ಯುವಕರು ನಾಚುವಂತೆ ಬಟ್ಟೆ ಹಾಕಿಕೊಂಡು ಬಂದ ತಮನ್ನಾ, ನೆಟ್ಟಿಗರು ಫುಲ್ ಫಿದಾ

 | 
Bh

ಬಾಹುಬಲಿ ನಾಯಕಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಸದ್ಯ ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

‘ಜೀ ಕರ್ದಾ’ ವೆಬ್ ಸಿರೀಸ್‌ನಲ್ಲಿ ಸೌಂಡ್ ಮಾಡಿದ ಬಳಿಕ ತಮನ್ನಾ ಅವರು ‘ಲಸ್ಟ್ ಸ್ಟೋರಿಸ್ 2’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆಗಿನ ಪ್ರಾಜೆಕ್ಟ್ ಆಗಿರುವ ಕಾರಣ, ಈ ಜೋಡಿಗೆ ವಿಶೇಷವಾಗಿದೆ. ಇತ್ತೀಚಿಗಷ್ಟೇ ವಿಜಯ್ ವರ್ಮಾ ಜೊತೆಗಿನ ಪ್ರೀತಿಯನ್ನ ತಮನ್ನಾ ಭಾಟಿಯಾ ಅವರು ಅಧಿಕೃತಗೊಳಿಸಿದರು. 

ವಿಜಯ್ ನನ್ನ ಖುಷಿಯ ಖಜಾನೆ ಎಂದು ಖುಷಿಯಿಂದ ನಟಿ ಬಣ್ಣಿಸಿದ್ದರು. ‘ಲಸ್ಟ್ ಸ್ಟೋರಿಸ್ 2’ ಸೆಟ್‌ನಲ್ಲಿ ಮೊದಲ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಇದೀಗ ಸಾಕಷ್ಟು ಸಮಯದಿಂದ ತಮನ್ನಾ-ವಿಜಯ್ ಡೇಟ್ ಮಾಡ್ತಿದ್ದಾರೆ. ಸದ್ಯದಲ್ಲೇ ‘ಲಸ್ಟ್ ಸ್ಟೋರಿಸ್ 2’ ತೆರೆಗೆ ಬರಲಿದೆ.

ತಮನ್ನಾ ಅವರು ಸದ್ಯ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬ್ಲ್ಯಾಕ್ ಬಣ್ಣದ ಧರಿಸಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಫೋಟೋ ನೋಡಿದ ನೆಟ್ಟಿಗರು, ನಿಮ್ಮ ವಯಸ್ಸು 33 ವರ್ಷ ಆಗಿದ್ರೂ ಸ್ವೀಟ್ 16 ಹಂಗೆ ಕಾಣ್ತೀದ್ದೀರಾ ಎಂದು ಕಾಮೆಂಟ್ ಮಾಡ್ತಿದ್ದಾರೆ.