ಅಭಿಮಾನಿಗಳ ಇಚ್ಚೆಯಂತೆ ಬೇಕಾದ ಹಾಗೆ ಸೊಂಟ ಅಲುಗಾಡಿಸಿದ ತಮನ್ನ, ಮೆಚ್ಚಿಕೊಂಡ ಫ್ಯಾನ್ಸ್

 | 
Bbg

ಬಾಹುಬಲಿ ನಾಯಕಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಸದ್ಯ ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೀ ಕರ್ದ ವೆಬ್ ಸಿರೀಸ್‌ನಲ್ಲಿ ಸೌಂಡ್ ಮಾಡಿದ ಬಳಿಕ ತಮನ್ನಾ ಅವರು ‘ಲಸ್ಟ್ ಸ್ಟೋರಿಸ್ 2’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 

ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆಗಿನ ಪ್ರಾಜೆಕ್ಟ್ ಆಗಿರುವ ಕಾರಣ, ಈ ಜೋಡಿಗೆ ವಿಶೇಷವಾಗಿದೆ. ಇತ್ತೀಚಿಗಷ್ಟೇ ವಿಜಯ್ ವರ್ಮಾ ಜೊತೆಗಿನ ಪ್ರೀತಿಯನ್ನು ತಮನ್ನಾ ಭಾಟಿಯಾ ಅವರು ಅಧಿಕೃತಗೊಳಿಸಿದರು. ವಿಜಯ್ ನನ್ನ ಖುಷಿಯ ಖಜಾನೆ ಎಂದು ಖುಷಿಯಿಂದ ನಟಿ ಬಣ್ಣಿಸಿದ್ದರು. ‘ಲಸ್ಟ್ ಸ್ಟೋರಿಸ್ 2’ ಸೆಟ್‌ನಲ್ಲಿ ಮೊದಲ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಇದೀಗ ಸಾಕಷ್ಟು ಸಮಯದಿಂದ ತಮನ್ನಾ-ವಿಜಯ್ ಡೇಟ್ ಮಾಡ್ತಿದ್ದಾರೆ. ಸದ್ಯದಲ್ಲೇ ‘ಲಸ್ಟ್ ಸ್ಟೋರಿಸ್ 2’ ತೆರೆಗೆ ಬರಲಿದೆ.

ತಮನ್ನಾ ಅವರು ಸದ್ಯ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬ್ಲ್ಯಾಕ್ ಬಣ್ಣದ ಧರಿಸಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಫೋಟೋ ನೋಡಿದ ನೆಟ್ಟಿಗರು, ನಿಮ್ಮ ವಯಸ್ಸು 33 ವರ್ಷ ಆಗಿದ್ರೂ ಸ್ವೀಟ್ 16 ಹಂಗೆ ಕಾಣ್ತೀದ್ದೀರಾ ಎಂದು ಕಾಮೆಂಟ್ ಮಾಡ್ತಿದ್ದಾರೆ. 

ತಮನ್ನಾ ತಮ್ಮ 13ನೇ ವಯಸ್ಸಿನಲ್ಲಿಯೇ ನಟನೆಗೆ ಇಳಿದರು. 2005ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ‘ಚಾಂದ್ ಸಾ ರೋಷನ್ ಚೆಹರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ತಮನ್ನಾಗೆ ಇನ್ನಷ್ಟು ಖ್ಯಾತಿ ನೀಡಿದವು. ‘ಕೊಂಚಂ ಇಷ್ಟಂ ಕೊಂಚಂ ಕಷ್ಟಂ’, ಪೈಯ್ಯ, 100 % ಲವ್, ಬದ್ರಿನಾಥ್ ಮುಂತಾದ ಚಿತ್ರಗಳು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ತಮನ್ನಾಗೆ ಭದ್ರವಾದ ತಳಪಾಯ ಹಾಕಿದವು. 

ಹಿಂದಿಯಲ್ಲಿ ‘ಹಿಮ್ಮತ್ತವಾಲಾʼ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಎರಡು ಭಾಗಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರ ತಮನ್ನಾಗೆ ಭಾರತದಾದ್ಯಂತ ಜನಪ್ರಿಯತೆ ತಂದು ಕೊಟ್ಟಿತು.ಇದೀಗ ಹಾಟ್ ಡ್ರೆಸ್ ಮೂಲಕ ಹಲವರ ನಿದ್ದೆ ಕದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.