ವರ್ತೂರು ಸಂತು ಜೊತೆ ತನಿಷಾ ಕುಚುಕುಚು, ಹೋಟೆಲ್ ನಲ್ಲಿ ಪ್ರೇಮ ಪಯಣ

 | 
ರಪು

ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ಅವರಿಬ್ಬರೂ ಬೆಸ್ಟ್ ಫ್ರಂಡ್ಸ್‌ ಎಂಬುದು ಬಹುತೇಕ ಎಲ್ಲರಗೂ ಗೊತ್ತು. ಬಿಗ್ ಬಾಸ್ ಕನ್ನಡದ ಸೀಸನ್ 10ರಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ಇಬ್ಬರೂ ಸ್ಪರ್ಧಿಗಳಾಗಿದ್ದರು. ಅವರಿಬ್ಬರ ಮಧ್ಯೆ ಪ್ರೀತಿ ಅಥವಾ ದ್ವೇಷವಿಲ್ಲದ ಒಂದು ಅರ್ಥಪೂರ್ಣವಾದ ಸ್ನೇಹವಿತ್ತು ಎನ್ನಬಹುದು. ಅಲ್ಲಿದ್ದ ಎಲ್ಲರೂ ಗೆಲ್ಲಲೆಂದೇ ಹೊರಟಿದ್ದರೂ, ತನಿಷಾ ಮತ್ತು ವರ್ತೂರು ಸಂತೋಷ್ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದರೂ ಅವರಿಬ್ಬರಲ್ಲಿ ಆ ಭಾವನೆ ಹೆಚ್ಚೇನೂ ಇರಲಿಲ್ಲ. 

ಟಾಸ್ಕ್‌ ಬಂದಾಗ ಇಬ್ಬರೂ ಗೆಲ್ಲಲೆಂದು ಆಡುತ್ತಿದ್ದರೂ ಅದು ಮುಗಿದ ಮೇಲೆ ಫ್ರೆಂಡ್ಸ್ ತರಹ ಇರುತ್ತಿದ್ದರು. ತನಿಷಾ ಅವರು ವರ್ತೂರು ಅವರಿಗಿಂತ ಸ್ವಲ್ಪ ದಿನಗಳ ಮೊದಲು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬರುವ ವೇಳೆ ತನಿಷಾ ಅಲ್ಲಿದ್ದವರಿಗೆ ಬೇಸರ ಮಿಶ್ರಿತ ಕೋಪದಲ್ಲಿ ನಿಮ್ಗೆಲ್ಲಾ ನನ್ನ ಧ್ವನಿ ಇರಿಟೇಟ್ ಆಗ್ತಿತ್ತು ಅಲ್ವಾ? ಇನ್ಮುಂದೆ ಈ ಮನೆಯಲ್ಲಿ ನಿಮ್ಗೆ ನನ್ನ ಧ್ವನಿ ಕೇಳಿಸಲ್ಲಾ ಎಂದು ಕಣ್ಣೀರು ಸುರಿಸುತ್ತಾ ಹೇಳಿ ಬಂದಿದ್ದರು. 

ತನಿಷಾ ಮಾತು ಕೇಳಿ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಸ್ಟನ್ ಆಗಿ ಕಂಬದಂತೆ ನಿಂತುಬಿಟ್ಟಿದ್ದರು. ಆದರೆ, ತನಿಷಾರ ಆಕ್ರೋಶ ತಾವು ಬಿಗ್ ಬಾಸ್ ಮನೆಯಿಂದ ಅನಿರೀಕ್ಷಿತವಾಗಿ ಹೋರಹೋಗಬೇಕಾಗಿ ಬಂದ ಕ್ಷಣಕ್ಕೆ ಆ ಕ್ಷಣ ಬಂದ ಪ್ರತಿಕ್ರಿಯೆ ಎನ್ನಬೇಕು, ಈಗ ತನಿಷಾ ತಣ್ಣಗಾಗಿದ್ದಾರೆರೆ.ಬಿಗ್ ಬಾಸ್ ಸೀಸನ್ ಕನ್ನಡ 10 ಮುಗಿದು ಈಗ ಕಾರ್ತಿಕ್ ವಿನ್ನರ್ ಹಾಗೂ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಕಾರ್ತಿಕ್ ಹಾಗೂ ತನಿಷಾ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ಭೇಟಿಯಾಗಿ ಮಾತುಕತೆ-ಹರಟೆ ನಡೆಸಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. 

ಜತೆಗೆ, ವರ್ತೂರು ಸಂತೋಷ್ ತನಿಷಾರ ಹೊಟೆಲ್‌ಗೆ ಭೇಟಿ ಕೊಟ್ಟು, ತನಿಷಾ ಹಾಗೂ ಅಲ್ಲಿದ್ದವರ ಜತೆ ಹರಟೆ ಸಹಿತ ಹಾಯಾಹಿ ಕಾಲ ಕಳೆದು ಬಂದಿದ್ದಾರೆ. ತನಿಷಾ ಹಾಗು ವರ್ತೂರು ಸಂತೋಷ್ ಭೇಟಿಯ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗತೊಡಗಿವೆ. ತನಿಷಾ ಹೊಟೆಲ್ ತಿಂಡಿ ತಿಂದು, ತುಂಬಾ ಚೆನ್ನಗಿದೆ ಅಂತ ಹೇಳಿ ಬಂದಿದ್ದಾರೆ. 

ತನಿಷಾ-ವರ್ತೂರು ಸಂತೋಷ್ ಅವರಿಬ್ಬರ ಅಪೂರ್ವ ಸ್ನೇಹಕ್ಕೆ ಸಾಕ್ಷಿಯಾಗಿ ಈ ಬೇಟಿಯೀಗ ಭಾರೀ ವೈರಲ್ ಆಗತೊಡಗಿದೆ. 'ನಮ್ಮಿಬ್ಬರ ಮಧ್ಯೆ ಲವ್ ಇಲ್ಲ, ಮ್ಯಾರೇಜ್ ಮಾಡಿಕೊಳ್ಳವ ಯೋಚನೆಯೂ ಇಲ್ಲ, ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ' ಎಂದು ಇಬ್ಬರೂ ಬಾಯಿ ಬಿಟ್ಟು ಹೇಳಿದ್ದಾರೆ. ಹೀಗಾಗಿ ಸ್ನೇಹಕ್ಕೆ ಹೊರತಪಡಿಸಿದ ಯಾವುದೇ ಸುದ್ದಿಗೆ ಅವಕಾಶವಿಲ್ಲ  ಎನ್ನಬಹುದು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.