ಕರ್ನಾಟಕದಲ್ಲಿ ಬಿಜೆಪಿ ಸೋತ ಬಳಿಕ ಸೂಲಿಬೆಲೆ ಅಬ್ಬರದ ಭಾಷಣ; ರೊ.ಚ್ಚಿಗೆದ್ದ ಖರ್ಗೆ

 | 
Hhh

ಕಲಬುರಗಿಯ ಹಳ್ಳಿಖೇಡ್‌ ಗ್ರಾಮದಲ್ಲಿ ಸೂಲಿಬೆಲೆ ಅವರ ಕಾರ್ಯಕ್ರಮ ನಡೆಸಲು ಹೈಕೋರ್ಟ್‌ ಅನುಮತಿ ನೀಡಿದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ರಾಜ್ಯದ 35 ತಾಲೂಕುಗಳಲ್ಲಿ ಆಗದ ಶಾಂತಿಭಂಗ ಚಿತ್ತಾಪುರದಲ್ಲಿ ಮಾತ್ರ ಆಗುತ್ತದೆಯೇ ಎಂದು ಪ್ರಶ್ನಿಸಿದರು.  ಸಚಿವರಾಗಿದ್ದೂ ಸಹ ಸ್ವಂತ ತನ್ನ ಕ್ಷೇತ್ರದಲ್ಲಿ ಸತ್ಯವನ್ನು ಎದುರಿಸಲಾಗದೇ ಪ್ರಿಯಾಂಕ್‌ ಖರ್ಗೆ ಹೇಡಿತನದಿಂದ ಮುಖ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಯುವ ಬ್ರಿಗೇಡ್‌  ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ಹೆದರಿರುವುದು ಎಲ್ಲರಿಗೂ ಗೊತ್ತು. ಆದರೆ ರಾತ್ರಿ 11 ಗಂಟೆಗೆ ಇದ್ದಕ್ಕಿದ್ದಂತೆಯೇ ನಿಷೇಧಾಜ್ಞೆ ಹೇರುತ್ತಾರೆ. ಕಲಬುರಗಿ ಪ್ರವೇಶಕ್ಕೆ ನಿರ್ಬಂಧಿಸುತ್ತಾರೆ ಎನ್ನುವುದು ಹಾಸ್ಯಾಸ್ಪದ.‌ ಅಷ್ಟು ಮಾತ್ರವಲ್ಲದೇ ನಾಗರಿಕರ ರಕ್ಷಣೆಗಾಗಿ ಇರುವ ಪೊಲೀಸರನ್ನು ತಮ್ಮ ವೈಯಕ್ತಿಕ ಹಿತ  ಸಾಧನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸೂಲಿಬೆಲೆ ಆರೋಪಿಸಿದರು. 

ಪ್ರಿಯಾಂಕ್‌ ಖರ್ಗೆಯದ್ದು ಯಾವಾಗಲೂ ಹಿಟ್‌ ಅಂಡ್‌ ರನ್‌ . ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಓಡಿ ಹೋದವರು. ಮೋದಿಯವರ ಪ್ರಖರತೆಯಿಂದಾಗಿ ಅವರಿಗೆ ಸ್ವಂತ ಕ್ಷೇತ್ರದಲ್ಲೇ ಲೋಕಸಭಾ ಚುನಾವಣೆಯ ಸೋಲಿನ ಭೀತಿ ಎದುರಾಗಿದೆ. ಇಡೀ ಕಾಂಗ್ರೆಸ್‌ ಪಕ್ಷವೇ ಕಂಗಾಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ. 

ದೇಶದಲ್ಲಿ ರಾಷ್ಟ್ರೀಯತೆಯನ್ನು, ದೇಶ ಪ್ರೇಮವನ್ನು ಜಾಗೃತಿ ಮಾಡುವುದೇ ಅಪರಾಧವೆಂದು ಪ್ರಿಯಾಂಕ ಖರ್ಗೆ ತಿಳಿದಂತಿದೆ. ದೇಶ ಭಕ್ತಿ, ನಮ್ಮರಾಷ್ಟ್ರಎಂಬ ಭಾವನೆಯನ್ನು ನಮ್ಮ ಭವಿಷ್ಯದ ಮಕ್ಕಳಿಗೆ ಯಾವತ್ತೂ ತಿಳಿಸುವ ಗೋಜಿಗೆ ಹೋಗದ ಕಾಂಗ್ರೆಸ್ ಪಕ್ಷವು, ದೇಶದೊಳಗೆ ಭಯೋತ್ಪಾದಕನಿಗೆ ಏನಾದಾರೂ ಆದರೆ ಕಣ್ಣೀರಿಡುವ ಪಕ್ಷವಾಗಿದೆ .ಮೋದಿ ಅಪ್ಪನ ಹೆಸರಲ್ಲಿ ಗೆದ್ದು ಬಂದಿಲ್ಲ. 

ಅವರ ಸ್ವಂತ ಕೆಲಸದಿಂದ ಜನ ಮನ್ನಣೆ ಗಳಿಸಿ ಆರಿಸಿ ಬಂದಿರುವುದು ಎಂದು ಹೇಳಿ ಪ್ರಿಯಾಂಕಾ ಖರ್ಗೆ ಗೆ ಟಾಂಗ್ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.