ಲಕ್ಷ್ಮಿನಿವಾಸ ಸೀರಿಯಲ್ ನ ಟಿ ಚಂದನ ಅವರು ಬಾಲ್ಯದ ಫೋಟೋ ಎಷ್ಟು ಮುದ್ದಾಗಿದೆ ಗೊ ತ್ತ

 | 
Us

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮಕ್ಕಳ ಮದುವೆ ಮಾಡುವ ಕನಸು ಕಂಡ ತಾಯಿ, ಒಂದು ಮನೆ ಕಟ್ಟುವ ಕನಸು ಕಾಣುವ ತಂದೆ.. ಇಬ್ಬರ ಆಸೆಗಳ ನಡುವೆ ಮಕ್ಕಳ ಜೀವನ ರೂಪಿಸುವ ಜವಾಬ್ದಾರಿಗಳ ಜೊತೆಗೆ ಮಧ್ಯಮ ವರ್ಗವನ್ನು ಪ್ರತಿನಿಧಿಸುತ್ತಿದ್ದು, ವೀಕ್ಷಕರ ಗಮನ ಸೆಳೆಯುತ್ತಿದೆ.

ಸದ್ಯ ಧಾರಾವಾಹಿಯಲ್ಲಿ ಲಕ್ಷ್ಮಿ ಮಗಳು ಜಾಹ್ನವಿ ಮದುವೆಯಾಗಿದೆ. ದೊಡ್ಡ ಶ್ರೀಮಂತನ ಮನೆಗೆ ಮಗಳನ್ನು ಸೊಸೆಯಾಗಿ ಕಳುಹಿಸಿದ್ದಾರೆ. ಆದರೆ, ಆ ಶ್ರೀಮಂತ ಜಯಂತ್ ದೊಡ್ಡ ಸೈಕೊ ರೀತಿ ವರ್ತಿಸುತ್ತಿದ್ದಾನೆ. ಇದರ ನಡುವೆ ಜಾಹ್ನವಿ ಕಷ್ಟಪಡುತ್ತಿದ್ದಾಳೆ. ವೀಕ್ಷಕರು ಜಾಹ್ನವಿಯ ಸ್ಥಿತಿಗೆ ಮರುಗುತ್ತಿದ್ದಾರೆ. ಇದೇ ವೇಳೆ ಜಾಹ್ನವಿ ಮಾತ್ರದಲ್ಲಿ ನಟಿಸುತ್ತಿರುವ ನಟಿ ಚಂದನಾ ಅನಂತಕೃಷ್ಣ ಧಾರಾವಾಹಿಗೆ ಗುಡ್ ಬಾಯ್ ಹೇಳಿದ್ದಾರೆ ಎಂಬ ವದಂತಿ ಹರಡಿದೆ.

ಜನಪ್ರಿಯ ಕನ್ನಡ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಕಿರುತೆರೆ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸದ್ಯ ಅವರನ್ನು ಜನ ಜಾಹ್ನವಿ, ಜಾನ್ವಿ, ಜಾನು ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. ಅದಕ್ಕೆ ಕಾರಣ ಅವರು ನಟಿಸುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಕಿರುತೆರೆ ವೀಕ್ಷಕರು ಹೆಚ್ಚು ಪ್ರಿತಿಯಿಂದ ಅಪ್ಪಿಕೊಂಡಿರುವ ಹೊಸ ಧಾರಾವಾಹಿಗಳಲ್ಲಿ ಲಕ್ಷ್ಮಿ ನಿವಾಸ ಕೂಡ ಒಂದು. ಇದರಲ್ಲಿ ಜಾಹ್ನವಿ ಪಾತ್ರದಲ್ಲಿಚಂದನಾ ಕಾಣಿಸಿಕೊಂಡಿದ್ದಾರೆ.

ಸದ್ಯ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಚಂದನಾ ಅನಂತಕೃಷ್ಣ ಹೊರ ಬಂದಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದೆ. ಇದಕ್ಕೆ ಜಾಹ್ನವಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಅವರು ಸೀರಿಯಲ್‌ನಿಂದ ಹೊರ ಬರೋಕೆ ಸೈಕೊ ಜಯಂತ್ ಕಾರಣ ಎಂದು ಮತ್ತೊಬ್ಬ ಸಹನಟನ ಮೇಲೆ ಆರೋಪ ಹೊರಸಿದ್ದಾರೆ. ಜಯಂತ್ ಜಾನ್ವಿ ಗಂಡನ ಪಾತ್ರದ ಹೆಸರಾಗಿದೆ. ಆದ್ರೆ ಇದೀಗ ಚಂದನಾ ನಾನು ಸೀರಿಯಲ್ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಅವರ ಬಾಲ್ಯದ ಫೋಟೋಗಳನ್ನು ಕೂಡಾ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.