ದಿನ ನಿತ್ಯ ಕೈತುಂಬಾ ಹಣ ಮಾಡಲು ಉಪಾಯ ಹೇಳಿದ ಸ್ವಾಮಿಜಿ, ಒಂದೇ ತಿಂಗಳಿಗೆ ಲಕ್ಷ ಲಕ್ಷ

 | 
Js

ದತ್ತಾತ್ರೇಯ ಎಂದರೆ, ಆತ ತ್ರಿಮೂರ್ತಿಗಳ ಅಂಶಗಳನ್ನೆಲ್ಲ ಒಳಗೊಂಡ ಗುಣರೂಪ. ಬ್ರಹ್ಮ, ವಿಷ್ಣು, ಮಹೇಶ್ವರರ ಶಕ್ತಿಗಯನ್ನು ಒಳಗೊಂಡ ದೊಡ್ಡ ಶಕ್ತಿಶಾಲಿ ದೈವ. ಇದು ಆ ದತ್ತಾತ್ರೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವ ಒಬ್ಬ ಸ್ವಾಮೀಜಿಯ ಕಥೆ.ಈ ದತ್ತಾತ್ರೇಯ ಕೃಪಾ ಕಟಾಕ್ಷ ಪಡೆದಿರುವ ಈ ಸ್ವಾಮೀಜಿಯ ವಯಸ್ಸು ಇನ್ನೂ 30 ದಾಟಿಲ್ಲ. 

ಹೆಸರು ವಿನಯ್. ಭಕ್ತರು ಇವರನ್ನ ವಿನಯ್ ಗುರೂಜಿ ಎಂದೇ ಕರೀತಾರೆ.ಈ ಮಹಾನುಭಾವನ ಪಾದದಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಹಾಲಿ ಸಿಎಂ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ, ಸ್ಪೀಕರ್ ರಮೇಶ್​ ಕುಮಾರ್, ಚಿತ್ರನಟ ದುನಿಯಾ ವಿಜಿ ಹೀಗೆ ಅನೇಕ ಪ್ರಖ್ಯಾತರು ಧನ್ಯತಾಭಾವ ಅನುಭವಿಸಿದ್ದಾರೆ. ಒಂದು ಲೆಕ್ಕಕ್ಕೆ ಇವರು ಸೆಲಬ್ರಿಟಿಗಳ ಸ್ವಾಮೀಜಿ.‌ ಇವರ ಹೆಸರು ವಿನಯ್. ಭಕ್ತರು ಇವರನ್ನು ಕರೆಯೋದು ವಿನಯ್ ಗುರೂಜಿ ಅಂತಾನೇ. 

ಇವರು ಹೇಳೋದೆಲ್ಲ ಸತ್ಯವಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಆ ನಂಬಿಕೆಯಿಂದಾಗಿಯೇ ಇವರು ಇರುವ ಜಾಗಕ್ಕೇ ಹೋಗಿ, ಮಾಜಿ ಪ್ರಧಾನಿಯೇ ಪಾದ ಪೂಜೆ ಮಾಡ್ತಾರೆ. ಸ್ಪೀಕರ್ ರಮೇಶ್ ಕುಮಾರ್​ರಂತಹವರು, ತಮ್ಮ ಮಗನಿಗಿಂತಲೂ ಕಿರಿಯ ವಯಸ್ಸಿನವರಾದ ಇವರ ಪಾದಪೂಜೆ ಮಾಡುತ್ತಾರೆ. ವಿನಯ್ ಗುರೂಜಿ ಎಂಬ ಈ ಯುವಕನ ವಯಸ್ಸು ಈಗಿನ್ನೂ 27. ಸಾಮಾನ್ಯವಾಗಿ ಗುರೂಜಿ, ಸ್ವಾಮೀಜಿ ಎಂದರೆ, ಅವರಿಗೇ ಎಂದು ಒಂದು ವೇಷಭೂಷಣ ಇರುತ್ತೆ. 


ಮೈತುಂಬಾ ಕಾವಿ ತೊಡುವುದು ಅತ್ಯಂತ ಸಹಜ. ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಗಂಧ, ನಾಮಗಳ ಸಮ್ಮಿಶ್ರಣವಾಗಿರ್ತಾರೆ. ಆದರೆ, ಈ ವಿನಯ್ ಗುರೂಜಿ ಹಾಗಲ್ಲ. ಸೀದಾ ಸಾದಾ ಬಟ್ಟೆ. ಜುಬ್ಬಾ ಪಾಯಿಜಾಮ, ಪ್ಯಾಂಟ್ ಷರ್ಟು ಧರಿಸಿಕೊಂಡು ಓಡಾಡುವ ಸರಳಾತಿಸರಳ ವ್ಯಕ್ತಿ ಈ ವಿನಯ್ ಗುರೂಜಿ. ಇವರು ಕೈಯಲ್ಲಿ ಹಣ ನಿಲ್ಲದೆ ಇರಲು ಹಲವು ಕಾರಣಗಳನ್ನು ಹೇಳುತ್ತಾರೆ. ಹೌದು ಒಳ್ಳೆಯ ಗುಣ ಇಲ್ಲದಿದ್ದರೆ. ಕೆಟ್ಟ ಮನಸ್ಥಿತಿ ಹೊಂದಿದ್ದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಮನ ಪರಿವರ್ತನೆ ಹೊಂದಿದರೆ ಹಣ ಕೈಯಲ್ಲಿ ನಿಲ್ಲುತ್ತದೆ ಎಂದಿದ್ದಾರೆ.