ಸೂಪರ್ ಸ್ಟಾರ್ ದರ್ಶನ್ ಮಂಗಳೂರಿನ ಕೊರಗಜ್ಜ ದೈವದ ಬಳಿ ಶರಣು; 'ಕಾಪುಡು ಅಜ್ಜ ಎಂದ ದಾಸ'

 | 
Hh

ಸ್ಯಾಂಡಲ್ವುಡ್ ನಟ ದರ್ಶನ್  ಇದೀಗ ಶೂಟಿಂಗ್‌ಗೆ ಬ್ರೇಕ್ ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಚಿಕ್ಕಣ್ಣ , ನಟ ಯಶಸ್ ಸೂರ್ಯ ಕೂಡ ಜೊತೆ ಆಗಿದ್ದಾರೆ.

ದರ್ಶನ್‌ಗೆ ಭೇಟಿ ನೀಡಿದ್ದ ವೇಳೆ ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಸಿ, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದು ಮಾತನಾಡಿದ್ದಾರೆ. 

ಈ ಹಿಂದೆ ಮಂಗಳೂರಿಗೆ ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿ ಇಂದು ಬಂದಿರುವುದಕ್ಕೆ ಬೇರೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಂದು ದರ್ಶನ್ ಮಾಹಿತಿ ನೀಡಿದ್ದಾರೆ.

ಈ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಡೆವಿಲ್ ಸಿನಿಮಾ ಸೇರಿದಂತೆ 9ಕ್ಕೂ ಹೆಚ್ಚು ಚಿತ್ರಗಳನ್ನು ದರ್ಶನ್ ಅನೌನ್ಸ್ ಮಾಡಿದ್ದಾರೆ. ದರ್ಶನ್ ನಟನೆಯ ಸಾಲು ಸಾಲು ಸಿನಿಮಾ ನೋಡುವ ಮೂಲಕ ಕಣ್ಣಿಗೆ ಹಬ್ಬ ಎಂದು ಹೇಳಬಹುದು. ಡಿಬಾಸ್ ಚಿತ್ರಕ್ಕಾಗಿ ಫ್ಯಾನ್ಸ್ ಕೂಡ ಎದುರು ನೋಡ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.