ಅವರ ಕಲಾ ಕೌಶಲ್ಯ ಇನ್ನೂ ಬೆಳೆಯಿತು. ಚಿಕ್ಕಪ್ಪನನ್ನು ನೋಡಿ ತಾವು ನಟಿಯಾಗಬೇಕು ಎಂದುಕೊಂಡಿದ್ದರು.. ಹೀಗೆ 1980ರಲ್ಲಿ ನೆಂಜತೈ ಕಿಲ್ಲಾತೆ ಎನ್ನುವ ತಮಿಳು ಚಿತ್ರದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು.
ಮೊದಲ ಸಿನಿಮಾದಿಂದಲೇ ತಮ್ಮ ನಟನಾ ಕಲೆಯನ್ನು ತೋರಿಸಿ ತಮಿಳುನಾಡು ರಾಜ್ಯ ಪ್ರಶಸ್ತಿ ಪಡೆದುಕೊಂಡರು. ನಂತರ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ ಇವರಿಗೆ ವಿಷ್ಣುವರ್ಧನ್ ಅವರ ಬಂಧನ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಒಲಿದು ಬರುತ್ತದೆ. ಈ ಮೂಲಕ ನಟಿ ಕನ್ನಡ ಸಿನಿರಂಗಕ್ಕೂ ಪದಾರ್ಪಣೆ ಮಾಡಿದರು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹುಟ್ಟುಹಾಕಿದರು.
ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ ನಟಿ ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ವಿವಾಹವಾದರು. ಈ ದಂಪತಿಗೆ ನಂದನ್ ಎಂಬ ಮಗನು ಇದ್ದಾರೆ.ಸದ್ಯ ನಟಿ ಸುಹಾಸಿನಿ ನಟನೆ ಮಾತ್ರವಲ್ಲದೇ ನಿರ್ಮಾಣದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಇವರು ಅವರ ಪತಿಯ ಸಹಾಯದಿಂದ ಮದ್ರಾಸ್ ಟಾಕೀಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.