ಸ್ವಂತ ಪತ್ನಿಗೆ ಊಟದಲ್ಲಿ ವಿ.ಷ ಕೊಟ್ಟು ಪರಪುಷನ ಪತ್ನಿಯ ಜೊತೆ ಸು.ಖದಾಟ

 | 
ರ್

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯೊಬ್ಬ ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ಪತ್ನಿಯನ್ನು ಕೊಂದ ದಾರುಣ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದ ಈ ಘಟನೆ ಕಾಫಿನಾಡ ಜನತೆ ಮಾತ್ರವಲ್ಲ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರ ಮುಂದೆ ಹತ್ಯೆಯ ರಹಸ್ಯವನ್ನು ಪತಿ ಬಿಚ್ಚಿಟ್ಟಿದ್ದು ಕೇಳಿದರೆ ಶಾಕ್ ಆಗೋದು ಗ್ಯಾರಂಟಿ.

ಕೊಲೆಯಾದ ದುದೈವಿ ಶ್ವೇತಾ ಆಕೆಯ ಪತಿ  ದರ್ಶನ್ ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ಪತ್ನಿ ಕೊಂದಿದ್ದಾನೆ. ತನಿಖೆ ನಡೆಸುತ್ತಿರುವ ಪೊಲೀಸರ ಮುಂದೆ ಹತ್ಯೆಯ ರಹಸ್ಯ ಹಂತಕ ಹೊರ ಹಾಕಿದ್ದಾನೆ. ಅನೈತಿಕ ಸಂಬಂಧಕ್ಕೆ ಅಡ್ಡಲಾಗಿದ್ದ ಹೆಂಡತಿಗೆ ಸೈನೈಡ್ ಬೆರೆಸಿ ಹತ್ಯೆ ಮಾಡಿದ್ದು, ಪತ್ನಿ ಶ್ವೇತಾ ಹತ್ಯೆ ಮಾಡಿದ್ದು ನಾನೇ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಪತ್ನಿ ಶ್ವೇತಾ ಹತ್ಯೆ ಮಾಡಿದ ಬಳಿಕ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದ. ರಾತ್ರಿ ಊಟದಲ್ಲಿ ಸೈನೈಡ್ ಬೆರೆಸಿದ ರಾಗಿ ಮುದ್ದೆ ನೀಡಿದ್ದ. ಶ್ವೇತಾ ಸಾವನ್ನಪ್ಪಿದ್ದ ಬಳಿಕ ಇನ್ನು  ಜೀವವಿದ್ದರೆ ಕಷ್ಟ ಎಂದು ಕೈಗೆ ಸಿರಿಂಜ್ ನಿಂದ ಇಂಜೆಕ್ಟ್ ಮಾಡಿದ್ದ. ಬಳಿಕ ಸಿರಿಂಜ್ ನಿಂದ ಇಂಜೆಕ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಪ್ಲಾನ್ ಮಾಡಿದ್ದ. 

ಈ ಪ್ಲಾನ್ ಉಲ್ಟಾ ಆಗುವ ಆತಂಕದಲ್ಲಿ ಹಾರ್ಟ್ ಅಟ್ಯಾಕ್ ಎಂದು ದರ್ಶನ್ ನಾಟಕ ಮಾಡಿದ್ದ. ಈತನಿಗೂ ಅಶ್ವಿನಿ ಎನ್ನುವ ಮಹಿಳೆಗೂ ಅನೈತಿಕ ಸಂಬಂಧ ಇದ್ದ ಕಾರಣ ದರ್ಶನ್ ಈ ಕೃತ್ಯ ಎಸಗಿದ್ದ. ಮಾತ್ರವಲ್ಲ ಶ್ವೇತಾ ಸಂಬಂಧಿಕರು ಬರುವ ಮುಂಚೆ ಅಂತ್ಯಕ್ರಿಯೆಗೆ ದರ್ಶನ್ ಸಿದ್ದತೆ ಮಾಡಿಕೊಂಡಿದ್ದ. ಅನುಮಾನ ಬಂದ ಪೋಷಕರು ದರ್ಶನ್ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಹೃದಾಯಾಘಾತ ಅಲ್ಲ ಎಂದು ಪ್ರಾಥಮಿಕ ವರದಿ ಬಂತು.

ವರದಿ ಬಂದ ಬಳಿಕ ದರ್ಶನ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಪೊಲೀಸರ ವಿಚಾರಣೆಯಲ್ಲಿ ಸೈನೈಡ್ ಹಂತಕ ದರ್ಶನ್‌ ಸತ್ಯ ಹೊರಹಾಕಿದ್ದಾನೆ.
ಅಷ್ಟಕ್ಕೂ ಕೊಲೆಗಾರ ದರ್ಶನ್  ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕ್ಸ್ ಲ್ಯಾಬ್ ನಡೆಸುತ್ತಿದ್ದ. ಕಾಲೇಜು ದಿನಗಳಿಂದ ದರ್ಶನ್ ಮತ್ತು ಶ್ವೇತಾ ಇಬ್ಬರೂ ಪ್ರೀತಿಸುತ್ತಿದ್ದರು. ಟ್ರೂ ಮೆಡಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ ಎಂಬ ಮಹಿಳೆಯ ಜೊತೆ ದರ್ಶನ್‌ ಅನೈತಿಕ ಸಂಬಂಧ ಹೊಂದಿದ್ದ. 

ಇದನ್ನು ತಿಳಿದ ಪತ್ನಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಳು. ಗಂಡನ ಜೊತೆ ಸಂಬಂಧ ಬಿಡುವಂತೆ ಕಾಲ್‌ಮಾಡಿ ಶ್ವೇತಾ ಅಶ್ವಿನಿಗೆ ಎಚ್ಚರಿಕೆ ಸಹಾ ನೀಡಿದ್ದಳು. ಅಶ್ವಿನಿ ಗೆ ಕಾಲ್ ಮಾಡಿ ಎಚ್ಚರಿಕೆ ನೀಡುತ್ತಿದ್ದಂತೆ ಸೈನೈಡ್ ನೀಡಿ ಹತ್ಯೆ ಮಾಡಲು ದರ್ಶನ್‌ ಪ್ಲಾನ್ ಮಾಡಿದ್ದ. ಬೆಂಗಳೂರಿನಿಂದ ದೇವವೃಂದ ಗ್ರಾಮಕ್ಕೆ ಕರೆತಂದು ಶ್ವೇತಾಳ ಹತ್ಯೆ ಮಾಡಿದ್ದ. ಇದರಿಂದಾಗಿ ಏನೂ ಅರಿಯದ ಮುಗ್ದ ಮಗು ಅನಾಥವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.