ಮಠದಲ್ಲಿ ಬೆಳೆದ ಸೀರಿಯಲ್ ನ ಟಿಯ ಓಪನ್ ಟಾಕ್; ಸಿ ಡಿದೆದ್ದ ಕರುನಾಡು

 | 
ಹ
ಪಾರು ಧಾರಾವಾಹಿಯ ದಾಮಿನಿ ಪಾತ್ರ ಮಾಡುತ್ತಿರುವ ಸಿತಾರ ಚಿಕ್ಕವರಿದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ರಂತೆ. ಅವರ ಜೀವನ ನೆನೆದು ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಜೀ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗ್ತಿರುವ ಪಾರು ಧಾರಾವಾಹಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಾರು ಧಾರಾವಾಹಿಯಲ್ಲಿ ಕಾಮಿಡಿ ಕಮ್ ವಿಲನ್ ಪಾತ್ರ ಮಾಡಿರೋ ದಾಮಿನಿ ಜನರಿಗೆ ಇಷ್ಟವಾಗಿದ್ದಾರೆ.
ಆದರೆ ನಾವು ಕಾಮಿಡಿಯಾಗಿ ನೋಡುವ ದಾಮಿನಿ ನಡೆದು ಬಂದ ಜೀವನ ತುಂಬಾ ಕಷ್ಟದ್ದಾಗಿದೆ. ಈ ಹಂತಕ್ಕೆ ಬರಲು ಅವರು ತುಂಬಾ ಕಷ್ಟಪಟ್ಟಿದ್ದಾರೆ. ಸಿತಾರ ತಾರಾ ಅವರು 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡ್ರಂತೆ. ಆಗ ಅಜ್ಜಿ ಅವರನ್ನು ಸಾಕಿದ್ರಂತೆ. ಆದ್ರೆ ವಿದ್ಯಾಭ್ಯಸ ಕೊಡಿಸುವಷ್ಟು ಅಜ್ಜಿ ಶಕ್ತಳಾಗಿರಲಿಲ್ವಂತೆ.
ಸಿತಾರ ಅವರನ್ನು ಸಾಣಿ ಹಳ್ಳಿ ಸ್ವಾಮೀಜಿ ದತ್ತು ತೆಗೆದುಕೊಂಡ್ರಂತೆ. ಪ್ರತಿಸಲ ಅನ್ನ ತಿನ್ನುವಾಗಲೂ ನಾನು ಅವರನ್ನು ನೆನಪಿಸಿಕೊಳ್ಳಬೇಕು. ಸಾಣಿ ಹಳ್ಳಿ ಶ್ರೀಗಳನ್ನು ನನ್ನನ್ನು ಸಾಕಿದ್ದು ಎಂದು ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಾರೆ.ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನೀನಾಸಂ ಸಿಕ್ತು. ರಜೆ ಬಿಟ್ರೆ ಮಕ್ಕಳೆಲ್ಲಾ ಊರಿಗೆ ಹೋಗ್ತಾರೆ. ನಾನು ಮಾತ್ರ ಒಬ್ಬಳೇ ಹಾಸ್ಟೆಲ್ ನಲ್ಲಿ ಇರ್ತಿದ್ದೆ. ನನಗೆ ಅಪ್ಪ ಅಮ್ಮ ಇಲ್ಲ ಅನ್ನೋ ನೋವು ತುಂಬಾ ಕಾಡುತ್ತೆ.
ಸಿತಾರ ಅವರಿಗೆ ಕುಟುಂಬ ಅಂದ್ರೆ ಏನು ಅಂತ ಗೊತ್ತೇ ಇರಲಿಲ್ವಂತೆ. ಸ್ನೇಹಿತರು ಹೇಳಿದ ಮೇಲೆ ಗೊತ್ತಾಗಿದ್ದಂತೆ. ಅವರ ಸ್ನೇಹಿತರ ಅಪ್ಪ ಅಮ್ಮ ಎಷ್ಟೂ ಸಾರಿ ಊಟ, ತಿಂಡಿ ತಂದು ಕೊಡುತ್ತಿದ್ದರಂತೆ. ನಾನು ಒಳ್ಳೆ ಪ್ರತಿಭೆ ಅಂತ ಗುರುತಿಸಿಕೊಳ್ಳಲು ಸಾಣಿಹಳ್ಳಿ ಸ್ವಾಮೀಜಿ ಕಾರಣ. ಜೀ ಕನ್ನಡದವರು ನನ್ನ ಪ್ರತಿಭೆ ಗುರುತಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಸಿತಾರ ಹೇಳಿದ್ದಾರೆ.
ದಯವಿಟ್ಟು ನೀವು ಯಾರ ಬಳಿಯೂ ಕಷ್ಟಗಳನ್ನು ಹೇಳಿಕೊಳ್ಳಬೇಡಿ. ಮೈ ಮುಟ್ಟಿ ಮಾತನಾಡುತ್ತಾರೆ.ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನಿಮ್ಮ ಸಾಧನೆ ಮಾತನಾಡಬೇಕು. ನಾವು ಶ್ರಮದ ಬಗ್ಗೆ ಆಲೋಚನೆ ಮಾಡಿ ಸರಿಯಾದ ದಾರಿಯಲ್ಲಿ ಹೋಗಬೇಕು. ನಿಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಅದರ ಮೇಲೆ ಕೆಲಸ ಮಾಡಿ, ಒಬ್ಬರೇ ಇದ್ದವರು ಹಿಂದೆ ಉಳಿಯಬೇಡಿ ಎಂದು ಸಿತಾರಾ ಅವರು ಮಾಧ್ಯಮದ ಮುಂದೆ ಈ ಹಿಂದೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.